ಟೆನಿಸ್ ಜಗತ್ತಿನ ಅತ್ಯಂತ ಪ್ರತಿಷ್ಠಿತ ಗ್ರಾ÷್ಯಂಡ್ ಸ್ಲಾಮ್ ಟೂರ್ನಿಯಾದ ವಿಂಬಲ್ಡನ್ 2026ರ ಮಹಿಳಾ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಜೆಕ್ ಗಣರಾಜ್ಯದ ಯುವ ತಾರೆ ಲಿಂಡಾ ನೊಸ್ಕೋವಾ ಐತಿಹಾಸಿಕ ಜಯ ಸಾಧಿಸಿದ್ದಾರೆ. ಭಾನುವಾರ ನಡೆದ ರೋಮಾಂಚಕ ಮುಖಾಮುಖಿಯಲ್ಲಿ ಒಂಬತ್ತನೇ ಶ್ರೇಯಾಂಕದ ನೊಸ್ಕೋವಾ, ತಮ್ಮದೇ ದೇಶದ ಹಿರಿಯ ಆಟಗಾರ್ತಿ ಕ್ಯಾರೊಲಿನಾ ಮುಚೋವಾ ವಿರುದ್ಧ 6-2, 5-7, 6-3 ಸೆಟ್ಗಳ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿ, ತಮ್ಮ ವೃತ್ತಿಜೀವನದ ಮೊದಲ ಗ್ರಾ÷್ಯಂಡ್ ಸ್ಲಾಮ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.ಗೆಳೆತಿಯರ ನಡುವಣ ಪೈಪೋಟಿ:ಈ ಬಾರಿಯ ಫೈನಲ್?ನಲ್ಲಿ ಜೆಕ್ ಗಣರಾಜ್ಯದ ಆಟಗಾರ್ತಿಯರಾದ ಲಿಂಡಾ ನೊಸ್ಕೋವಾ ಮತ್ತು ಕ್ಯಾರೊಲಿನಾ ಮುಚೋವಾ ಮುಖಾಮುಖಿಯಾಗಿದ್ದು ವಿಶೇಷವಾಗಿತ್ತು. ಅದರಲ್ಲೂ ಅವರಿಬ್ಬರೂ ಆತ್ಮೀಯ ಗೆಳತಿಯರು ಎಂಬುದು ಮತ್ತೊಂದು ವೀಶೇಷ.ಕಳೆದ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಇಬ್ಬರೂ ಜೊತೆಯಾಗಿ ಡಬಲ್ಸ್ ಆಡಿದ್ದರು. ಹೀಗಾಗಿ ಇಬ್ಬರು ಆಪ್ತ ಸ್ನೇಹಿತೆಯರು ವಿಶ್ವದ ಅತ್ಯಂತ ಪ್ರತಿಷ್ಠಿತ ವೇದಿಕೆಯಲ್ಲಿ ಮುಖಾಮುಖಿಯಾಗಿದ್ದು ಜಗತ್ತಿನಾದ್ಯಂತ ಟೆನಿಸ್ ಪ್ರೇಮಿಗಳ ಗಮನ ಸೆಳೆಯಿತು.ಗೆಳೆತನವನ್ನು ಪಕ್ಕಕ್ಕಿಟ್ಟು ಶುರುವಾದ, ಈ ಪಂದ್ಯದಲ್ಲಿ ಆರಂಭದಿಂದಲೇ ಭರ್ಜರಿ ಫಾರ್ಮ್ ಪ್ರದರ್ಶಿಸಿದ 21 ವರ್ಷದ ನೊಸ್ಕೋವಾ, ಕೇವಲ 32 ನಿಮಿಷಗಳಲ್ಲಿ ಮೊದಲ ಸೆಟ್ ಅನ್ನು 6-2 ರಿಂದ ಸುಲಭವಾಗಿ ಗೆದ್ದುಕೊಂಡರು.ಎರಡನೇ ಸೆಟ್ನಲ್ಲೂ ಅದ್ಭುತ ಪ್ರದರ್ಶನ ನೀಡಿದ ಅವರು 5-2 ರ ಭಾರಿ ಮುನ್ನಡೆ ಸಾಧಿಸಿ ಪ್ರಶಸ್ತಿಯ ಅತ್ಯಂತ ಸಮೀಪದಲ್ಲಿದ್ದರು. ಈ ಹಂತದಲ್ಲಿ ಅವರಿಗೆ ಬರೋಬ್ಬರಿ 5 ಚಾಂಪಿಯನ್ಶಿಪ್ ಪಾಯಿಂಟ್ಗಳು ಸಿಕ್ಕಿದ್ದರೂ, ಒತ್ತಡಕ್ಕೆ ಒಳಗಾಗಿ ಡಬಲ್ ಫಾಲ್ಟ್ಗಳನ್ನು ಮಾಡಿದ್ದರಿಂದ ಪಂದ್ಯ ಕೈತಪ್ಪುವ ಆತಂಕ ಎದುರಾಯಿತು. ಇದರ ಸಂಪೂರ್ಣ ಲಾಭ ಪಡೆದ 10ನೇ ಶ್ರೇಯಾಂಕದ ಕ್ಯಾರೊಲಿನಾ ಮುಚೋವಾ ಸತತ 5 ಗೇಮ್ಗಳನ್ನು ಗೆದ್ದು, ಎರಡನೇ ಸೆಟ್ ಅನ್ನು 7-5 ರಿಂದ ತಮ್ಮದಾಗಿಸಿಕೊಂಡರು. ಆದರೆ ಮೂರನೇ ಹಾಗೂ ನಿರ್ಣಾಯಕ ಸೆಟ್ನಲ್ಲಿ ಅದ್ಭುತವಾಗಿ ಪುನರಾಗಮನ ಮಾಡಿದ ನೊಸ್ಕೋವಾ, ಆರಂಭದಲ್ಲೇ 3-0 ಮುನ್ನಡೆ ಕಾಯ್ದುಕೊಂಡರು. ಅಂತಿಮವಾಗಿ ತಮ್ಮ 6ನೇ ಚಾಂಪಿಯನ್ಶಿಪ್ ಪಾಯಿಂಟ್ನಲ್ಲಿ ಕ್ಲಿನಿಕಲ್ ಸರ್ವ್ ಮೂಲಕ ಪಂದ್ಯವನ್ನು ಮುಗಿಸಿ, ಪ್ರತಿಷ್ಠಿತ ವೆನಸ್ ರೋಸ್ವಾಟರ್ ಡಿಶ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.



