ಗ್ಲ್ಯಾಸ್ಗೋ: ಕಾಮನ್ವೆಲ್ತ್ ಗೇಮ್ಸ್ 2026ರ ಜುಲೈ 28ರಂದು ಭಾರತದ ಕ್ರೀಡಾಪಟುಗಳು ಅದ್ಭುತ ಪ್ರದರ್ಶನ ನೀಡಿದ್ದು, ದೀರ್ಘಾವಧಿಯ ಓಟದ ಸ್ಪರ್ಧೆಯಲ್ಲಿ ಗಲ್ವೀರ್ ಸಿಂಗ್ ಐತಿಹಾಸಿಕ ಬೆಳ್ಳಿ ಹಾಗೂ ವೇಟ್ಲಿಫ್ಟಿಂಗ್ನಲ್ಲಿ ಹರ್ಜಿಂದರ್ ಕೌರ್ ಬೆಳ್ಳಿ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.
ಟೀA ಇಂಡಿಯಾದ ಸಹಾಯಕ ಕೋಚ್ ಹುದ್ದೆಗೆ `ರಯಾನ್ ಟೆನ್ ಡೊಯಿಸ್ಚೇಟ್ ರಾಜೀನಾಮೆ. ಇದರ ಜೊತೆಗೆ ಮೂವರು ಭಾರತೀಯ ಬಾಕ್ಸರ್ಗಳು ಸೆಮಿಫೈನಲ್ ಪ್ರವೇಶಿಸುವ ಮೂಲಕ ಮತ್ತೂ ಮೂರು ಪದಕಗಳನ್ನು ಖಚಿತಪಡಿಸಿದ್ದಾರೆ. ಜುಲೈ 28ರ ತಡರಾತ್ರಿಯ ಈ ಯಶಸ್ಸಿನೊಂದಿಗೆ ಭಾರತದ ಒಟ್ಟು ಪದಕಗಳ ಸಂಖ್ಯೆ 12ಕ್ಕೆ (2 ಚಿನ್ನ, 7 ಬೆಳ್ಳಿ, 3 ಕಂಚು) ಏರಿಕೆಯಾಗಿದ್ದು, ಭಾರತ ಪ್ರಸ್ತುತ ಪದಕ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.
ಅಲೆಕ್ಸಾಂಡರ್ ಸ್ಟೇಡಿಯಂನಲ್ಲಿ ಸುರಿದ ಧಾರಾಕಾರ ಮಳೆಯ ನಡುವೆಯೂ 26 ವರ್ಷದ ಗಲ್ವೀರ್ ಸಿಂಗ್ ಪುರುಷರ 10,000 ಮೀಟರ್ ಓಟದ ಸ್ಪರ್ಧೆಯಲ್ಲಿ ಸ್ಮರಣೀಯ ಪ್ರದರ್ಶನ ನೀಡಿದರು. ಅತ್ಯಂತ ಯೋಜನಾಬದ್ಧವಾಗಿ ಓಡಿದ ಅವರು ಕೊನೆಯ 400 ಮೀಟರ್ಗಳಲ್ಲಿ ಅಸಾಧಾರಣ ವೇಗವನ್ನು ಪ್ರದರ್ಶಿಸಿ 27:49.78 ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಕಾಮನ್ವೆಲ್ತ್ ಗೇಮ್ಸ್ ಇತಿಹಾಸದಲ್ಲೇ ದೀರ್ಘಾವಧಿಯ ಟ್ರಾ÷್ಯಕ್ ಸ್ಪರ್ಧೆಯಲ್ಲಿ ಪದಕ ಗೆದ್ದ ಮೊದಲ ಭಾರತೀಯ ಪುರುಷ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಗಲ್ವೀರ್ ಪಾತ್ರರಾಗಿದ್ದಾರೆ. ಇನ್ನು 1986ರ ನಂತರ ಇದೇ ಮೊದಲ ಬಾರಿಗೆ ಈ ವಿಭಾಗದ ಪೋಡಿಯಂನಲ್ಲಿ ಯಾವುದೇ ಆಫ್ರಿಕನ್ ಓಟಗಾರರಿಲ್ಲದಿರುವುದು ವಿಶೇಷ. ಈ ಸ್ಪರ್ಧೆಯಲ್ಲಿ ಆಸ್ಟ್ರೇಲಿಯಾದ ಕೈ ರಾಬಿನ್ಸನ್ ಚಿನ್ನ ಹಾಗೂ ಐಲ್ ಆಫ್ ಮ್ಯಾನ್ನ ಡೇವಿಡ್ ಮುಲ್ಲಾರ್ಕಿ ಕಂಸ್ಯ ಪದಕ ಪಡೆದರು.ಮತ್ತೊಂದೆಡೆ ಎಸ್ಇಸಿ ಸೆಂಟರ್ನಲ್ಲಿ ಭಾರತದ ವೇಟ್ಲಿಫ್ಟಿಂಗ್ ಪಟುಗಳು ತಮ್ಮ ದಬ್ದಬೆಯನ್ನು ಮುಂದುವರಿಸಿದ್ದಾರೆ. ಬರ್ಮಿಂಗ್ಹ್ಯಾಮ್ 2022ರ ಕಂಸ್ಯ ವಿಜೇತೆ ಹರ್ಜಿಂದರ್ ಕೌರ್ ಮಹಿಳೆಯರ 69 ಕೆಜಿ ವಿಭಾಗದಲ್ಲಿ ತಮ್ಮ ಸಾಧನೆಯನ್ನು ಉತ್ತಮಪಡಿಸಿಕೊಂಡು ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ. ಒಟ್ಟು 221 ಕೆಜಿ ತೂಕ ಎತ್ತಿದ ಹರ್ಜಿಂದರ್, ಈ ಬಾರಿಯ ಗೇಮ್ಸ್ನಲ್ಲಿ ವೇಟ್ಲಿಫ್ಟಿಂಗ್ನಲ್ಲಿ ಭಾರತಕ್ಕೆ 7ನೇ ಪದಕ ತಂದುಕೊಟ್ಟರು. ಕೆನಡಾದ ಶಾರ್ಲೆಟ್ ಸಿಮೋನಿಯೊ ಹೊಸ ಗೇಮ್ಸ್ ದಾಖಲೆಯೊಂದಿಗೆ ಚಿನ್ನ ಮತ್ತು ಆಸ್ಟ್ರೇಲಿಯಾದ ಒಲಿವಿಯಾ ಹೇಮನ್ ಕಂಸ್ಯ ಪದಕ ಗೆದ್ದುಕೊಂಡರು.
ಕಾಮನ್ ವೆಲ್ತ್ ಗೇಮ್ಸ್ನಲ್ಲಿ ಭಾರತಕ್ಕೆ ಮತ್ತೆರಡು ಪದಕ, ಗಲ್ವೀರ್ ಸಿಂಗ್, ಹರ್ಜಿಂದರ್ ಕೌರ್ಗೆ ಬೆಳ್ಳಿ!



