ವಿ. ನಾಗೇಂದ್ರ ಪ್ರಸಾದ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ `ದೇವರ ಹೆಸರಲ್ಲಿ ಪ್ರಮಾಣ ಮಾಡುತ್ತೇನೆ’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಸಾಮಾಜಿಕ,ರಾಜಕೀಯ ಮತ್ತು ಕನ್ನಡ ಭಾಷೆಯ ಸುತ್ತ ಸಾಗುವ ಈ ಸೋಶಿಯೋ-ಪೊಲಿಟಿಕಲ್ ಲಿಂಗ್ವಿಸ್ಟಿಕ್ ಕಥಾಹಂದರ ಹೊಂದಿರುವ ಚಿತ್ರವನ್ನು ಗುರುಪ್ರಸಾದ್ ಚಂದ್ರಶೇಖರ್ ನಿರ್ದೇಶಿಸಿದ್ದಾರೆ.ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಗುರುಪ್ರಸಾದ್ ಚಂದ್ರಶೇಖರ್, “ಇದು ಕನ್ನಡ ಭಾಷೆ ಮತ್ತು ಅದರ ಸುತ್ತ ನಡೆಯುವ ಸಾಮಾಜಿಕ-ರಾಜಕೀಯ ಘಟನೆಗಳ ಆಧಾರಿತ ಡ್ರಾಮಾ. ಟೀಸರ್ನಲ್ಲಿ ನಾಗೇಂದ್ರ ಪ್ರಸಾದ್ ಅವರ ಲೀಡ್ ರೋಲ್ ಹಾಗೂ ರಾಜಕೀಯದ ಟ್ರಾ÷್ಯಕ್ ಮಾತ್ರ ತೋರಿಸಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುವ ಪ್ರಯತ್ನ ಮಾಡಿದ್ದೇವೆ ಅಂದರು.ದೇವರ ಹೆಸರಿನಲ್ಲಿ ಪ್ರಮಾಣ ಮಾಡಿ ಸಮಾಜದಲ್ಲಿ ಏನೆಲ್ಲಾ ಬದಲಾವಣೆ ತರುತ್ತಾರೆ ಮತ್ತು ಕಾಲಕ್ಕೆ ತಕ್ಕಂತೆ ಪಾತ್ರಗಳು ಹೇಗೆ ಬದಲಾಗುತ್ತದೆ ಎಂಬುದು ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ. ಈ ಚಿತ್ರದ ಎರಡು ಹಾಡುಗಳನ್ನು ನಾಗೇಂದ್ರ ಪ್ರಸಾದ್ ಬರೆದಿದ್ದು, ಚರಣ್ ಅರ್ಜುನ್ ಸಂಗೀತ ಸಂಯೋಜಿಸಿದ್ದಾರೆ ಜೊತೆಗೆ ಉತ್ತರ ಕರ್ನಾಟಕ ಶೈಲಿಯ ಫೋಕ್ ಭಜನೆ ಹಾಡುಗಳು ಹಾಗೂ ಬಿಟ್ ಸಾಂಗ್ಗಳು ಚಿತ್ರದಲ್ಲಿದೆ.ಬಿ. ಶಿವಶಂಕರ್, ದತ್ತಾತ್ರೇಯ ಜಮಾದಾರ್ ಶಶಿಪ್ರಸಾದ್,ಚಂದ್ರಶೇಖರ್ ಜಂಟಿಯಾಗಿ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ನಿರ್ದೇಶನ ಗುರುಪ್ರಸಾದ್ ಚಂದ್ರಶೇಖರ್. ತಾರಾಗಣದಲ್ಲಿ ನಾಗೇಂದ್ರ ಪ್ರಸಾದ್ ವೈಜನಾಥ್ ಬಿರಾದಾರ್, ಡಿಂಪನ ಜೀವನ್, ಅಶ್ವಿತಾ ಹೆಗಡೆ, ಬಾಲ ರಾಜವಾಡಿ, ಪ್ರದೀಪ್ ಪೂಜಾರಿ, ಶ್ರೀನಾಥ್ ವಶಿಷ್ಠ, ಶ್ರೀನಿವಾಸ್ ಪ್ರಭು, ಕಲಾಮಾಧ್ಯಮ ಪರಮೇಶ್ವರ್, ಅಂಕಿತಾ ಗೌಡ, ದತ್ತಾತ್ರೇಯ ಜಮಾದಾರ್ ಹಾಗೂ ಮಾವಳ್ಳಿ ಕಾರ್ತಿಕ್ ಮುಂತಾದವರು ಅಭಿನಯಿಸಿದ್ದಾರೆ.



