ಚನ್ನರಾಯಪಟ್ಟಣ: ವಾಲ್ಮೀಕಿ ಸಮುದಾಯವು ಗ್ರಾಮ ಮಟ್ಟದಿಂದ ಸಂಘಟನೆಯಾಗಿ ಹೋಬಳಿ ತಾಲೂಕು ಮಟ್ಟದ ವರೆಗೂ ಸಂಘಟನೆ ಆದರೆ ಸಮುದಾಯದ ಒಗ್ಗಟ್ಟು ಇರುತ್ತದೆ ಎಂದು ದೇವನಹಳ್ಳಿ ತಾಲ್ಲೂಕು ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷರಾದ ನಾಗೇಶ್ ಬಾಬು ಹೇಳಿದರು
ದೇವನಹಳ್ಳಿ ತಾಲೂಕು ನಲ್ಲೂರು ಗಂಗಾದೇವಿ ದೇವಾಲಯ ಆವರಣದಲ್ಲಿ ಚನ್ನರಾಯಪಟ್ಟಣ ಹೋಬಳಿ ವಾಲ್ಮೀಕಿ ನಾಯಕ ಸಂಘದ ನೂತನ ಅಧ್ಯಕ್ಷ ಭಾಸ್ಕರ್ ನಾಯಕ್ ಪದಾಧಿಕಾರಿಗಳನ್ನು ಅಭಿನಂದಿಸಿ ಮಾತನಾಡಿ ನಾವು ಹುಟ್ಟಿ ದಾಗಲೇ ನಾಯಕರು ಆದರೂ ಗ್ರಾಮ ಮಟ್ಟದಿಂದ ಸಂಘಟನೆಯಾಗಿ ನಾಯಕತ್ವ ಬೆಳೆಸಿಕೊಳ್ಳಬೇಕು ಒಗ್ಗಟ್ಟಿನಿಂದ ಸಂಘಟ ನೆಗೆ ಹೆಚ್ಚಿನ ಗೌರವ ಸಿಗುತ್ತದೆ ಎಂದರು.
ಹೋಬಳಿ ನೂತನ ಸಂಘದ ಅಧ್ಯಕ್ಷ ರಾಗಿ ಭಾಸ್ಕರ್ ನಾಯಕ್ ಮಾತನಾಡಿ ಹೋಬಳಿ ಮಟ್ಟದ ಎಲ್ಲಾ ಪದಾಧಿಕಾರಿಗಳ ಸಹಕಾರ ಪಡೆದು ಸಂಘಟನೆ ಮಾಡುತ್ತೇವೆ ಗ್ರಾಮಗಳಿಂದ ಎಲ್ಲರೂ ಸಂಘಟನೆಗೆ ಮುಂದಾಗಬೇಕು ನಮ್ಮ ಸಮುದಾಯ ಎಷ್ಟು ಜನ ಇದೆ ಎಂಬುದು ಎಲ್ಲರಿಗೂ ತಿಳಿಯಬೇಕು ಎಂದರು.
ನಾಯಕ ಸಂಘದ ಸಂಸ್ಥಾಪಕ ಅಧ್ಯಕ್ಷ ಡಾ. ಮೂರ್ತಿ ಮಾತನಾಡಿ ವಾಲ್ಮೀಕಿ ನಾಯಕದ ಸಮಾಜ ಪ್ರತಿಯೊಬ್ಬರು ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಸಮಾಜದ ಮುಖ್ಯ ವಾಹಿನಿಗೆ ಬರಬಹುದು ಯಾವುದೇ ಕಾರ್ಯಕ್ರಮವಿರಲಿ ಭಾಗವಹಿಸಿ ಎಂದರು
ಈ ಸಂದರ್ಭದಲ್ಲಿ ವಾಲ್ಮೀಕಿ ಸಮು ದಾಯದ ಮುಖಂಡರಾದ ಕೊಂಡಪ್ಪ ಹೋಬಳಿ ಗೌರವಾಧ್ಯಕ್ಷರಾದ ವೀರಭದ್ರಪ್ಪ ಉಪಾಧ್ಯಕ್ಷರಾದ ಚಿಕ್ಕರಾಮಕೃಷ್ಣ ಮುಕುಂದ ಕಾರ್ಯದರ್ಶಿ ನಾಗೇಶ್ ಸಹ ಕಾರ್ಯದರ್ಶಿ ನಾರಾಯಣಸ್ವಾಮಿ ನಿರ್ದೇಶಕರಾದ ವೆಂಕಟೇಶ್ ರಮೇಶ್ ಆರ್. ಎ.ಸುರೇಶ್ ಆರ್ ಕೆ ಮಂಜುನಾಥ್ ಅಮರೇಶ್ ಕೆ ಎನ್ ನಾಗರಾಜ್ ಚನ್ನ ಕೃಷ್ಣಪ್ಪ ಹೋರಾಟಗಾರರ ವೆಂಕಟರಮಣಪ್ಪ ಹಾಗೂ ತಾಲೂಕು ವಾಲ್ಮೀಕಿ ಸಮುದಾಯದ ಮುಖಂಡರುಗಳು ಇನ್ನು ಮುಂತಾದವರು ಹಾಜರಿದ್ದರು.
ವಾಲ್ಮೀಕಿ ಸಮುದಾಯ ಗ್ರಾಮ ಮಟ್ಟದಿಂದ ಸಂಘಟನೆ ಆಗಬೇಕು: ತಾಲ್ಲೂಕು ಅಧ್ಯಕ್ಷ ನಾಗೇಶ್ ಬಾಬು ಕರೆ



