ಬೆಂಗಳೂರು : ಯಲಹಂಕ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಜನಕುಂಟೆ ಆರ್ಟಿಓ ಕಚೇರಿ ಬಳಿ ಬೆಸ್ಕಾಂ ರವರು ಕೇಬಲ್ ಅಳವಡಿಸಲು ಗುಂಡಿ ತೋಡಿದ್ದಕೆ ಬ್ಯಾರಿ ಗೇಟ್ ಅಳವಡಿಸಿದ್ದರು ಸಹ ದ್ವಿಚಕ್ರ ವಾಹನ ಮಧ್ಯರಾತ್ರಿಯಲ್ಲಿ ಅತಿ ವೇಗವಾಗಿ ಮ್ಯಾರಿಕೇಟ್ ಗೆ ಡಿಕ್ಕಿ ಹೊಡೆದುಕೊಂಡು ಅಂಜನ್ ಮೂರ್ತಿ (22) ಎಂಬ ವ್ಯಕ್ತಿ ಮೃತಪಟ್ಟಿರುತ್ತಾನೆ, ಯಲಹಂಕ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮತ್ತೊಂದು ಅಪಘಾತ ಪ್ರಕರಣ ಚಿಕ್ಕಬಾಣವಾರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾದನಾಯಕನ ಹಳ್ಳಿ ಬಳಿ ಇರುವ ನೈಸ್ ರಸ್ತೆಯ ಎಂಟ್ರಿಯಲ್ಲಿ ದ್ವಿಚಕ್ರ ವಾಹನ ಸವಾರನೊಬ್ಬ ದ್ವಿಚಕ್ರ ವಾಹನದಲ್ಲಿ ಸ್ಕಿಡ್ ಆಗಿ ಹಾಲಿ ಅಕ್ಬರ್(22) ಎಂಬ ಯುವಕ ಮೃತಪಟ್ಟಿರುತ್ತಾನೆ.ಹಾಗೂ ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ವೀರಭದ್ರ ನಗರದ ಬಳಿ ಇರುವ ರಿಂಗ್ ರಸ್ತೆಯಲ್ಲಿ ಸ್ಯೆದ್ ಅಕ್ಬರ್ 88 ವರ್ಷದ ವ್ಯಕ್ತಿ ನಡೆದು ಹೋಗುವಾಗ ರಾತ್ರಿ 11:45 ರ ಸುಮಾರಿಗೆ ಅಪರಿಚಿತವಾಹನ ಡಿಕ್ಕಿ ಹೊಡೆದಿರುತ್ತದೆ.ವೃದ್ಧರಾದ ಸೈಯದ್ ಅಕ್ಬರ್ ರವರಿಗೆ ಸರಿಯಾಗಿ ಕಿವಿ ಕೇಳುವುದಿಲ್ಲ ಹಾಗೂ ಕಣ್ಣು ಕಾಣಿಸುವುದಿಲ್ಲ ಹಾಗೂ ಮನೆಯಿಂದ ಹೇಗೆ ಬಂದರೂ ಎಂದು ತಿಳಿಯುತ್ತಿರುವುದಿಲ್ಲವೆಂದು ಮೃತನ ಕಡೆಯವರು ತಿಳಿಸಿರುತ್ತಾರೆ. ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



