ಗುರುತೇಜ್ ಶೆಟ್ಟಿ ನಿರ್ದೇಶನದಲ್ಲಿ ಕಿರಣ್ ರಾಜ್ ನಾಯಕನಾಗಿ ಅಭಿನಯಿಸಿರುವ `ಜಾಕಿ 42′ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ.
“ಮುತ್ತು ಮುತ್ತು ಮಾತಾಯಿತ’ ಎನ್ನುವ ರೊಮ್ಯಾಂಟಿಕ್ ಲವ್ ಸಾಂಗ್ ಈ ಚಿತ್ರದ ಮೊದಲಗೀತೆಯಾಗಿ ಬಿಡುಗಡೆಯಾಗಿದ್ದು, ನಾಗಾರ್ಜುನ ಶರ್ಮ ಈ ಸುಂದರ ಪ್ರೇಮಗೀತೆಯನ್ನು ಬರೆದಿದ್ದಾರೆ. ವಿನೋದ್ ಯಜಮಾನ್ಯ ಸಂಗೀತ ನೀಡಿದ್ದಾರೆ. ಖ್ಯಾತ ಬಾಲಿವುಡ್ ಗಾಯಕರಾದ ಅರ್ಮಾನ್ ಮಲ್ಲಿಕ್ ಹಾಗೂ ಪಾಲಕ್ ಮುಚ್ಚಲ್ ಹಾಡಿದ್ದಾರೆ. ಗೋಲ್ಡನ್ ಗೇಟ್ ಸ್ಟುಡಿಯೋ ಲಾಂಛನದಲ್ಲಿ ಭಾರತಿ ಸತ್ಯನಾರಾಯಣ ಈ ಚಿತ್ರವನ್ನು ನಿರ್ಮಿಸಿದ್ದು, ಗುರುತೇಜ್ ಶೆಟ್ಟಿ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಹಾರ್ಸ್ ರೇಸ್ ಹಿನ್ನೆಲೆಯಲ್ಲಿ ಈ ಚಿತ್ರ ತಯಾರಾಗಿದ್ದು ಭಾರತೀಯ ಚಿತ್ರ ರಂಗದಲ್ಲೇ ಪೂರ್ಣ ಪ್ರಮಾಣದ ಹಾರ್ಸ್ ರೇಸ್ ಹಿನ್ನೆಲೆಯಲ್ಲಿ ಬರುತ್ತಿರುವ ಚಿತ್ರ ಇದಾಗಿದೆ. ಕಿರಣ್ ರಾಜ್, ಹೃತಿಕ ಶ್ರೀನಿವಾಸ್, ಯುಕ್ತ, ದೀಪಕ್ ರೈ, ರಾಜೇಂದ್ರ ಕಾರಂತ್, ಚೇತನ್ ರೈ ಮಣಿ, ಮಧುಸೂದನ್ ರಾವ್, ಗಿರೀಶ್ ಹೆಗ್ಡೆ ಅರುಣ್ ಆಚಾರ್ ಮುಂತಾದ ಕಲಾವಿದರು ತಾರಾ ಗಣದಲ್ಲಿದ್ದಾರೆ.
`ಜಾಕಿ 42′ ಚಿತ್ರದ ಮೊದಲ ಹಾಡು ಬಿಡುಗಡೆ



