ರಾಂಚಿ: 1 ಕೋಟಿ ರೂ. ಬಹುಮಾನ ಹೊಂದಿದ್ದ ಮೋಸ್ಟ್ ವಾಂಟೆಡ್ ಮಾವೋವಾದಿಯನ್ನು ಪೊಲೀಸರು ಬಂಧಿಸಿದ್ದಾರೆ.ನಕ್ಸಲರ ವಿರುದ್ಧದ ಕಾರ್ಯಾಚರಣೆ ವೇಳೆ ಪೊಲೀಸರು ಜಾರ್ಖಂಡ್ನ ಧನ್ಬಾದ್ ಜಿಲ್ಲೆಯಲ್ಲಿ 1 ಕೋಟಿ ರೂ. ಬಹುಮಾನ ಹೊಂದಿದ್ದ ಮಾವೋವಾದಿ ನಾಯಕ ಮಿಸಿರ್ ಬೆಸ್ರಾನನ್ನು ಬಂಧಿಸಿದ್ದಾರೆ. ದೀರ್ಘಕಾಲದಿಂದ ನಕ್ಸಲ್ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಹಾಗೂ ದೇಶದ ಮೋಸ್ಟ್ ವಾಂಟೆಡ್ ಬಂಡುಕೋರರಲ್ಲಿ ಒಬ್ಬನಾಗಿದ್ದ. ಸದ್ಯ ಈತನ ಬಂಧನವನ್ನು ಭದ್ರತಾ ಅಧಿಕಾರಿಗಳು ಎಲ್ಡಬ್ಲೂ÷್ಯಇ ನಿಗ್ರಹ ಅಭಿಯಾನದ ಐತಿಹಾಸಿಕ ಸಾಧನೆ ಎಂದು ಬಣ್ಣಿಸಿದ್ದಾರೆ.



