ರಾಮನಗರ: ಸರಿಯಾದ ಪ್ರಶ್ನೆಗಳನ್ನು ಕೇಳಲು ಸಾಧ್ಯವಾಗದಿದ್ದರೂ ಚಿಂತಿಸಬೇಡಿ, ಸಕ್ರಿಯವಾಗಿರಿ, ನಿಮ್ಮ ಮೇಲೆ ನೀವು ನಂಬಿಕೆ ಇಡಿ, ಸರ್ಕಾರಿ ಕೋಟದಲ್ಲಿ ಸರ್ಕಾರಿ ಇಂಜಿನಿಯರಿAಗ್ ಕಾಲೇಜಿನಲ್ಲಿ ಓದುತ್ತಿರುವ ಬಗ್ಗೆ ಹೀನಭಾವನೆ ಬೇಡ. ಉತ್ತಮ ಅಂಕಗಳನ್ನು ಗಳಿಸಿದ್ದರಿಂದಲೇ ಇಲ್ಲಿಗೆ ಆಯ್ಕೆಯಾಗಿದ್ದೀರಿ, ನಿಮ್ಮಲ್ಲಿ ಪ್ರತಿಭೆ ಇದೆ ಅದನ್ನು ಬಳಸಿಕೊಳ್ಳಿ ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ ಇಲ್ಲಿನ ಸರ್ಕಾರಿ ಇಂಜಿನಿಯರಿAಗ್ ಕಾಲೇಜು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದ ಹೊರವಲಯದಲ್ಲಿರುವ ಸರ್ಕಾರಿ ಇಂಜಿನಿಯರಿAಗ್ ಕಾಲೇಜಿನಲ್ಲಿ ಮೈಕ್ರೋಸಾಫ್ಟ್ ಮತ್ತು ಸ್ಯಾಪ್ ಸಂಸ್ಥೆಗಳು ಸ್ಥಾಪಿಸಿರುವ ಎಐ-ಸೆಂಟರ್ ಆಫ್ ಎಕ್ಸೆಲೆನ್ಸ್ ಮತ್ತು ಸೈಮನ್ಸ್ ಕಂಪನಿಯವರು ಸ್ಥಾಪಿಸಿರುವ ಇನ್ನೋವೇಷನ್ ಹಬ್ಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇದೀಗ ಶೈಕ್ಷಣಿಕ ಕ್ಷೇತ್ರದಲ್ಲಿ ಕಾಲ ಬದಲಾಗಿದೆ. ಕೇವಲ ಸಿದ್ಧಾಂತ ಜ್ಞಾನಕ್ಕಿಂತ ಪ್ರಾಯೋಗಿಕ ಮತ್ತು ಅನುಭವಾತ್ಮಕ ಕಲಿಕೆಗೆ ಹೆಚ್ಚಿನ ಮಹತ್ವವಿದೆ. ಈ ನಿಟ್ಟಿನಲ್ಲಿ ಸರ್ಕಾರ ಹೆಚ್ಚು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಇದನ್ನು ವಿದ್ಯಾರ್ಥಿಗಳು ಗಮನಿಸಬೇಕು ಎಂದರು. ಇಂಗ್ಲಿಷ್ನಲ್ಲಿ ಸರಾಗವಾಗಿ ಮಾತನಾಡುವ ಸಾಮರ್ಥ್ಯ ಇಲ್ಲದಿದ್ದರೆ, ನೀವು ಪಡೆದ ಜ್ಞಾನದಿಂದ ಉದ್ಯೋಗ ಮಾರುಕಟ್ಟೆಯಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ. ಆದ್ದರಿಂದ ಇಂಗ್ಲಿಷ್ ದಕ್ಷತೆ ಬಹಳ ಮುಖ್ಯವಾಗಿದೆ ಎಂಬುದನ್ನು ಅರಿಯಬೇಕು ಎಂದ ಸಚಿವರ ಡಾ.