ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ವಾರೆಂಟ್ ಜಾರಿ ಆಗಿರುವ ಬಗ್ಗೆ ಬಿಜೆಪಿಯವರು ಸೇಡಿನ ರಾಜಕಾರಣ ಎಂದು ಆರೋಪಿಸುತ್ತಾರೆ. ಅವರು ಸುಮ್ಮನೆ ಕಥೆ ಕಟ್ಟುತ್ತಿದ್ದಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿರುಗೇಟು ನೀಡಿದ್ದಾರೆ.
ಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ವಿಚಾರದಲ್ಲಿ ರಾಹುಲ್ ಗಾಂಧಿ ಏಕೆ ಭಾಗಿಯಾಗುತ್ತಾರೆ ಹೇಳಿ? ಇದರಲ್ಲಿ ರಾಹುಲ್ ಗಾಂಧಿ ಭಾಗಿ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪನವರಿಗೆ ವಾರಂಟ್ ಜಾರಿಯಾಗಿದೆ. ಅವರು ಬೇಗ ಬಂದರೆ ಒಳ್ಳೆಯದು. ಇಲ್ಲದಿದ್ರೆ ಅವರನ್ನು ಕರೆದುಕೊಂಡು ಬರುತ್ತಾರೆ ಎಂದಿದ್ದಾರೆ.
ಪ್ರಕರಣ ಸಂಬಂಧ ಪೊಲೀಸರು ಮಾಹಿತಿ ಪಡೆದಿದ್ದಾರೆ. ನಂತರ ಕಾನೂನು ಪ್ರಕಾರವೇ ಕ್ರಮತೆಗೆದುಕೊಳ್ಳುತ್ತಾರೆ. ಯಡಿಯೂರಪ್ಪ ದೆಹಲಿಯಲ್ಲಿ ಇದ್ದಾರೆ ಎನ್ನುತ್ತಿದ್ದಾರೆ. ಸೋಮವಾರ ಬರೋದಾಗಿ ಅವರು ಹೇಳಿದ್ದಾರೆ ಎಂದರು.ಪೊಲೀಸ್ ಠಾಣೆಯಲ್ಲಿ ದರ್ಶನ್ಗೆ ರಾಜಾತಿಥ್ಯ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಯಾರು ಕೂಡ ಆರೋಪಿಗೆ ರಾಜಾತಿಥ್ಯ ಕೊಡಲು ಸಾಧ್ಯವಿಲ್ಲ.
ತನಿಖೆ ಮಾಡಲು ಪೊಲೀಸರನ್ನು ಫ್ರೀಯಾಗಿ ಬಿಡಬೇಕು ಎಂದರು. ಜನರ ಹಿತದೃಷ್ಟಿಯಿಂದ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಹೇಳುತ್ತೇನೆ. ಬಿರಿಯಾನಿ ಕೊಟ್ಟ ಬಗ್ಗೆಯೂ ನಾನು ಪೊಲೀಸರಿಗೆ ಕೇಳಿದೆ, ಹಾಗೇನೂ ಇಲ್ಲ ಅಂದಿದ್ದಾರೆ. ಎಲ್ಲ ಆರೋಪಿಗಳಂತೆ ಇವರನ್ನೂ ನೋಡ್ತಿದ್ದೇವೆ ಅಂದರು. ಇದರಲ್ಲಿ ಯಾವುದೇ ಮುಲಾಜಿಲ್ಲ ಎಂದು ಪರಮೇಶ್ವರ್ ಹೇಳಿದ್ದಾರೆ.