ಬಂಗಾರಪೇಟೆ: ಮೋದಿ ರವರನ್ನು 3ನೇ ಬಾರಿ ಪ್ರಧಾನಿಯನ್ನಾಗಿಸಲು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ಮಲ್ಲೇಶ್ ಬಾಬುರವರನ್ನು ದೆಹಲಿ ಸಂಸತ್ತಿನ ಸದಸ್ಯರನ್ನಾಗಿಸಬೇಕು, ಆದ ಕಾರಣ ಮೈತ್ರಿ ಪಕ್ಷದ ಮುಖಂಡರು ಒಗ್ಗಟ್ಟಿನ ಮೃಲಕ ವಿಜಯ ಸಂಕಲ್ಪ ದೊಂದಿಗೆ ಮತಯಾಚನೆ ಮಾಡುತ್ತಿದ್ದೇವೆ, ಎಂದು ಮಾಜಿ ಶಾಸಕ ಬಿ.ಪಿ. ವೆಂಕಟ ಮುನಿಯಪ್ಪ ತಿಳಿಸಿದರು.
ಪಟ್ಟಣದ ಶಾಂತಿನಗರದಲ್ಲಿರುವ ಶ್ರೀ ವೆಂಕಟರಾಮಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ವಿಜಯನಗರ ಮತ್ತು ಬಜಾರ್ ರಸ್ತೆಯಲ್ಲಿ ಸಂಸದ ಎಸ್ ಮುನಿಸ್ವಾಮಿ ರವರ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಬಿರುಸಿನ ಮತಯಾಚನೆ ಮಾಡಿದರು, ಈ ಸಂದರ್ಭದಲ್ಲಿ ಮಾತನಾಡಿದ ಅವರು ಸೂರ್ಯ ಮತ್ತು ಚಂದ್ರರಿರುವುದು ಎಷ್ಟು ಸತ್ಯವೋ ಮಲ್ಲೇಶ್ ಬಾಬುರವರು ಈ ಬಾರಿ 3 ಲಕ್ಷ ಮತಗಳ ಅಂತರದಿಂದ ಜಯಗಳಿಸುವುದು ಅಷ್ಟೇ ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದಿಗ್ಗಜರು ಶ್ರೀರಕ್ಷೆ, ವಿಜಯಮಾಲೆ: ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಮುನಿರಾಜು ಮಾತನಾಡಿ ಬಿಜೆಪಿ ಪಕ್ಷದ ನಾಯಕರ ಸಂಪೂರ್ಣ ಬೆಂಬಲ ನಮಗೆ ಸಿಕ್ಕಿರುವುದರಿಂದ ಮತ್ರಿ ಪಕ್ಷ ಬಲಿಷ್ಠಗೊಂಡಿದೆ. ಹಾಗೂ 48 ವರ್ಷಗಳಿಗಿಂತ ರಾಜಕಾರಣ ಮಾಡಿರುವ ದಿಗ್ಗಜ ನಾಯಕರ ಅನುಭವ ನಮಗೆ ಶ್ರೀರಕ್ಷೆಯಾಗಲಿದ್ದು ಈ ಬಾರಿ ಮಲ್ಲೇಶ್ ಬಾಬುರವರು ವಿಜಯಪತಾಕೆ ಹಾರಿಸಲಿದ್ದಾರೆ, ಮಲ್ಲೇಶ್ ಬಾಬುರವರು ಎರಡು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಅಲ್ಪ ಮತಗಳ ಅಂತರದಿಂದ ಪರಾಜಿತಗೊಂಡಿದ್ದರು,
