ಶಿವರಾಜ್ಕುಮಾರ್ 64ನೇ ಜನ್ಮದಿನದ ಅಂಗವಾಗಿ ಅಭಿಮಾನಿಗಳಿಗೆ ಹಾಗೂ ಸಿನಿಪ್ರೇಕ್ಷಕರಿಗೆ ಕೊಡುಗೆಗಳನ್ನು ಘೋಷಿಸಲಾಯಿತು.
ಜನಸಾಮಾನ್ಯರ ಆರೋಗ್ಯ ಭದ್ರತೆಗಾಗಿ ವಿಶೇಷ ಹೆಲ್ತ್ ಕಾರ್ಡ್ ಬಿಡುಗಡೆಯಾಗಿದ್ದರೆ, ಇನ್ನೊಂದೆಡೆ ಶಿವಣ್ಣ ನಟನೆಯ ಸಿನಿಮಾಗಳ ಟೀಸರ್, ಪೋಸ್ಟರ್ ಹಾಗೂ ಪ್ರೋಮೋಗಳು ರಿಲೀಸ್ ಆದವು. ಆಸ್ಪತ್ರೆಯ (ನಿಮಿಷಗಳು ಅಮೂಲ್ಯ) ಎಂಬ ಜಾಹೀರಾತಿನಲ್ಲಿ ಆಂಬುಲೆನ್ಸ್ ಚಾಲಕ, ವೈದ್ಯ, ಮನೋವೈದ್ಯ ಸೇರಿದಂತೆ 10 ವಿಭಿನ್ನ ಪಾತ್ರಗಳಲ್ಲಿ ಶಿವಣ್ಣ ಉಚಿತವಾಗಿ ನಟಿಸಿದ್ದಾರೆ.`ಸರ್ವೆವರ್’ ಸಾಕ್ಷ್ಯಚಿತ್ರದ ಟೀಸರ್ ಬಿಡುಗಡೆ: ಶಿವರಾಜ್ಕುಮಾರ್ ತಮ್ಮ ಜೀವಿತಾವಧಿಯಲ್ಲಿ ಎದುರಿಸಿದ ಅನಾರೋಗ್ಯದ ಕಠಿಣ ಹೋರಾಟದ ಕಥೆಯನ್ನು ಒಳಗೊಂಡಿರುವ `ಸರ್ವೆವರ್’ ಸಾಕ್ಷ್ಯಚಿತ್ರದ ಅಧಿಕೃತ ಟೀಸರ್ ಅನ್ನು ಅವರ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಮಾಡಲಾಗಿದೆ. ಗೀತಾ ಶಿವರಾಜ್ಕುಮಾರ್ ಒಡೆತನದ `ಗೀತಾ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ಈ ಸಾಕ್ಷ÷್ಯಚಿತ್ರ ನಿರ್ಮಾಣವಾಗಿದ್ದು, ಶಿವಣ್ಣ ಚಿಕಿತ್ಸೆ ಪಡೆಯುವಾಗಿನ ಆಸ್ಪತ್ರೆಯೊಳಗಿನ ನೈಜ ದೃಶ್ಯಗಳನ್ನು ಇದು ಒಳಗೊಂಡಿದೆ. ಈ ಟೀಸರ್ನಲ್ಲಿ ಭಾರತೀಯ ಚಿತ್ರರಂಗದ ದಿಗ್ಗಜರಾದ ಕಮಲ್ ಹಾಸನ್, ನಾಗಾರ್ಜುನ, ಕಿಚ್ಚ ಸುದೀಪ್, ಸಾಯಿ ಕುಮಾರ್, ದುನಿಯಾ ವಿಜಯ್ ಹಾಗೂ ಡಾಲಿ ಧನಂಜಯ ಶಿವಣ್ಣನ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿ ಕೊಂಡಿದ್ದಾರೆ. ಶೀಘ್ರದಲ್ಲೇ ಈ ಸಾಕ್ಷ್ಯಚಿತ್ರ ವೀಕ್ಷಣೆಗೆ ಲಭ್ಯವಾಗಲಿದೆ.`ಬೇಲ್’ ಚಿತ್ರದ ಹೊಸ ಪೋಸ್ಟರ್ ಹಾಗೂ ಬಿಡುಗಡೆ ದಿನಾಂಕ ಪ್ರಕಟವಾಗಿದೆ. ಈ ಹೊಸ ಪೋಸ್ಟರ್ನಲ್ಲಿ ಶಿವಣ್ಣ ಪೊಲೀಸ್ ಆಫೀಸರ್ ಲುಕ್ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ರೋಮಾಂಚನ ಉಂಟು ಮಾಡಿದೆ. ಈ ಆಕ್ಷನ್ ಸಿನಿಮಾ ಮುಂಬರುವ ಅಕ್ಟೋ. 2ರತೆರೆಕಾಣಲಿದೆ. ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ, ಸಾಯಿ ಕುಮಾರ್ ಮತ್ತು ಸಂಜನಾ ಆನಂದ್ ಪ್ರಮುಖ ಪಾತ್ರಗಳಲ್ಲಿದ್ದಾರೆ.`ಎ ಫಾರ್ ಆನಂದ್’ ಚಿತ್ರದ ಪ್ರೋಮೋ ರಿಲೀಸ್ ಆಗಿದೆ. ಗೀತಾ ಶಿವರಾಜ್ಕುಮಾರ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಶಿವಣ್ಣ ಟೀಚರ್ ಪಾತ್ರದಲ್ಲಿ ಮಿಂಚಲಿದ್ದಾರೆ. ವಿಶೇಷವಾಗಿ ಬಿಡುಗಡೆಯಾಗಿರುವ ಈ ಪ್ರೋಮೋದಲ್ಲಿ ಗೀತಾ ಶಿವರಾಜ್ಕುಮಾರ್, ದುನಿಯಾ ವಿಜಯ್ ಹಾಗೂ ಶ್ರೀನಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಚಿತ್ರದ ಶೂಟಿಂಗ್ ಆರಂಭವಾಗಲಿದೆ.`666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರತಂಡದಿಂದ ಶಿವಣ್ಣನಿಗೆ ವಿಶಿಷ್ಟವಾಗಿ ಶುಭಾಶಯ ಕೋರಲಾಗಿದೆ. ಚಿತ್ರದಲ್ಲಿ ಶಿವಣ್ಣ ಅವರ ಡಿಫರೆಂಟ್ ಗೆಟಪ್ ಹೊಂದಿರುವ ರೋಮಾಂಚಕ ಮೇಕಿಂಗ್ ವಿಡಿಯೋವನ್ನು ರಿಲೀಸ್ ಮಾಡಲಾಗಿದೆ.
ಶಿವಣ್ಣ ಹುಟ್ಟುಹಬ್ಬ; `ಆರೋಗ್ಯ ಭಾಗ್ಯ’ ದೊಡ್ಮನೆ ಹೊಸ ಚಿತ್ರಗಳ ಘೋಷಣೆ



