ವೇದವ್ಯಾಸರ ಜನುಮದಿನವನ್ನು ವ್ಯಾಸ ಪೂರ್ಣಿಮಾ ಗುರು ಪೂರ್ಣಿಮಾ ಎಂದು ಆಚರಿಸುವ ಪದ್ಧತಿ ಇದೆ. ಹದಿನಾರನೇ ದ್ವಾಪರಯುಗದಲ್ಲಿ ವೇದವ್ಯಾಸರು ಆಷಾಢ ಪೌರ್ಣಮಿಯಂದು ಜನಿಸಿದರು. ಶ್ರೀಮನ್ನಾರಾಯಣನ ಅಂಶ ಅವತಾರವೆಂದೂ ಹೇಳಲಾಗುತ್ತದೆ. ಆ ದಿನವನ್ನು ಗುರು ಪೂರ್ಣಿಮಾ ಎಂದು ಆಚರಿಸಲಾಗುತ್ತಿದೆ. ಎಲ್ಲರಿಗೂ ಮಹಾ ಭಾರತದ ಕಥೆಯಂತೂ ತಿಳಿದೇ ಇದೆ. ದಾಶರಾಜನ ಮಗಳು ಸತ್ಯವತಿ ಮತ್ತು ಪರಾಶರ ಮುನಿಗಳ ಮಗನಾಗಿ ವೇದವ್ಯಾಸರು ಹುಟ್ಟುತ್ತಾರೆ. ವೇದವ್ಯಾಸರಿಗೆ ಕೃಷ್ಣ ದ್ವೈಪಾಯನ ಎಂಬ ಹೆಸರಿದೆ. ಹುಟ್ಟಿದಾಗ ಅವರ ಮೈ ಬಣ್ಣವು ಕಪ್ಪಾಗಿದ್ದು ಯಮುನಾ ನದಿಯ ದ್ವೀಪದಲ್ಲಿ ಅವರ ಜನನವಾದ್ದರಿಂದ ಅವರಿಗೆ ಈ ಕೃಷ್ಣ ದ್ವೈಪಾಯನ ಎಂಬ ಹೆಸರು ಬಂದಿತು. ಅವ ರಿಗೆ ಪರಾಶರ ಸೂನು ಎಂದೂ ಕರೆಯಲಾಗು ತ್ತದೆ. ಪರಾಶರ ಮುನಿಗಳ ಔರಸ ಪುತ್ರರಾದ್ದರಿಂದ ಅವರಿಗೆ ಪರಾಶರ ಸೂನು ಎನ್ನುತ್ತಾರೆ ಭಾರತೀಯ ಸಂಸ್ಕೃತಿಯಲ್ಲಿ ಗುರುವಿನ ಮಹತ್ವವು ಬಹಳವಾಗಿದೆ. ಗುರುಗಳಲ್ಲಿ ಲೌಕಿಕ ವಿದ್ಯೆ ಹೇಳಿ ಕೊಟ್ಟ ಗುರುಗಳು, ಆಧ್ಯಾತ್ಮಿಕ ಗುರು ಜೊತೆಗೆ ನಮ್ಮ ಆತ್ಮೋದ್ಧಾರ ಮಾಡಿದ ಗುರುಗಳು ಎಂಬುದಾಗಿ ಇರುತ್ತಾರೆ. ಲೌಕಿಕ ಗುರುಗಳ ಗುರು ಪೂರ್ಣಿಮಾ ಬೇರೆ ಆಧ್ಯಾತ್ಮಿಕ ಮತ್ತು ಆತ್ಮೋದ್ಧಾರದ ಹಾದಿಯನ್ನು ತೋರಿದ ಗುರುವಿನ ಸ್ಮರಣೆ ಪೂಜೆ ಅವರನ್ನು ನೆನೆಯುವುದೇ ಗುರು ಪೂರ್ಣಿಮಾ. ಇಂದಿನ ಸಮಾಜದಲ್ಲಿ ಲೌಕಿಕ ಗುರುಗಳ ಪ್ರಭಾವವನ್ನು ಮಾತ್ರ ಬಹಳವಾಗಿ ಕಾಣುತ್ತೇವೆ, ನಮ್ಮ ಆತ್ಮದ ಉದ್ಧಾರಕ್ಕೆ ಜ್ಞಾನವನ್ನು ಹೇಳುವ ನಾವು ಅನುಸರಿಸುವ ಸಿದ್ಧಾಂತದ ಗುರುಗಳನ್ನು ನೆನೆಯುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ದೇವತೆಗಳ ಗ್ರಂಥವನ್ನು ಅಸುರರು ಕಸ್ವೈದಿದ್ದಾಗ, ದೇವತೆಗಳು ಹಯಗ್ರೀವನ ಮೊರೆ ಹೋಗುತ್ತಾರೆ. ಹಯಗ್ರೀವ ವೇಗವಾಗಿ ಓಡಬಲ್ಲವನಾಗಿದ್ದರಿಂದ ರಭಸವಾಗಿ ಓಡಿ ಅಸುರರನ್ನು ಸಂಹರಿಸಿ ಗ್ರಂಥವನ್ನು ಮರಳಿ ದೇವತೆಗಳಿಗೆ ಹಿಂದಿರುಗಿಸುವ ಸಮಯದಲ್ಲಿ ಸರಸ್ವತಿಯು ಹಯಗ್ರೀವರಲ್ಲಿ ವಿದ್ಯೆ ಪಡೆದ ಕಥೆ ಪುರಾಣದಲ್ಲಿ ಇದೆ.