ಮಹದೇವಪುರ : ಸರ್ಕಾರದ ಆದೇಶದಂತೆ ಮುಖ್ಯ ರಸ್ತೆಗಳಲ್ಲಿ 20% ಮಾತ್ರ ಬೀದಿಬದಿ ವ್ಯಾಪಾರಿಗಳನ್ನು ತೆರವು ಗೊಳಿಸುವಂತೆ ಆದೇಶ ಮಾಡಿದೆ .ಆದರೆ ಜಿಬಿಎ ಅಧಿಕಾರಿಗಳು ಕೆಲವು ಪ್ರಭಾವಿ ವ್ಯಕ್ತಿ ಗಳೊಂದಿಗೆ ಕೈಜೋಡಿಸಿ ಬೀದಿ ಬದಿ ವ್ಯಾಪಾರಿಗಳ ಎಲ್ಲಾ ಅಂಗಡಿಗಳನ್ನು ಯಾವುದೇ ರೀತಿಯ ನೋಟಿಸ್ ನೀಡದೆ ತೆರವು ಮಾಡಿರುವುದು ಖಂಡನೀಯ ಎಂದು ಭಾರತಿಯ ಸೇವಾ ಸಮಿತಿ ರಾಷ್ಟ್ರೀಯ ಅದ್ಯಕ್ಷ ಹೂಡಿ ಚಿನ್ನಿ ಬೇಸರ ವ್ಯಕ್ತಪಡಿಸಿದರು.
ಕ್ಷೇತ್ರದ ಹೂಡಿಯ ಖಾಸಗಿ ಹೋಟೆಲ್ನಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿ ಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೆಗೌಡರವರು ತಿಳಿಸಿರುವ ಹಾಗೆ ಮುಖ್ಯ ರಸ್ತೆ ಗಳಲ್ಲಿ ಪಾದ ಚಾರಿ ಮಾರ್ಗವನ್ನು ತೆರವುಗೊಳಿಸಿ ಎಂದು ಹೇಳಿರುವುದು ಬೀದಿ ಬದಿ ಬಡ ವ್ಯಾಪಾರಿಗಳಿಗೆ ತುಂಬಾ ತೊಂದರೆ ಯಾಗುತ್ತಿದೆ ಎಂದರು. ಹಲವಾರು ವ್ಯಾಪಾರಿಗಳು, ಆಟೋ ಕ್ಯಾಬ್ ಗಳಲ್ಲಿ ಹೋಟೆಲ್ ನಡೆಸಿಕೊಂಡು ಕೂಲಿ ಕಾರ್ಮಿಕರಿಗೆ ಹಾಗು ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಊಟ, ಕಾಫೀ, ಟೀ ನೀಡುವುದು ಅಲ್ಲದೆ ಕಡಿಮೆ ದರದಲ್ಲಿ ಹಣ್ಣು ಹಾಗು ತರಕಾರಿ ನೀಡುತ್ತಾ ಹೆಚ್ಚಿನ ಸಹಕಾರಿಯಾಗಿದ್ದಾರೆ. ಆದರೆ ದೊಡ್ಡ ದೊಡ್ಡ ಹೋಟೆಲ್ ಹಾಗು ಮಾಲ್ ಗಳಲ್ಲಿ ಊಟ, ಕಾಫೀ, ಟೀ ಸೇರಿದಂತೆ ತಿಂಡಿಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಿ ಸಾರ್ವಜನಿಕರನ್ನು ವಂಚಿಸುವ ಕಾರ್ಯ ಮಾಡುತ್ತಿದ್ದಾರೆ ಅಲ್ಲದೆ ಹಣ್ಣುಹಂಪಲುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ದೂರಿದರು. 65 ವರ್ಷ ಮೇಲ್ಪಟ್ಟ ಹಿರಿಯ ಕೂಲಿ ಕಾರ್ಮಿಕರು ಯಾವುದೇ ಕಂಪನಿಗಳಲ್ಲಿ ಕೆಲಸ ನೀಡದಿರುವ ಸಮಯದಲ್ಲಿ ಬೀದಿಬದಿ ವ್ಯಾಪಾರದಲ್ಲಿ ತಮ್ಮ ಜೀವನ ನಡೆಸುತ್ತಿರುತ್ತಾರೆ. ಇದರಲ್ಲಿ ನಮ್ಮ ರಾಜ್ಯದ ಜನರಿಗಿಂತ ಅನ್ಯ ರಾಜ್ಯದ ಹೆಚ್ಚು ಜನರು ಬೆಂಗಳೂರಿನಲ್ಲಿ ಬೀದಿಬದಿ ವ್ಯಾಪಾರ ಮಾಡಿಕೊಂಡು ತಮ್ಮ ಜೀವನ ಸಾಗಿಸುತ್ತಿದ್ದಾರೆ. ಸರ್ಕಾರ ಕೂಡಲೆ ಬೀದಿಬದಿ ವ್ಯಾಪಾರಿಗಳಿಗೆ ಬದಲಿ ವ್ಯವಸ್ಥೆ ಮಾಡಬೇಕು, ಹಾಗು ಅವರು ವ್ಯಾಪಾರ ಮಾಡಲು ಅವಕಾಶ ಕಲ್ಪಿಸಿಕೊಡಬೇಕು ಇಲ್ಲದಿದ್ದರೆ ಬಿ.ಎಸ್.ಎಸ್. ಸಂಘಟನೆ ವ್ಯಾಪಾರಿಗಳ ಪರ ನಿಂತು ಉಗ್ರ ಹೋರಾಟ ಮಾಡಿ ಅವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತದೆ ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಮುಖಂಡರಾದ ಎಲೆ. ಶ್ರೀನಿವಾಸ್ ಹೊಸಕೋಟೆ, ಶ್ರೀಕಾಂತ್ ರಾವಣ, ಮಹದೇವ, ಮಂಜು, ಸುರೇಶ್, ಯಶೋದಮ್ಮ, ಅಶೋಕ್, ಸತೀಶ್, ರವಿ, ಪವನ್ ಸೇರಿದಂತೆ ಬೀದಿಬದಿ ವ್ಯಾಪಾರಿಗಳು ಹಾಗು ಸ್ಥಳೀಯರು ಹಾಜರಿದ್ದರು.
ಬೀದಿ ಬದಿ ವ್ಯಾಪಾರಿಗಳಿಗೆ ನೋಟೀಸ್ ನೀಡದೆ ಮಳಿಗೆಗಳನ್ನು ತೆರವು ಮಾಡಿರುವುದಕ್ಕೆ ಖಂಡನೆ



