ಯಶವಂತಪುರ: ಡ್ರಗ್ಸ್ ಮತ್ತು ಮಾದಕ ವ್ಯಸನವನ್ನು ಮುಕ್ತಗೊಳಿಸಲು ಬೇಡ ಬ್ರೋ ಎಂಬ ಅಭಿಯಾನ ವಿಧಾನ ಸೌಧ 3ನೇ ಮಹಡಿಯಿಂದ ಶುರು ಆಗಬೇಕು. ಆಗ ಮಾತ್ರ ತಳಮಟ್ಟದಲ್ಲೂ ಈ ಅಭಿಯಾನ ಯಶಸ್ವಿಯಾಗಲು ಸಾಧ್ಯ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಗ್ರಹ ಸಚಿವ ಪ್ರಿಯಾಂಕಾ ಖರ್ಗೆ ಯವರಿಗೆ ಒತ್ತಾಯವನ್ನು ಮಾಡಿದ್ದಾರೆ.ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಒಳ್ಳಪಟ್ಟಿರುವ .ಬೆಂಗಳೂರು ನೈರುತ್ಯ ವಲಯ ಪೊಲೀಸ್ ಇಲಾಖೆ ಕೆಂಗೇರಿ ಪೊಲೀಸ್ ಠಾಣೆ ವತಿಯಿಂದ ಗ್ಲೋಬಲ್ ವಿಲೇಜ್ ನಲ್ಲಿ ಆಯೋಜಿಸಲಾಗಿದ್ದ ಡ್ರಗ್ಸ್ ವ್ಯಸನ ಮುಕ್ತ ಜಾಗೃತಿ ಕಾರ್ಯಕ್ರಮ ಬೇಡ ಬ್ರೋಷ್ ಎಂಬ ವಿನೂತನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗೃಹ ಮಂತ್ರಿ ಖರ್ಗೆ ಅವರು, ಅನವಶ್ಯಕ ವಿಷಯಗಳ ಬಗ್ಗೆ ಮಾತನಾಡುವುದಕ್ಕಿಂತ ಡ್ರಗ್ಸ್ ಮಾದಕ ದ್ರವ್ಯದಂತಹ ಅಪಾಯಕಾರಿ ವಿಷಯದ ಬಗ್ಗೆ ಹೆಚ್ಚು ಮಹತ್ವ ನೀಡಬೇಕಿದೆ. ಬೇರೆ ವಿಷಯಗಳ ಬಗ್ಗೆ ಅವರು ಮಾತನಾಡಲಿ, ಅದರ ಬಗ್ಗೆ ನನ್ನ ಆಕ್ಷೇಪವೇನಿಲ್ಲ. ಇಂತಹ ಸಮಾಜ ವಿರೋಧಿ ಚಟುವಟಿಕೆ ನಿಗ್ರಹದತ್ತ ಮೊದಲ ಪ್ರಾಶಸ್ತ್ಯ ನೀಡಲಿ ಎಂದರು.ಯುವಕರು ದಾರಿ ತಪ್ಪಾದಂತೆ ಎಚ್ಚರಿಕೆ ವಹಿಸಲಿ ಅದರಂತೆ ಯಶವಂತಪುರ ಕ್ಷೇತ್ರದ ಉಲ್ಲಾಳು ಭಾಗದಲ್ಲಿ ಅಧಿಕವಾಗಿದ್ದ ಮಾದಕ ದ್ರವ್ಯದ ಉಪಟಳ ಇದೀಗ ತಹಬದಿಗೆ ಬಂದಿದೆ. ಪೊಲೀಸ್ ಇಲಾಖೆಯಿಂದ ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ನಡೆಸುವ ಮೂಲಕ ಡ್ರಗ್ಸ್ ಹಾವಳಿಗೆ ಕಡಿವಾಣ ತರಬೇಕಿದೆ ಎಂದರು. ಡಿಸಿಪಿ ಅನಿತಾ ಬಿ ಹದ್ದಣ್ಣನವರ್ ಮಾತನಾಡಿ, ಈ ಮೊದಲು ಯಾವುದೇ ವ್ಯಕ್ತಿ ಅಥವಾ ಸಮಾಜವನ್ನು ನಾಶ ಮಾಡಲು ಮಾರಕಾಸ್ತ್ರಗಳು ಅಥವಾ ಬಂದೂಕನ್ನು ಬಳಸಬೇಕಿತ್ತು. ಬದಲಾದ ಕಾಲಘಟ್ಟದಲ್ಲಿ ಯುವ ಜನಾಂಗವನ್ನು ವ್ಯಸನಕ್ಕೆ ದೂಡಿದರೆ ಇಡೀ ಸಮಾಜದ ಬೆಳವಣಿಗೆಗೆ ಕೊಡಲಿ ಪೆಟ್ಟು ನೀಡಿ ದಂತಾಗುತ್ತದೆ ಎಂದರು.ಯುವ ಜನಾಂಗ ಡ್ರಗ್ಸ್ ವ್ಯಸನದಿಂದ ದೂರವಿರಬೇಕು.ಆರೋಗ್ಯ ಕುಂಠಿತವಾಗಲಿದೆ. ಚಟ ಮುಕ್ತ ಯುವಜನಾಂಗವೇ ಸಮಾಜದ ನಿಜವಾದ ಶಕ್ತಿ? ಎಂದು ಎಸಿಪಿ ಸತ್ಯವತಿ ಹೇಳಿದರು.ದೇಶದಲ್ಲಿ 6 ಕೋಟಿ ಮಾದಕ ವ್ಯಸನಿಗಳಿದ್ದಾರೆ. ಈ ಪೈಕಿ 18ರಿಂದ 25ರ ನಡುವಿನ ಯುವಕರೇ ಈ ಜಾಲಕ್ಕೆ ಬಲಿಯಾಗಿರುವುದು ಆತಂಕಕಾರಿ ಬೆಳವಣಿಗೆ ಎಂದು ವೈದ್ಯೆ ಮಾತಂಗಿ ಹೇಳಿದರು.ಕಾರ್ಯಕ್ರಮದಲ್ಲಿ ಪೋಲಿಸ್ ಇನ್ಸ್ಪೆಕ್ಟರ್ ಜಗದೀಶ್ ಇಂತಹ ವಿನೂತನ ಕಾರ್ಯಕ್ರಮ ಮಾಡಿದಂತಹ ಇವರ ಕ್ರಯ ಮೆಚ್ಚುವಂತಹದು ಇನ್ನು ಮುಂದಿನ ದಿನಗಳಲ್ಲಿ ಡ್ರಗ್ಸ್ ಮುಕ್ತ ಅಭಿಯಾನ ಬೇಡ ಬ್ರೋ ನಡೆಯಲಿದೆ ಯುವಕರಿಗೆ ಜಾಗೃತಿ ಮೂಡಿಸುವ ಕೆಲಸಗಳು ಆಗಲಿ ಎಂದು ತಿಳಿಸಿದರು ಈ ಸಂದರ್ಭದಲ್ಲಿ, ಸಬ್ ಇನ್ಸ್ಪೆಕ್ಟರ್ ಗಳಾದ ಶ್ರೀನಿವಾಸ್, ಕರಿಯಣ್ಣ, ಮುರಳಿಮೋಹನ್ ಹನುಮಂತ ಹಾದಿಮನಿ ಶೇಖರ್, ಸೇರಿದಂತೆ ಜೆಎಸ್ಎಸ್, ಬಿಜಿಎಸ್ ಕಾಲೇಜಿನ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.