ಮನುಷ್ಯನ ಜೀವನಕ್ಕೆ ಬಹಳ ಜನಗುರುಗಳು ಇರುತ್ತಾರೆ. ಅದರಲ್ಲಿ ತಂದೆತಾಯಿಯರು ಬಹಳ ಮುಖ್ಯ. ಅದರಲ್ಲೂ ತಾಯಿಯು ಪ್ರತಿ ಹಂತದಲ್ಲೂ ಗುರುವಾಗಿರುತ್ತಾಳೆ. “ಮನೆಯೇ ಮೊದಲ ಪಾಠ ಶಾಲೆ, ಜನನಿ ತಾನೆ ಮೊದಲ ಗುರುವು” ಇದು ಬಹ:ಳ ಸತ್ಯವಾಗಿದೆ. ಮಗುವಿಗೆ ಜೀವನದ ಎಲ್ಲ ಚಟುವಟಿಕೆಗೆಗಳನ್ನು ಕಲಿಸುವುದೇ ತಾಯಿ ಮಾತನಾಡುವುದು, ಊಟ ಮಾಡುವುದು, ಓದುವುದು ಬರೆಯುವುದು ನಾಲ್ಕು ಜನರೊಂದಿಗೆ ಬೆರೆಯುವುದು ಎಲ್ಲವನ್ನೂ ಕಲಿಸುವುದೇ ತಾಯಿ ಮಗು ತಾಯಿಯನ್ನು ನಂಬಿದಷ್ಟು ಮತ್ತೆ ಯಾರನ್ನೂ ನಂಬುವುದಿಲ್ಲ ಹೀಗೆಯೇ ಮನಷ್ಯರ ಜೀವನದ ಮೊದಲ ಹಂತದಲ್ಲಿ ತಾಯಿ ಬಹಳ ಮುಖ್ಯ ಪಾತ್ರವಹಿಸಿ ತಾಯಿಯಷ್ಟೇ ಅಲ್ಲದೇ ಗುರುವೂ ಆಗಿರುತ್ತಾಳೆ. ಮಕ್ಕಳಿಗೆ ಶಾಲೆಗೆ ಸೇರಿಸಿದ ಮೇಲೆ ಹತ್ತನೇ ತರಗತಿಯವರೆಗೂ ಕೂಡ ತಾಯಿ ವಿದ್ಯಾವಂತಳಾಗಿದ್ದರೆ ಅವಳೇ ಹೆಚ್ಚಿನ ಸಮಯ ವಿದ್ಯಾಭ್ಯಾಸದಲ್ಲಿ ಸಹಾಯ ಮಾಡುತ್ತಾಳೆ. ಅನುಮಾನವನ್ನು ಪರಿಹರಿಸುತ್ತಾಳೆ. ಈಗೀನ ಸಮಯದಲ್ಲಿ ಗುರುಕುಲ ಇಲ್ಲದೇ ಹೋದರು ಈಗ ಅಧ್ಯಾಪಕರ ಸಮ ಪ್ರಮಾಣದಲ್ಲಿ ಅಧ್ಯಾಪಕಿಯರೂ ಇದ್ದು ವಿದ್ಯಾರ್ಥಿಗಳ ಶಕ್ತಿಗಳನ್ನು, ಪ್ರತಿಭೆಯನ್ನು ಗುರುತಿಸಿ ಅದರ ಮಾರ್ಗದರ್ಶನ ನೀಡಿ ಜೀವನವನ್ನು ಮುನ್ನಡೆಸಲು, ಗುರಿಯನ್ನು ಆರಿಸಿಕೊಳ್ಳಲು ಸಹಾಯ ಮಾಡುತ್ತಾರೆ. ಬಾಲ್ಯದಿಂದ ಹರೆಯದ ಸಮಯ ಬರುವವರೆಗೆ ಜೀವನದ ಪ್ರಮುಖ ಘಟ್ಟ ಮನದಲ್ಲಿ ಜೀವನದ ಸಲುವಾಗಿ ಗುರಿಯನ್ನು ಆರಿಸಿಕೊಳ್ಳುವ ಸಮಯ. ಆಗ ಒಂದು ಮಗುವಿನ ಮೇಲೆ ತಾಯಿಯ ಮತ್ತು ಅಧ್ಯಾಪಕ/ಕಿಯರ ಪ್ರಭಾವ ಬಹಳವಾಗಿರುತ್ತದೆ. ಆಗ ಅವರನ್ನು