ಟೆನಿಸ್: ಕಳೆದ 2025ರ ವಿಂಬಲ್ಡನ್ ಮಹಾಫೈನಲ್ನಲ್ಲಿ ಸ್ಪೇನ್ನ ದೈತ್ಯ ಆಟಗಾರ ಕಾರ್ಲೋಸ್ ಅಲ್ಕರಾಝ್ ಅವರನ್ನು ಮಣಿಸಿ ಇತಿಹಾಸ ನಿರ್ಮಿಸಿದ್ದ ಯಾನಿಕ್ ಸಿನ್ನರ್, ಇದೀಗ ಜರ್ಮನಿಯ ಅಲೆಕ್ಸಾಂಡರ್ ಝ್ವೆರೆಫ್ ಅವರ ಕಠಿಣ ಸವಾಲನ್ನು ಮೆಟ್ಟಿ ನಿಂತು ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಈ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. 2026ರ ವಿಂಬಲ್ಡನ್ ಟೆನಿಸ್ ಚಾಂಪಿಯನ್ಶಿಪ್ನಲ್ಲಿ ವಿಶ್ವದ ನಂ. 1 ಟೆನಿಸ್ ಆಟಗಾರ ಇಟಲಿಯ ಯಾನಿಕ್ ಸಿನ್ನರ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಆಲ್ ಇಂಗ್ಲೆAಡ್ ಕ್ಲಬ್ ಕೋರ್ಟ್ನಲ್ಲಿ ಭಾನುವಾರ (ಜುಲೈ 12, 2026) ನಡೆದ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ಜರ್ಮನಿಯ ಅಲೆಕ್ಸಾಂಡರ್ ಝ್ವೆರೆಫ್ ಅವರನ್ನು ಮಣಿಸಿ, ಸತತ ಎರಡನೇ ಬಾರಿಗೆ ವಿಂಬಲ್ಡನ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ನಾಲ್ಕು ಸೆಟ್ಗಳಲ್ಲಿ ಪಂದ್ಯ ಅಂತ್ಯ: ನಾಲ್ಕು ಸೆಟ್ಗಳ ಕಾಲ ನಡೆದ ಈ ರೋಚಕ ಹೋರಾಟದಲ್ಲಿ ಯಾನಿಕ್ ಸಿನ್ನರ್ 6-7(7), 7-6(2), 6-3, 6-4 ಸೆಟ್ಗಳಿಂದ ಝ್ವೆರೆಫ್ ವಿರುದ್ಧ ಜಯಭೇರಿ ಬಾರಿಸಿದರು. ಸುಮಾರು 3 ಗಂಟೆ 46 ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ, ಮೊದಲ ಸೆಟ್ ಸೋತರೂ ಅದ್ಭುತವಾಗಿ ಪುನರಾಗಮನ ಮಾಡಿದ ಸಿನ್ನರ್, ಝ್ವೆರೆಫ್ ವಿರುದ್ಧ ಸತತ 10ನೇ ಜಯ ದಾಖಲಿಸಿದರು.
ಮೊದಲ ಸೆಟ್: 6-7(7)- ಅಲೆಕ್ಸಾಂಡರ್ ಝ್ವೆರೆಫ್ಗೆ ಜಯ
ಎರಡನೇ ಸೆಟ್: 7-6(2)- ಯಾನಿಕ್ ಸಿನ್ನರ್ಗೆ ಜಯ
ಮೂರನೇ ಸೆಟ್: 6-3- ಯಾನಿಕ್ ಸಿನ್ನರ್ಗೆ ಜಯ
ನಾಲ್ಕನೇ ಸೆಟ್: 6-4- ಯಾನಿಕ್ ಸಿನ್ನರ್ಗೆ ಜಯ
ಸಿನ್ನರ್ ಸಾಧನೆ: ಸತತ ಎರಡನೇ ಪ್ರಶಸ್ತಿ: ವಿಂಬಲ್ಡನ್ ಇತಿಹಾಸದಲ್ಲಿ (ಓಪನ್ ಎರಾ) ಸತತವಾಗಿ ಎರಡು ಬಾರಿ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದ ಕೇವಲ 10ನೇ ಆಟಗಾರ ಎಂಬ ಹೆಗ್ಗಳಿಕೆಗೆ ಸಿನ್ನರ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ 2025 ರಲ್ಲಿ ಸಿನ್ನರ್ ವಿಂಬಲ್ಡನ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.
