ದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಹರಿಸಲು ನೀರು ನಿಯಂತ್ರಣ ಸಮಿತಿ ನೀಡಿರುವ ಆದೇಶಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದೆಹಲಿಯಲ್ಲಿಂದು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ದೆಹಲಿಯಲ್ಲಿ ಹಿರಿಯ ವಕೀಲರಾದ ಮೋಹನ್ ಖಾತರಕಿ ಸೇರಿದಂತೆ ಹಲವರು ಕಾನೂನು ತಜ್ಞರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಕಾವೇರಿ ನೀರು ತೀರ್ಪಿನಲ್ಲಿ ನೀರು ಬಿಡುವುದು ಹಾಗೂ ಬಿಡದೆ ಇದ್ದರೆ ಎದುರಾಗುವ ಸಮಸ್ಯೆಗಳ ಸಂಬಂಧ ಸುದೀರ್ಘವಾಗಿ ಮಾತುಕತೆ ನಡೆಸುತ್ತಿದ್ದಾರೆ. ಮುಂದೇನು ಮಾಡಬೇಕು ಎಂಬ ಸಲಹೆಯನ್ನು ವಕೀಲರಿಂದ ಪಡೆಯುತ್ತಿದ್ದಾರೆ. ಈಗಾಗಲೇ ಕೆಲ ದಿನಗಳ ಹಿಂದೆ ಕಾವೇರಿ ಜಲಾಯನದ ನೀರನ್ನು ಬೆಳೆಗಳಿಗೆ ಬಿಡುವುದು ಸಾಧ್ಯವಿಲ್ಲ. ಬರ ತಲೆದೋರುವ ಹಿನ್ನೆಲೆಯಲ್ಲಿ ಯಾರೂ ಬೆಳೆಗಳನ್ನು ಬೆಳೆಯಬಾರದು ಎಂದು ರೈತರಿಗೆ ಕರೆ ನೀಡಿದ್ದರು. ಕುಡಿಯುವುದಕ್ಕಾಗಿ ಮಾತ್ರ ನೀರನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಿದ್ದರು. ಆದರೆ ತಮಿಳುನಾಡಿನವರು ಈಗ ತಾವೂ ಇಟ್ಟಿರುವ ಬೆಳೆಗೆ ನೀರನ್ನು ಕೇಳುತ್ತಿದ್ದಾರೆ. ಇಂತಹ ಸಮಯದಲ್ಲಿ ಯಾವ ನಿಉವು ರಾಜ್ಯ ತೆಗೆದುಕೊಳ್ಳಬೇಕು ಎಂದು ಸಭೆಯಲ್ಲಿ ಚರ್ಚೆ ನಡೆದಿರುವುದಾಗಿ ತಿಳಿದುಬಂದಿದೆ.