ಸುಧಾಕರ್, ತಾವು ಕೆಲವು ವಿದ್ಯಾರ್ಥಿಗಳೊಂದಿಗೆ ಮಾತನಾಡುವಾಗ ಕೆಲವರು ಉತ್ತಮ ಇಂಗ್ಲಿಷ್ನಲ್ಲಿ ಪ್ರತಿಕ್ರಿಯೆ ನೀಡಿದರು. ಆದರೆ ಕೆಲವರು ಮಾತನಾಡಲು ಸ್ವಲ್ಪ ಹಿಂಜರಿಯುತ್ತಿದ್ದರು. ಗ್ರಾಮೀಣ ಹಿನ್ನಲೆಯಿಂದ ಬಂದಿದ್ದೇವೆ ಎಂಬ ಭಾವನೆಯೂ ಬೇಡ. ಶ್ರಮ ಮತ್ತು ಪ್ರಯತ್ನದಿಂದ ಯಾವುದನ್ನಾದರೂ ಕಲಿಯಬಹುದು. ಆದ್ದರಿಂದ ಆತ್ಮವಿಶ್ವಾಸವನ್ನು ಹೊಂದಿರಿ. ನಿಮ್ಮ ಮೇಲೆ ನಂಬಿಕೆ ಇಡಿ ಎಂದು ಪ್ರೋತ್ಸಾಹಿಸಿದರು.
ತಮ್ಮ ಇಲಾಖೆ ಬ್ರಿಟೀಷ್ ಕೌನ್ಸಿಲ್ ಮತ್ತು ಮೈಕ್ರೋಸಾಫ್ಟ್ ಸಂಸ್ಥೆಗಳ ಮೂಲಕ ಯುವ ಸಮುದಾಯದಲ್ಲಿ ಆಂಗ್ಲ ಭಾಷೆಯಲ್ಲಿ ಕೌಶಲಗಳನ್ನು ರೂಢಿಸಲು ಕಾರ್ಯಕ್ರಮವನ್ನು ಆಯೋಜಿಸಿದ್ದೆವು. ಎಲ್ಲಾ ಸರ್ಕಾರಿ ಇಂಜಿನಿಯರಿAಗ್ ಕಾಲೇಜುಗಳು ಹಾಗೂ ಪದವಿ ಕಾಲೇಜುಗಳನ್ನೂ ಒಳಗೊಂಡAತೆ ಆಂಗ್ಲ ಭಾಷೆಯಲ್ಲಿ ಕೌಶಲ ರೂಢಿಸುವ ಕಾರ್ಯಕ್ರಮವನ್ನು ವಿಸ್ತರಿಸಲು ಉದ್ದೇಶಿಸಿದ್ದೇವೆ ಎಂದರು. ವಿದ್ಯಾರ್ಥಿಗಳು ಈ ಕಾರ್ಯಕ್ರಮವನ್ನು ಅನುಸರಿಸಿ, ತರಬೇತಿಯನ್ನು ಪಡೆದುಕೊಳ್ಳುವ ಮೂಲಕ ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು. ಹಂತ ಹಂತವಾಗಿ ರಾಮನಗರದ ಸರ್ಕಾರಿ ಕಾಲೇಜಿಗೂ ಈ ಕಾರ್ಯಕ್ರಮ ವಿಸ್ತರಣೆಯಾಗುವ ವಿಶ್ವಾಸವಿದೆ ಎಂದರು.
ಸರ್ಕಾರಿ ಪದವಿ ಕಾಲೇಜುಗಳನ್ನು ಮತ್ತು ಇಂಜನಿಯರಿAಗ್ ಕಾಲೇಜುಗಳಲ್ಲಿ ಕೈಗಾರಿಕಾ ಸಂಸ್ಥೆಗಳು ಶ್ರೇಷ್ಠತೆಯ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಿದ್ದಾರೆ. ಇದು ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಬಹಳ ಉಪಯೋಗವಾಗುತ್ತದೆ. ಈ ಮುಂದಾಳತ್ವವು ಅವರಿಗೆ ಮುಂದಿನ ಹಂತಕ್ಕೆ ಸಾಗಲು ಅಗತ್ಯವಾದ ಕೌಶಲ್ಯಗಳನ್ನು ನೀಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನಾವು ಎಲ್ಲರೂ ನಿರೀಕ್ಷಿಸುವುದು ಇದೇ, ಮತ್ತು ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರಿ ಇಂಜಿನಿಯರಿAಗ್ ಕಾಲೇಜುಗಳು ವೈದ್ಯಕೀಯ ಕಾಲೇಜುಗಳಷ್ಟು ಬೇಡಿಕೆಯಲ್ಲಿರಲಿ ಎಂದು ಅವರು ಆಶಯ ವ್ಯಕ್ತಪಡಿಸಿದರು.
