ನೀಟ್ ವೈಫಲ್ಯ ವ್ಯವಸ್ಥೆಯ ಕುಸಿತಕ್ಕೆ ಸಾಕ್ಷಿ..!
ಡಾ.ಎಂ.ಎಸ್. ಮಣಿ
ಆದರೂ, ನಮ್ಮ ದೇಶ ಐಟಿ ರಾಷ್ಟ್ರ ನಮ್ಮಲ್ಲಿನ ಬ್ಯಾಂಕಿಂಗ್ ವ್ಯವಸ್ಥೆ, ಡಿಜಿಟಲ್ ಪಾವತಿ ವ್ಯವಸ್ಥೆ ಮತ್ತು ರಾಷ್ಟ್ರೀಯ ದತ್ತಸಂಚಯಗಳನ್ನು ಸುರಕ್ಷಿತವಾಗಿ ಇಡಬಹುದಾದರೆ. ಪರೀಕ್ಷಾ ವ್ಯವಸ್ಥೆಯನ್ನು ಸಹ ಸುಧಾರಿಸಬಹುದಾಗಿತ್ತು.ವಿದ್ಯಾರ್ಥಿಗಳ ಉತ್ತರಗಳಲ್ಲಿನ ವೈಪರೀತ್ಯಗಳನ್ನು ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶ ವಿಶ್ಲೇಷಣೆಯನ್ನು ಸಹ ಬಳಸಬಹುದಾಗಿತ್ತು. ವಿದ್ಯಾರ್ಥಿಗಳ ಅಸಹಜ ಉತ್ತರಗಳ ಹೋಲಿಕೆಗಳನ್ನು ಕಂಡ ತಕ್ಷಣವೇ ತನಿಖೆಗೆ ಫ್ಲಾ÷್ಯಗ್ ಮಾಡಬಹುದಿತ್ತು. ಇದರಿಂದ ಸಂಘಟಿತ ವಂಚನೆ ಜಾಲಗಳನ್ನು ಮೊದಲೇ ಪತ್ತೆಹಚ್ಚಲು ಸಹಾಯ ಆಗುತ್ತಿತ್ತು. ಆಗ ವಿದ್ಯಾರ್ಥಿಗಳು ದೂರದ ದೆಹಲಿಯಲ್ಲಿ ಲಾಠಿಏಟಿಗೆ ಒಳಗಾಗುವುದು ತಪುತ್ತಿತ್ತು.ಇವತ್ತು ದೇಶದ ಉದ್ದಗಲ ಇರುವ ನೀಟ್ ಪರೀಕ್ಷಾ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ದೃಢೀಕರಣವನ್ನು ಬಲಪಡಿಸುವ ಮತ್ತು ಅದನ್ನು ಪ್ರಮಾಣೀಕರಿಸುವ ಅವಶ್ಯಕತೆಯಿದೆ. ಅಲ್ಲದೇ ಮುಖ ಗುರುತಿಸುವಿಕೆ, ಫಿಂಗರ್ ಪ್ರಿಂಟ್ ಸ್ಕಾನಿಂಗ್ ಮತ್ತು ಲೈವ್ ಪರಿಶೀಲನೆ ಮಾಡುವ ಅವಶ್ಯಕತೆ ಇದೆ. ಆಗ ವಿದ್ಯಾರ್ಥಿಗಳು ನಕಲಿ ಪ್ರವೇಶಾತಿಯನ್ನು ತಡೆಗಟ್ಟಬಹುದು. ಜೊತೆಗೆ ಪ್ರಶ್ನೆ ಪತ್ರಿಕೆಯ ಚಲನೆಯನ್ನು ಸಂಪೂರ್ಣವಾಗಿ ಎನ್ಕಿçಪ್ಟ್ ಮಾಡಿರುವುದನ್ನು ಡಿಜಿಟಲ್ ಆಗಿ ಪತ್ತೆಹಚ್ಚಬಹುದನ್ನು ಸಹ ಖಚಿತಪಡಿಸಿಕೊಳ್ಳಬಹುದು. ಇಷ್ಟಲ್ಲದೆ, ಮುದ್ರಣದಿಂದ ಹಿಡಿದು ಪತ್ರಿಕೆಗಳ ಸಾಗಣೆ ಸಂಗ್ರಹಣೆ ಮತ್ತು ವಿತರಣೆಯವರೆಗಿನ ಎಲ್ಲಾ ಹಂತಗಳನ್ನು ಸೂಕ್ತ ಹೊತ್ತಲ್ಲಿ ಡಿಜಿಟಲ್ ಆಗಿ ಟ್ರ್ಯಾಕ್ ಮಾಡುವಂತಾಗಬೇಕು.