ಕನಕಪುರ:ರೈತರ ಜೀವನ ಹಸನಾಗುಸಲು ಇರುವ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆಸುವ ಮೂಲಕ ಸಂಘದ ಮಾಜಿ ಅಧ್ಯಕ್ಷ ಶಂಭುಲಿAಗೇಗೌಡ ಗ್ರಾಮದ ರೈತರಿಗೆ ವಂಚನೆ ಎಸಗಿದ್ದಾರೆ ಎಂದು ಟಿ. ಬೇಕುಪ್ಪೆ ಗ್ರಾಮದ ರೈತರು ಆರೋಪಿಸಿದ್ದಾರೆ.
ತಾಲ್ಲೂಕಿನ ಕಸಬಾ ಹೋಬಳಿಯ ಟಿ. ಬೇಕುಪ್ಪೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕಳೆದ ಒಂದು ವರ್ಷದಿಂದ ಸಂಘದ ಮಾಜಿ ಅಧ್ಯಕ್ಷರು ತಮ್ಮ ಮಗಳ ಹೆಸರಿನಲ್ಲಿ ಖಾತೆಯನ್ನು ತೆರೆದು ಹಾಲು ಸರಬರಾಜು ಮಾಡುತ್ತಿರುವುದಾಗಿ ತೋರಿಸಿ ಸುಮಾರು 3 ಲಕ್ಷದ 84 ಸಾವಿರ ರೂಪಾಯಿ ಹಣವನ್ನು ತಮ್ಮ ಮಗಳು ಕಾವ್ಯಶ್ರೀ ಹೆಸರಿನಲ್ಲಿರುವ ಯೂನಿಯನ್ ಬ್ಯಾಂಕ್ ನ ಖಾತೆಗೆ ವರ್ಗಾಯಿಸಿರುವುದಾಗಿ ಆರೋಪಿಸಿದ್ದಾರೆ.
ಟಿ. ಬೇಕುಪ್ಪೆ ಗ್ರಾಮದ ಹಾಲು ಉತ್ಪಾದಕರ ಸಂಘದ ಬಳಿ ಮಾತನಾಡಿದ ಗ್ರಾಮಸ್ಥರು ಈ ಅವ್ಯವಹಾರದಲ್ಲಿ ಮಾಜಿ ಅಧ್ಯಕ್ಷರು, ನಿರ್ದೇಶಕರು ಗಳು ಶಾಮೀಲಾಗಿದ್ದು ಈ ಬಗ್ಗೆ ಡೈರಿ ಉಪ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು ಯಾವುದೇ ರೀತಿ ಪ್ರಯೋಜನವಾಗಿಲ್ಲ,ಗ್ರಾಮದ (60) ಅರವತ್ತು ರೈತರಿಂದ ಪ್ರತಿ ನಿತ್ಯ ಬೆಳ್ಳಗೆ ಮತ್ತು ಸಂಜೆ ಸೇರಿ ಸುಮಾರು 1500 ಸಾವಿರ ಲೀಟರ್ ಹಾಲು ಸಂಗ್ರಹ ವಾಗುತ್ತಿದ್ದು ಹಾಲಿನ ಪ್ರಮಾಣ ಅಳತೆ ಮಾಡುವ ಯಂತ್ರ ದಲ್ಲಿ ದೋಷವಿದ್ದು ಹತ್ತು ಲೀಟರ್ ಹಾಲಿಗೆ ಮುನ್ನೂರು ಮಿ.ಲಿ ಕಡಿಮೆ ಅಳತೆ ತೋರಿಸುವುದರಿಂದ ರೈತರಿಗೆ ಬಾರಿ ನಷ್ಟವಾಗುತ್ತಿದೆ, ಈ ಬಗ್ಗೆ ಹಲವು ಸಲ ದೂರು ನೀಡಿದರೂ ಏನು ಪ್ರಯೋಜನವಾಗಿಲ್ಲ ನೂತನ ಆಡಳಿತ ಮಂಡಳಿಅಧಿಕಾರಕ್ಕೆ ಬಂದ ಮೇಲೆ ಈ ಅವ್ಯವಹಾರಗಳು ಬೆಳಕಿಗೆ ಬಂದಿದ್ದು ಡೈರಿ ಕಾರ್ಯದರ್ಶಿ ಶಿವಕುಮಾರ್ ಗೆ ದಾಖಲಾತಿ ನೀಡುವಂತೆ ಅಧ್ಯಕ್ಷರು ಕೇಳಿದರೂ ಸಹ ಯಾವುದೇ ದಾಖಲಾತಿಗಳನ್ನು ನೀಡದಿರುವುದು ಹಲವು ಅನುಮಾನ ಮೂಡುತ್ತಿದೆ, ಅಲ್ಲದೆ ಹಾಲು ಸರಬರಾಜು ಮಾಡದಿದ್ದರೂ ಸಹ ಹಾಲಿನ ಹಣ ಮಾತ್ರ ಕಾವ್ಯಶ್ರೀ ಖಾತೆಗೆ ಸಂದಾಯವಾಗಿ ಬೋನಸ್ ಹಣ ಸಂದಾಯ ವಾಗದಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ, ಈ ಅವ್ಯವಹಾರದ ಬಗ್ಗೆ ಕೂಲಂಕಷ ವಾಗಿ ತನಿಖೆಯನ್ನು ಮಾಡಿಸುವಂತೆ ಆಗ್ರಹಿಸಿದರು.
ರೈತರ ಜೀವನಾಡಿಯಾಗಿರುವ ಹಾಲು ಉತ್ಪಾದಕರ ಸಂಘದ ಏಳಿಗೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಬಮೂಲ್ ಅಧ್ಯಕ್ಷ ಡಿ ಕೆ ಸುರೇಶ್ ರವರು ಪ್ರತಿಯೊಬ್ಬ ರೈತರ ಅಭ್ಯುದಯಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತರುವ ಮೂಲಕ ರೈತರ ಆದಾಯವನ್ನು ಹೆಚ್ಚು
ಮಾಡುವುದರ ಜೊತೆಗೆ ಇಡೀ ದೇಶದಲ್ಲೇ ಒಂದು ಮಾದರಿ ಸಂಸ್ಥೆಯಾಗಿ ಮಾಡಲು ಹೊರಟಿದ್ದು ಆದರೆ ಇಂತಹ ಅವ್ಯವಹಾರ ಬೆಳವಣಿಗೆ ಸಂಸ್ಥೆಗೆ ಕಳಂಕ ತಂದು ರೈತರಿಗೂ ನಷ್ಟ ಉಂಟಾಗಲಿದೆ ಈ ಬಗ್ಗೆ ಡಿ ಕೆ ಸುರೇಶ್ ರವರು ಗಮನ ಹರಿಸಿ ಅವ್ಯವಹಾರದಲ್ಲಿ ಭಾಗಿಯಾಗಿ ರುವ ಮಾಜಿ ಅಧ್ಯಕ್ಷ, ನಿರ್ದೇಶಕರು ಹಾಗೂ ಹಾಲಿನ ಡೈರಿ ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಂಡು ನಮ್ಮ ಗ್ರಾಮದ
ಹಾಲು ಉತ್ಪಾದಕರ ಸಂಘ ಉಳಿಸುವುದರ ಜೊತೆಗೆ ರೈತರ ನೆರವಿಗೆ ಧಾವಿಸುವಂತೆ ಮನವಿ ಮಾಡಿದ್ದಾರೆ.
ಗ್ರಾಮದ ರೈತರಾದ ಮಧು, ಶಿವಕುಮಾರ್, ರಾಜಶೇಖರ್, ನವೀನ್, ವರುಣ್, ಶಿವಕುಮಾರ್, ಮಧು ಸೇರಿದಂತೆ ಗ್ರಾಮದ ಹಲವು ರೈತರು ಈ ವೇಳೆ ಉಪಸ್ಥಿತರಿದ್ದರು.
ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಅವ್ಯವಹಾರ