5ನೇ ಗ್ರಾಂಡ್ ಸ್ಲಾಮ್: ಇದು ಸಿನ್ನರ್ ವೃತ್ತಿಜೀವನದ 5ನೇ ಗ್ರಾಂಡ್ ಸ್ಲಾಮ್ ಪ್ರಶಸ್ತಿಯಾಗಿದ್ದು, 2026ರ ಸಾಲಿನ ಅವರ ಮೊದಲ ಮೇಜರ್ ಪ್ರಶಸ್ತಿಯಾಗಿದೆ.
100ನೇ ಜಯದ ಸಂಭ್ರಮ: ಈ ಗೆಲುವಿನೊಂದಿಗೆ ಯಾನಿಕ್ ಸಿನ್ನರ್ ಗ್ರಾಂಡ್ ಸ್ಲಾಮ್ ಇತಿಹಾಸದಲ್ಲಿ ತಮ್ಮ 100ನೇ ಪಂದ್ಯದ ಗೆಲುವು ಸಾಧಿಸಿದ್ದಾರೆ.
ಚಾಂಪಿಯನ್ ಕಂಬ್ಯಾಕ್: ಫ್ರೆಂಚ್ ಓಪನ್ನಲ್ಲಿ ಬೇಗನೆ ಹೊರಬಿದ್ದಿದ್ದ ಯಾನಿಕ್ ಸಿನ್ನರ್, ಈ ಬಾರಿ ಯಾವುದೇ ಗ್ರಾಸ್-ಕೋರ್ಟ್ ಅಭ್ಯಾಸ ಪಂದ್ಯಗಳನ್ನು ಆಡದೆ ನೇರವಾಗಿ ವಿಂಬಲ್ಡನ್ಗೆ ಬಂದಿದ್ದರು. ಆರಂಭಿಕ ಸುತ್ತಿನಲ್ಲಿ ಮಿಯೋಮಿರ್ ಕೆಕ್ಮನೋವಿಕ್ ವಿರುದ್ಧ 5 ಸೆಟ್ಗಳ ಕಠಿಣ ಹೋರಾಟ ಎದುರಿಸಿದ ಅವರು, ಸೆಮಿಫೈನಲ್ನಲ್ಲಿ 7 ಬಾರಿಯ ಚಾಂಪಿಯನ್ ನೊವಾಕ್ ಜೊಕೊವಿಚ್ ಅವರನ್ನು ನೇರ ಸೆಟ್ಗಳಲ್ಲಿ ಸೋಲಿಸಿ ಫೈನಲ್ಗೆ ಲಗ್ಗೆ ಇಟ್ಟಿದ್ದರು. ಇತ್ತ ನೊವಾಕ್ ಜೊಕೊವಿಚ್ ಅವರಿಗೆ ಸೋಲುಣಿಸಿದ ಉತ್ಸಾಹದಲ್ಲೇ ಕಣಕ್ಕಿಳಿದಿದ್ದ ಯಾನಿಕ್ ಸಿನ್ನರ್ ಮೊದಲ ಸೆಟ್ ಅನ್ನು ಹೊರತುಪಡಿಸಿ, ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರು. ಪರಿಣಾಮ ಮೊದಲ ಸೆಟ್ ಸೋತರೂ, ಆ ಬಳಿಕ ಬ್ಯಾಕ್ ಟು ಬ್ಯಾಕ್ 3 ಸೆಟ್ಛಿಗಳನ್ನು ಗೆದ್ದು 2ನೇ ಬಾರಿ ವಿಂಬಲ್ಡನ್ ಅಂಗಳದಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ.
ಟೆನಿಸ್ ಚಾಂಪಿಯನ್ಶಿಪ್ನಲ್ಲಿ ಯಾನಿಕ್ ಸಿನ್ನರ್ ವಿಂಬಲ್ಡನ್ ಚಾಂಪಿಯನ್



