ಬೆಂಗಳೂರು: ಸಾಮಾಜಿಕ ಕ್ರಾಂತಿಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ 169 ನೇ ಜಯಂತೋತ್ಸವ ಮತ್ತು ಗುರುವಂದನ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಅಂಗವಾಗಿ ಧರ್ಮಸ್ಥಳ, ಕನ್ಯಾಡಿಯ ಶ್ರೀರಾಮಕ್ಷೇತ್ರ ಮಹಾಸಂಸ್ಥಾನದ ಪೀಠಾಧಿಪತಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರಿಗೆ ಗುರುವಂದನಾ ಕಾರ್ಯ ಕ್ರಮ ಮಹಾಲಕ್ಷ್ಮೀ ಬಡಾವಣೆಯ, ಗೆಳೆಯರ ಬಳಗದ, ಡಾ. ರಾಜಕುಮಾರ್ ಸಭಾಂಗಣದಲ್ಲಿ ನಡೆಯಿತು.
ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ, ಉದ್ಯಮಿ ಗೋವಿಂದ ಬಾಬು ಪೂಜಾರಿ. ಕಾಂಗ್ರೆಸ್ ನಾಯಕ ಲಗ್ಗೆರೆ ನಾರಾಯಣಸ್ವಾಮಿ, ಶ್ರೀನಾರಾಯಣಗುರು. ಕಾಲೇಜ್, ಮಂಗಳೂರು. ಉಪನ್ಯಾಸಕ ಕೇಶವ್ ಬಂಗೇರ, ಹಿರಿಯ ನ್ಯಾಯವಾದಿ ಎ.ಕೆ.ವಸಂತ, ಕಾರ್ಯಕ್ರಮದ ಸಂಚಾಲಕರಾದ ಆಟೋ ಗಂಗಾಧರ, ಎಚ್.ಎಸ್. ಶ್ರೀವತ್ಸ್, ಎಚ್ ರಾಜು ಪೂಜಾರಿ, ಭಟ್ಕಳ ನಾಮದಾರಿ ಸಂಘದ ಅಧ್ಯಕ್ಷ ಕೃಷ್ಣ ನಾಯ್ಕ್, ಸುಬ್ರಾಯ ನಾಯ್ಕ್ ಹಾಗೂ ಈಶ್ವರ ನಾಯ್ಕ್ ಸಹಿತ ಸಮಾಜದ ಗಣ್ಯರು, ಹಿರಿಯರು ಸಹಿತ ನೂರಾರು ಮಂದಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರಿಗೆ ಗುರುವಂದನೆ ಸಲ್ಲಿಸಿದರು.
ಗುರುವಂದನೆ ಸ್ವೀಕರಿಸಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಒಂದೇ ಮತ, ಒಂದೇ ಜಾತಿ, ಒಂದೇ ಕುಲ ಎಂಬ ನಾರಯಾಣ ಗುರುಗಳ ಸಂದೇಶ ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತವಾಗಿದೆ. ನಾರಾಯಣ ಗುರುಗಳ ಸಂದೇಶವನ್ನೆ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದದಲ್ಲಿ ಅಳವಡಿಸಿದ್ದಾರೆ ಎಂದರು.
ನಾರಾಯಣ ಗುರುಗಳ ಸಂದೇಶ ಮತ್ತು ಸಂವಿಧಾನದ ತತ್ವಗಳು ಸರಿಯಾಗಿ ಅನುಷ್ಠಾನಗೊಂಡರೆ ದೇಶದಲ್ಲಿ ಜಾತಿ ಪದ್ದತಿ ಸಂಪೂರ್ಣವಾಗಿ ನಿರ್ಮೂಲನೆಯಾಗುತ್ತದೆ ಎಂದು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು ಹೇಳಿದರು.ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಮಂಕಾಳ್ ವೈದ್ಯ ಮಾತನಾಡಿ, ಗುರುಗಳ ಚಿಂತನೆಗಳನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸದೆ ಇರುವುದು ದೊಡ್ಡ ಲೋಪವಾಗಿದೆ. ಗುರುಗಳ ಚಿಂತನೆ ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಸೌಹಾರ್ದತೆಯಿಂದ ಕೂಡಿದ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.