ದೊಡ್ಡಬಳ್ಳಾಪುರ: ನಗರದ ವೀರಭದ್ರ ಪಾಳ್ಯದ ನಗರಸಭಾ ಸದಸ್ಯರಾದ ಶಿವರಾಜ್ ( ಶಿವ) ಬಿಜೆಪಿ ಪಕ್ಷದಿಂದ ಗೆದ್ದು ವಿಧಾನಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು.
ಪ್ರಸ್ತುತ ನಗರಸಭಾ ಸದಸ್ಯ ಶಿವರಾಜ್ ಅವರು ಶಾಸಕ ಧೀರಜ್ ಮುನಿರಾಜು ನೇತೃತ್ವದಲ್ಲಿ ಪುನಃ ಬಿಜೆಪಿಗೆ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಮಯದಲ್ಲಿ ಮಾತನಾಡಿದ ಶಿವರಾಜ್ ಅವರು ಕೆಲ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ ಒಲ್ಲದ ಮನಸ್ಸಿನಿಂದ ಪಕ್ಷವನ್ನು ಬಿಡಬೇಕಾಯಿತು ಆದರೆ ಶಾಸಕರು ಎಲ್ಲಾ ಭಿನ್ನಾಭಿಪ್ರಾಯಗಳಿಗೂ ತೆರೆ ಎಳೆದ ಕಾರಣ ಮರಳಿ ಬಿಜೆಪಿಗೆ ಬಂದಿದ್ದೇನೆ ಎಂದರು. ಈ ಸಮಯದಲ್ಲಿ ತಾಲೂಕು ಬಿಜೆಪಿ ಘಟಕಗಳ ಅದ್ಯಕ್ಷರು ಹಾಗೂ ನಗರಸಭಾ ಸದಸ್ಯರು ಹಾಜರಿದ್ದರು.