ಮುನ್ನಡೆಸುವ ಇಬ್ಬರೂ ಗುರುಗಳು ನೀಡಿದ ಮಾರ್ಗದರ್ಶನದ ಹಾದಿಯಲ್ಲಿ ನಡೆಯುತ್ತಾರೆ. ನಾವು ಶ್ರೀರಾಮ ಚಂದ್ರನ ಉದಾಹರಣೆಯಲ್ಲಿ ನೋಡಿದರೆ ರಾಮದೇವರಿಗೆ ಅವನ ತಾಯಿಯ ಸ್ವಭಾವವು ಮತ್ತು ಕೈಕೇಯಿಯ ಕ್ಷಾತ್ರ ಧರ್ಮದ ಪ್ರಭಾವವೂ ಬಹಳಷ್ಟು ಇದ್ದಿತು. ಇತಿಹಾಸದಲ್ಲಿ ನೋಡುವುದಾದರೆ ಜೀಜಾ ಬಾಯಿಯ ಉದಾಹರಣೆಯನ್ನು ನೋಡಿದರೆ ಶಿವಾಜಿ ಮಹಾರಾಜರಲ್ಲಿ ನಾಯಕತ್ವದ ಗುಣ, ನಾರಿಯರಿಗೆ ಪೂಜನೀಯ ಭಾವನೆಯಿಂದ ನಡೆದುಕೊಳ್ಳುವ ಮತ್ತು ಸಮಾಜದಲ್ಲಿ ನ್ಯಾಯ ಒದಗಿಸುವ ಗುಣಗಳನ್ನು ಮಹಾರಾಜರಲ್ಲಿ ತುಂಬಿದವಳು ತಾಯಿಯೇ.
ಮನೆಯಲ್ಲಿ ತಾಯಿ ವಿದ್ಯಾವಂತಳಾಗಿದ್ದರೆ ಸಂಪೂರ್ಣ ಸಂಸಾರದಲ್ಲಿ ಎಲ್ಲರನ್ನೂ ವಿದ್ಯಾವಂತರನ್ನಗಿ ಮಾಡಲು ಪ್ರೇರೇಪಿಸುತ್ತಾಳೆ. ಹಾಗೆಂದು ಅವಿದ್ಯಾವಂತರು ಮಾರ್ಗದರ್ಶಕರಲ್ಲ ಎಂಬುದು ತಪ್ಪಾಗುತ್ತದೆ, ಕೆಲವೊಮ್ಮೆ ಅನುಭವಗಳೇ ಪಾಠವಾಗುತ್ತದೆ. ಆದರೆ ತಾಯಿ ವಿದ್ಯಾವಂತಳಾದರೆ ಮಕ್ಕಳು ಯಾವ ವಿದ್ಯೆ ಕಲಿಯಬೇಕು ಎಂಧು ನಿರ್ಧರಿಸುವುದರ ಜೊತೆಗೆ ಅವರನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತಾಳೆ. ಇನ್ನು ಸ್ವತಂತ್ರಕ್ಕೂ ಮೊದಲು ಹುಟ್ಟಿ ಪತಿಯ ಮನೆಯಲ್ಲಿಯೇ ಕಲಿತು ಶಿಕ್ಷಕಿಯಾದ ಭಾರತದ ಮೊದಲ ಮಹಿಳೆ ಜ್ಯೊತಿ ಬಾ ಫುಲೆ ಸಮಾಜದಲ್ಲಿ ಕ್ರಾಂತಿಯ ಹರಿಕಾರಳಾಗಿ ಮುಖ್ಯೋಪಾಧ್ಯಾಯನಿಯಾಗಿ ಅನೇಕ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾದವರು.ಗುರುವಿದ್ದರೆ ಗುರಿ ಮುಟ್ಟಲು ಸಾಧ್ಯ ಒಬ್ಬ ಗುರುವಿನಿಂದ ಅನೇಕ ಕ್ಷೇತ್ರದಲ್ಲಿ ಕಲಿತು ಮುಂದೆ ಹೆಜ್ಜೆ ಇಡುತ್ತಾನೆ. ಗುರು ಎಂಜಿನಿಯರ್ ಗಳನ್ನು, ವೈದ್ಯರನ್ನು, ಉಪನ್ಯಾಸಕರನ್ನು, ಸಂಗಿತಕಾರರನ್ನು, ನಾಟಕಕಾರನ್ನು ತಯಾರು ಮಾಡುವಲ್ಲಿ ಯಶಸ್ವಿಯಾಗುತ್ತಾರೆ.
-ಚಂಪಾ ಚಿನಿವಾರ್ ಆಪ್ತಸಮಾಲೋಚಕಿ
ಗುರು ಪೂರ್ಣಿಮೆ



