ಹುಬ್ಬಳ್ಳಿ: ಕಳೆದ ಒಂದು ದಶಕದಿಂದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೇ ಆದಂತಹ ವಿಭಿನ್ನ ವಿನುತನವಾಗಿ ರಾಜ್ಯದ 31 ಜಿಲ್ಲೆಗಳಲ್ಲಿ ಹಾಗೂ ವಿವಿಧ ರಾಜ್ಯಗಳಲ್ಲಿಯೂ ಕಾರ್ಯಕ್ರಮಗಳನ್ನು ಮಾಡುತ್ತಾ ಎಲೆಮರೆಕಾಯಿಯಂತಿರುವ ಪ್ರತಿಭೆಗಳನ್ನು ಬೆಳೆಸಲು, ಸಾಹಿತಿಕವಾಗಿ, ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಕಾರ್ಯ ಮಾಡುತ್ತಾ ಇದೀಗ ಬೆಳಕು ಸಂಸ್ಥೆ ವತಿಯಿಂದ 125ನೇ ಕಾರ್ಯಕ್ರಮ ನಗರದ ಸವಾಯಿ ಗಂಧರ್ವ ಹಾಲಿನಲ್ಲಿ ವೈಭವದಿಂದ ನಡೆಯಿತು.”ಬೆಳಕು ಸಮ್ಮೇಳನದ ಅಧ್ಯಕ್ಷತೆಯನ್ನು ಅಖಿಲ ಭಾರತ ಶಿಕ್ಷಕರ ಫೆಡರೇಶನ್ (ನವದೆಹಲಿ) ರಾಷ್ಟ್ರೀಯ ಅಧ್ಯಕ್ಷರಾದ ಬಸವರಾಜ್ ಗುರಿಕಾರ್ ವಹಿಸಿದರು.ಸಮ್ಮೇಳನದ ಉದ್ಘಾಟಕರಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಖಜಾಂಚಿಗಳಾದ ಶಿವರುದ್ರಯ್ಯ ವಿ.ವಿ. ಆಗಮಿಸಿದರು.ವಿಶೇಷ ಆಹ್ವಾನಿತರಾಗಿ ವಾಣಿಜ್ಯ ತೆರಿಗೆಗಳ ಮೇಲ್ಮನವಿ ವಿಭಾಗದ ಜಂಟಿ ಆಯುಕ್ತರಾದ ಸುಜಾತಾ ಕೆ.ಸಿಬೆಳಕು ಸಂಸ್ಥೆಯ ಮಹಿಳಾ ಘಟಕ ಅಧ್ಯಕ್ಷರಾದ ಡಾ .ನಿರ್ಮಲ ಸಿ ಏಲಿಗಾರ. ಪ್ರೊಫೆಸರ್ ಹಾಗೂ ಹಿರಿಯ ಸಾಹಿತಿಗಳಾದ ಸಮಂತಾ ದೇಶಮಾನೆ. ಇಂದು ಸಂಜೆ ಪತ್ರಿಕೆ ಪ್ರಧಾನ ಸಂಪಾದಕರಾದ ಡಾ. ಪದ್ಮ ನಾಗರಾಜ್. ಡಿಡಿಪಿಐ ಬಸವರಾಜ್ ನಾಲ ತವಾಡ. ಗದಗ್ ಜಿಲ್ಲೆಯ ಅಪ್ಪರ್ ಜಿಲ್ಲಾಧಿಕಾರಿ ಡಾ. ದೂರಗೇಶ್ ಕೆ ಸಿ. ಸೇರಿದಂತೆ ಪ್ರಮುಖರ ಆಗಮಿಸಿದರು.ಬೆಳಕು ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಅಣ್ಣಪ್ಪ ಮೇಟಿಗೌಡರ ಮುಖಂಡರುದಲ್ಲಿ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಪ್ರಾರಂಭವಾಗುವ ಪೂರ್ವದಲ್ಲಿ ವಿವಿಧ ಜಿಲ್ಲಾ ತಾಲೂಕ ಕೇಂದ್ರಗಳಿಂದ ಆಗಮಿಸಿದ ಕಲಾತಂಡಗಳು ಹಾಗೂ ಮಕ್ಕಳಿಂದ ವಿವಿಧ ಸಾಹಿತ್ಯ ಶೈಕ್ಷಣಿಕ ಭರತ್ ನಾಟ್ಯ ಪೌರಾಣಿಕ ಪ್ರದರ್ಶನ ನೀಡಿದವು. ಕಾರ್ಯಕ್ರಮ ಪ್ರಾರಂಭವಾಗುವ ಪೂರ್ವದಲ್ಲಿ ಜನಪ್ರಿಯ ಹಾಡುಗಾರ್ತಿ ಎಸ್ ಜಾನಕಿ ಅವರ ನಿಧನಕ್ಕೆ ಒಂದು ನಿಮಿಷ ಸಂತಾಪ ಸೂಚಿಸಿ ಮೌನಾಚರಣೆ ಮಾಡಲಾಯಿತು.
ನಂತರ ಸಮ್ಮೇಳನದವನ್ನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಖಜಾಂಚಿಗಳಾದ ಶಿವರುದ್ರಯ್ಯ ವಿ.ವಿ. ಅವರು ದೀಪಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ಸಮ್ಮೇಳನದಲ್ಲಿ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳ ಜೊತೆಗೆ ಪ್ರಶಸ್ತಿ ಪ್ರದಾನ ಮತ್ತು ಮೂರು ಪುಸ್ತಕಗಳ ಲೋಕಾರ್ಪಣೆ ಹಾಗೂ ವಿಶೇಷವಾಗಿ ಹಿಂದಿನ ಸಾಹಿತ್ಯ ದೀಪ, ಇಂದಿನ ಸಾಹಿತ್ಯ ಕನ್ನಡಿ ಎನ್ನುವ ವಿಷಯದ ಕುರಿತು. ಸವಾಲು -ಜವಾಬು ಎನ್ನುವ ವಿಚಾರ ಗೋಷ್ಠಿ ಕವಿಗೋಷ್ಠಿ, ಗಾಯನ, ನೃತ್ಯ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ನಡೆದವು. ರಾಷ್ಟ್ರೀಯ ಅಂತರಾಷ್ಟ್ರೀಯ ರಾಜ್ಯಮಟ್ಟದ ಪ್ರಶಸ್ತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆ ತಾಲೂಕು ಮಹಾನಗರ ದಿಂದ ಸಾಹಿತಿಗಳು ಆಗಮಿಸಿದರು.
ರಾಜ್ಯಮಟ್ಟದ ಬೆಳಕು ಸಮ್ಮೇಳನಕ್ಕೆ ಅದ್ದೂರಿ ಚಾಲನೆ ಸಾಹಿತ್ಯ ಸಾಂಸ್ಕೃತಿಕ ಶೈಕ್ಷಣಿಕ ಹಾಗೂ ಸಾಹಿತ್ಯ ಲೋಕದ ಪ್ರಮುಖರಿಗೆ ಸನ್ಮಾನ