ಕೃತಕ ಬುದ್ದಿಮತ್ತೆ ಕ್ಷೇತ್ರದ ಮೂಲಕ ಮಹಿಳೆಯರು ಉದ್ಯೋಗಾವಕಾಶಗಳನ್ನು ಪಡೆಯುವ ಸಲುವಾಗಿ ಮಹಿಳೆಯರಿಗಾಗಿ ಕೃತಕ ಬುದ್ದಿಮತ್ತೆ ವೃತ್ತಿ ಕೇಂದ್ರಗಳನ್ನು ಮೈಕ್ರೋಸಾಫ್ಟ್ ಮತ್ತು ಸ್ಯಾಪ್ ಸಂಸ್ಥೆಗಳ ಮುಂದಾಳತ್ವದಲ್ಲಿ ಸ್ಥಾಪಿಸುವ ಉದ್ದೇಶಗಳಿವೆ. ಸರ್ಕಾರಿ ಇಂಜಿನಿಯರಿAಗ್ ಕಾಲೇಜುಗಳಲ್ಲಿ ಈ ಕೇಂದ್ರ ಸ್ಥಾಪನೆಯಾಗಲಿದೆ ಎಂದರು.
ಸೈಮನ್ಸ್ ಮತ್ತು ಸ್ಮೈಲ್ ಫೌಂಡೇಷನ್ ಸಂಸ್ಥೆಗಳನ್ನು ಶ್ಲಾಘಿಸಿದ ಸಚಿವರು, ಈ ಸಂಸ್ಥೆಗಳು ?ಟೆಕ್ ಫಾರ್ ಸೊಸೈಟಿ? ಎಂಬ ಕಾರ್ಯಕ್ರಮವನ್ನು ಜಾರಿಗೆ ತರುತ್ತಿವೆ. ಇದು ಇಂಜಿನಿಯರಿAಗ್ ಶಿಕ್ಷಣದಲ್ಲಿ ಹೊಸ ಅವಿಷ್ಕಾರವನ್ನು ನಿರ್ಮಿಸಲಿದೆ ಎಂದರು.
ಮೆಕ್ಯಾನಿಕಲ್ ಇಂಜಿನಿಯರಿAಗ್ ಬಗ್ಗೆ ಹೇಳುವುದಾದರೆ, ಇದು ಎಲ್ಲಾ ಕ್ಷೇತ್ರಗಳಿಗೂ ಮೂಲವಾಗಿದೆ. ಏರೋಸ್ಪೇಸ್ ಅಥವಾ ಇತರೆ ತಂತ್ರಜ್ಞಾನಗಳಲ್ಲಿ ಯಾವುದಾದರೂ ಭಾಗ ತಯಾರಿಸಲು ಮೆಕ್ಯಾನಿಕಲ್ ಜ್ಞಾನ ಅಗತ್ಯವಿದೆ. ನಾವು ಈ ತಂತ್ರಜ್ಞಾನಗಳನ್ನು ಪಠ್ಯಕ್ರಮಕ್ಕೆ ತರಬೇಕು ಮತ್ತು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವ ನೀಡಬೇಕು. ಅವರು ಸಾಧನಗಳನ್ನು ಬಳಸುವ ಮೂಲಕ ಸಮಾಜದ ಸವಾಲುಗಳನ್ನು ಎದುರಿಸಲು ಸಿದ್ಧರಾಗಬೇಕು ಎಂದರು.