ಇಲ್ಲಿನ ಜನರ ವಿಶ್ವಾಸ ಬೆಂಬಲ ಜೆಡಿಎಸ್ ಪಕ್ಷಕ್ಕೆ ಇರುವುದರಿಂದ ಮತ್ತು ಬಿಜೆಪಿ ಕಾರ್ಯಕರ್ತರು ಮುಖಂಡರು ನಾಯಕರ ಸಹಕಾರದೊಂದಿಗೆ ಮಲ್ಲೇಶ್ ಬಾಬುರವರು ಸಂಸತ್ ಪ್ರವೇಶಿಸಲಿದ್ದಾರೆ ಎಂದು ತಿಳಿಸಿದರು.ಎಂಟು ವಿಧಾನಸಭಾ ಕ್ಷೇತ್ರಗಳ ಪ್ರತಿನಿಧಿಯಾಗಿ ಮಲ್ಲೇಶ್ ಬಾಬು: ಬಿಜೆಪಿ ಪಕ್ಷದ ಹಿರಿಯ ಮುಖಂಡ ಕೆ.ಚಂದ್ರಾರೆಡ್ಡಿ ಮಾತನಾಡಿ,ಕೋಲಾರ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಜನರ ಧ್ವನಿಯಾಗಿ 8 ವಿಧಾನಸಭಾ ಕ್ಷೇತ್ರಗಳ ಪ್ರತಿನಿಧಿಯಾಗಿ ಮಲ್ಲೇಶ್ ಬಾಬುರವರಿಗೆ ಮತ ಚಲಾಯಿಸಿ ಸಂಸದರನ್ನಾಗಿ ಮಾಡಬೇಕು.
ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾದ ಹಿನ್ನೆಲೆ ಇ.ವಿ.ಎಂ. ಮತಯಂತ್ರದಲ್ಲಿ ಕಮಲದ ಚಿನ್ಹೆ ಇರುವುದಿಲ್ಲ, ಕಾರ್ಯಕರ್ತರು ಯಾವುದೇ ಗೊಂದಲಕ್ಕೆ ಒಳಗಾಗದೆ ಜೆಡಿಎಸ್ ಪಕ್ಷದ ಚಿನ್ಹೆ ತೆನೆಹೊತ್ತ ರೈತ ಮಹಿಳೆಗೆ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ವಿ. ಮಹೇಶ್ ಮಾತನಾಡಿ ಈಗಾಗಲೇ ಗ್ರಾಮೀಣ ಭಾಗದ ಪ್ರತಿಯೊಂದು ಬೂತ್ ಮಟ್ಟದಲ್ಲಿ ಪ್ರಚಾರ ಕಾರ್ಯ ಪ್ರಾರಂಭವಾಗಿದೆ, ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ತನ್ನದೇ ಪ್ರಾಬಲ್ಯವನ್ನು ಹೊಂದಿದ್ದು ಬಲಿಷ್ಠವಾಗಿದೆ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮತದಾನದ ಮೂಲಕ ವಿರೋಧ ಪಕ್ಷಗಳಿಗೆ ತಕ್ಕ ಉತ್ತರ ನೀಡಲಿದ್ದೇವೆ ಎಂದರು.
ಈ ವೇಳೆ ಸಂಸದ ಎಸ್ ಮುನಿಸ್ವಾಮಿ ಮಾಜಿ ಶಾಸಕ ಎಂ ನಾರಾಯಣಸ್ವಾಮಿ, ಬಿಜೆಪಿ ಮಂಡಲ ಅಧ್ಯಕ್ಷ ಸಂಪಂಗಿ ರೆಡ್ಡಿ, ನಗರ ಘಟಕ ಅಧ್ಯಕ್ಷ ಕೃಷ್ಣ ಮೂರ್ತಿ, ಎಸ್ ಸಿ. ಮೋರ್ಚ ಜಿಲ್ಲಾಧ್ಯಕ್ಷ ಕಪಾಲಿ ಶಂಕರ್, ಪುರಸಭಾ ಸದಸ್ಯ ಸುನಿಲ್, ಜೆಡಿಎಸ್ ಮುಖಂಡರಾದ ಮುನಿಯಪ್ಪ, ಬಾಲಚಂದ್ರ, ಶಿವಕುಮಾರ್, ರಾವ್, ಬಿಂದು ಮಾಧವ, ಅಮರೇಶ್, ಇತರರು ಉಪಸ್ಥಿತರಿದ್ದರು.