ಕ್ಯಾಪ್ಟನ್ ಮಿಲ್ಲರ್ ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ. ತಮಿಳು, ತೆಲುಗು, ಕನ್ನಡ, ಹಿಂದಿ ಹೀಗೆ ಎಲ್ಲ ಭಾಷೆಯಲ್ಲಿಯ ಈ ಚಿತ್ರ ಬರುತ್ತಿದೆ. ಹಾಗಾಗಿಯೇ ಈ ಹಾಡನ್ನ ಬಹು ಭಾಷೆಯಲ್ಲಿಯೇ ಬಿಡುಗಡೆ ಮಾಡಲಾಗಿದೆ. ಸಿನಿಮಾವನ್ನು ಅರುಣ್ ಮಾಥೇಶ್ವರನ್ ನಿರ್ದೇಶಿಸಿದ್ದಾರೆ.
ಧನುಷ್ ಜೋಡಿಯಾಗಿ ಪ್ರಿಯಾಂಕಾ ಮೋಹನನ್ ನಟಿಸಿದ್ದಾರೆ. ಇದು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ತೆರೆದುಕೊಳ್ಳುವ ಕಥೆ ಎಂದು ಹೇಳಲಾಗುತ್ತಿದೆ.ಈಗಾಗಲೇ ರಿಲೀಸ್ ಆಗಿರೋ ಟೀಸರ್ ಸಿನಿಪ್ರಿಯರಿಗೆ ಕಿಕ್ ಕೊಟ್ಟಿದೆ. ಧನುಷ್ ಉದ್ದ ಕೂದಲು, ಗಡ್ಡ ಮೀಸೆ ಬಿಟ್ಟು ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ.
ಹಾಗೇ ಶಿವರಾಜ್ಕುಮಾರ್ ಕೂಡ ಕುದುರೆ ಏರಿ ಬರುವ ಸನ್ನಿವೇಶ ಅವರ ಅಭಿಮಾನಿಗಳಿಗೆ ಥ್ರಿಲ್ ಹೆಚ್ಚಿಸಿದೆ. ಸದ್ಯ ಈ ಸಿನಿಮಾಗೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಜಿವಿ ಪ್ರಕಾಶ್ ಈ ಸಿನಿಮಾಗೆ ಹಿನ್ನೆಲೆ ಸಂಗೀತ ಹಾಗೂ ಟ್ಯೂನ್ಗಳನ್ನು ಕಂಪೋಸ್ ಮಾಡಿದ್ದಾರೆ. ಜನವರಿ 12ರಂದು ‘ಕ್ಯಾಪ್ಟನ್ ಮಿಲ್ಲರ್’ ವಿಶ್ವದಾದ್ಯಂತ ತೆರೆ ಕಾಣಲಿದೆ.