ಇದೇ ಮೇ ತಿಂಗಳ 15 ಮತ್ತು 16ರಂದು `ಅ2ಅ ಎಂಬ ಸಮ್ಮೇಳನವನ್ನು ಆಯೋಜಿಸಿರುವುದಾಗಿ ಸಚಿವರು ಪ್ರಕಟಿಸಿದರು. ಈ ಸಮ್ಮೇಳನ ಉದ್ಯಮ ಮತ್ತು ಶಿಕ್ಷಣ ಸಂಸ್ಥೆಗಳ ಸಹಕಾರಕ್ಕಾಗಿ ಏರ್ಪಡಿಸಲಾಗಿದೆ. ಉದ್ಯಮಗಳಿಗೆ ನಮ್ಮ ಸೌಲಭ್ಯಗಳನ್ನು ಬಳಸಿಕೊಳ್ಳಲು ಅವಕಾಶ ನೀಡಲಾಗುತ್ತದೆ, ಇದರಿಂದ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ಮತ್ತು ಕೌಶಲ್ಯಾಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಸಚಿವರು ಪ್ರತಿಪಾದಿಸಿದರು.
ರೋಟರಿ ಇಂಟರ್ನಾ್ಯಷನಲ್ ಸಂಸ್ಥೆ ರಾಜ್ಯದ ವಿವಿಧ ಕಾಲೇಜುಗಳಿಗೆ 5000 ಕಂಪ್ಯೂಟರ್ಗಳನ್ನು ಕೊಡುಗೆ ನೀಡಿದೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ರಾಮನಗರ ಶಾಸಕ ಇಕ್ಬಾಲ್ ಹುಸೇನ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರಾದ ಕುಮಾರಿ ಮಂಜುಶ್ರೀ, ತಾಂತ್ರಿಕ ಶಿಕ್ಷಣದ ಹೆಚ್ಚುವರಿ ನಿರ್ದೇಶಕರಾದ ನಾಗಭೂಷಣ್, ಪ್ರಾಂಶುಪಾಲ ಜಿ.ಪುಂಡರೀಕ, ಮೈಕ್ರಸಾಫ್ಟ÷್ನ ಸಿಎಸ್ಆರ್ ವಿಭಾಗದ ವ್ಯವಸ್ಥಾಪಕ ಕಿಶೋಕ್ ಕುಮಾರ್, ಸ್ಯಾಪ್ನ ಪ್ರಾಡಕ್ಟ್ ಸಪೋರ್ಟ್ ವಿಭಾಗದ ವಾಸಿಂ ಉಲ್ಲಾ ಖಾನ್, ಎಡುನೆಟ್ ಉಪಾಧ್ಯಕ್ಷ ವೈಭವ್ ವತ್ಸಲ್, ಸೈಮೆನ್ಸ್ ಕಂಪನಿಯ ರಿಸರ್ಚ್ ಆಂಡ್ ಡೆವೆಲಪ್ಮೆಂಟ್ ಟೆಕ್ನಾಲಜಿಯ ಉಪಾಧ್ಯಕ್ಷರಾದ ಸುಜಾತ ಮುಕುಂದನ್, ಸ್ಮೈಲ್ ಫೌಂಡೇಷನ್ನ ಪ್ರಮುಖರಾದ ಸೀಮಂತ್ ಕುಮಾರ್, ರೇಷ್ಮ ಗುಪ್ತ, ಟೊಯೋಟಾ ಸಂಸ್ಥೆಯ ಉಪಾಧ್ಯಕ್ಷ ರಮೇಶ್ ರಾವ್, ಜನರಲ್ ಮೇನೇಜರ್ ಕಿರಣ್ ಉಪಸ್ಥಿತರಿದ್ದರು.
`ವಿದ್ಯಾರ್ಥಿಗಳೇ ನಿಮ್ಮ ಮೇಲೆ ನೀವು ನಂಬಿಕೆ ಇಡಿ’