ಇನ್ನೂ ಪರೀಕ್ಷಾ ಕೇಂದ್ರಗಳನ್ನು ಮೇಲ್ವಿಚಾರಣೆ ಮಾಡುವಲ್ಲಿ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತದೆ. ಎಐ-ಸಕ್ರಿಯಗೊಳಿಸಿದ ಸಿಸಿಟಿವಿ ವ್ಯವಸ್ಥೆಗಳು ಅನುಮಾನಾಸ್ಪದ ಚಟುವಟಿಕೆಯನ್ನು ಪತ್ತೆ ಮಾಡಬಹುದು. ಇದರೊಂದಿಗೆ ಕೇಂದ್ರ ನಿಯಂತ್ರಣ ಕೊಠಡಿಯಿಂದ ನೇರ ಮೇಲ್ವಿಚಾರಣೆ ನಡೆಸಿದರೆ ಪಾರದರ್ಶಕತೆಯನ್ನು ಸಹ ಸುಧಾರಿಸಬಹುದು. ಪರೀಕ್ಷಾ ಸಂಸ್ಥೆಗಳಿಗೆ ಸೈಬರ್ ಭದ್ರತೆಯು ಆದ್ಯತೆಯಾಗಿರಬೇಕು. ಪ್ರತಿ ಪ್ರಮುಖ ರಾಷ್ಟ್ರೀಯ ಪರೀಕ್ಷೆಯ ಮೊದಲು ಬಲವಾದ ಸೈಬರ್ ಆಡಿಟ್ಗಳನ್ನು, ನೈತಿಕ ಹ್ಯಾಕಿಂಗ್ ಪರೀಕ್ಷೆಗಳನ್ನು ಮತ್ತು ಸ್ವತಂತ್ರ ತಂತ್ರಜ್ಞಾನ ವಿಮರ್ಶೆಗಳನ್ನು ಕಡ್ಡಾಯವಾಗಿ ಮಾಡಿರಬೇಕು.ಇವೆಲ್ಲದಕಿಂತಲೂ, ನಮಗೆ ಸಾಂಸ್ಥಿಕ ಹೊಣೆಗಾರಿಕೆಯೂ ಬೇಕು. ಪರೀಕ್ಷಾ ಅಕ್ರಮಗಳ ಕುರಿತ ತನಿಖಾ ಪ್ರಕ್ರಿಯೆಯು ತ್ವರಿತ, ಪಕ್ಷಪಾತವಿಲ್ಲದ ಮತ್ತು ನ್ಯಾಯಯುತವಾಗಿರಬೇಕು. ವದಂತಿಗಳಿAದ ಅವ್ಯವಸ್ಥೆ ಸೃಷ್ಟಿಯಾಗುವ ಬದಲು ಸಂಬಂಧಿಸಿದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಕ್ಷಣವೇ ತಲುಪಿಸಬೇಕು. ತಲುಪಿಸದಿದ್ದರೆ ವಿಳಂಬತೆಯು ಭೀತಿಯನ್ನು ಹೆಚ್ಚಿಸುತ್ತದೆ. ಪ್ರಶ್ನೆಪತ್ರಿಕೆಗಳು ಸೋರಿಕೆ ಆದಾಗ, ವ್ಯವಸ್ಥೆಯ ವಿರುದ್ಧದ ಕೃತ್ಯವನ್ನು ಪ್ರಚಾರ ಪಡಿಸಬೇಕು. ದುಷ್ಟರು ಸೋರಿಕೆ ಮಾಡುವುದರಿಂದ ಪ್ರಾಮಾಣಿಕ ವಿದ್ಯಾರ್ಥಿಗಳ ಅವಕಾಶಗಳನ್ನು ಕಸಿದುಕೊಳ್ಳುತ್ತಿದ್ದಾರೆ. ಕಠಿಣ ಕಾನೂನು ಕ್ರಮವು ದುಷ್ಕ್ರಂತ್ಯಗಳಲ್ಲಿ ತೊಡಗಿರುವವರಲ್ಲಿ ಭಯವನ್ನು ಹುಟ್ಟುಹಾಕುತ್ತದೆ. ನಮ್ಮ ದೇಶವು ವಿಶಾಲ ಮತ್ತು ವೈವಿಧ್ಯಮಯ ರಾಷ್ಟ್ರ ನಮ್ಮಲ್ಲಿ ಕೌನ್ಸೆಲಿಂಗ್, ಮೇಲ್ವಿಚಾರಣೆ ಮತ್ತು ಪರೀಕ್ಷೆಗಳನ್ನು ನಡೆಸುವಲ್ಲಿ ಸಕ್ರಿಯ ಪಾತ್ರವನ್ನು ವಹಿಸಬೇಕು. ಮುಖ್ಯವಾಗಿ, ಮೂರೇ ಮೂರು ಗಂಟೆಗಳ ಪರೀಕ್ಷೆಯು ವಿದ್ಯಾರ್ಥಿಯ ಮೌಲ್ಯ ಅಥವಾ ಭವಿಷ್ಯವನ್ನು ಸಂಪೂರ್ಣವಾಗಿ ವ್ಯಾಖ್ಯಾನಿಸಬಾರದು.ಇದೇನೆ ಇರಲಿ, ವರ್ಷದಿಂದ ವರ್ಷಕ್ಕೆ ಇಂತಹ ಅನೈತಿಕ ಮಾರ್ಗಗಳು ಗೋಚರಿಸುತ್ತಿದ್ದರೂ ತಪ್ಪಿತಸ್ಥರನ್ನು ಶಿಕ್ಷಿಸುವಲ್ಲಿ ನಮ್ಮ ವ್ಯವಸ್ಥೆ ಇನ್ನೂ ಸಫಲವಾಗಿಲ್ಲ. ಹೀಗಾಗಿಯೇ ತರಬೇತಿ ಸಂಸ್ಥೆಗಳ ಮೇಲಿನ ಅವಲಂಬನೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.
ನೀಟ್ ವೈಫಲ್ಯ ವ್ಯವಸ್ಥೆಯ ಕುಸಿತಕ್ಕೆ ಸಾಕ್ಷಿ..!



