ಬೆಂಗಳೂರು: ಕೇರಳದಲ್ಲಿ ಕೋವಿಡ್ ಹೊಸ ವೈರಸ್ ಅಬ್ಬರಿಸುತ್ತಿರೋ ಹೊತ್ತಲ್ಲೇ ರಾಜ್ಯದಲ್ಲೂ ಕೋವಿಡ್ ಆತಂಕ ಶುರುವಾಗಿದೆ. ಇತ್ತ ರಾಜ್ಯ ರಾಜಧಾನಿ ಬೆಂಗಳೂರಲ್ಲೂ ಕೋವಿಡ್ ಎದುರಿಸೋಕೆ ಬಿಬಿಎಂಪಿ ಸಜ್ಜಾಗುತ್ತಿದೆ.
ಹೊಸ ವರ್ಷ, ಕ್ರಿಸ್ ಮಸ್ ಆಚರಣೆಯಿಂದ ಕೊರೊನಾ ಹೆಚ್ಚಾಗುತ್ತ ಎಂಬ ಭಯ ಕಾಡುತ್ತಿದೆ. ಇದರ ನಡುವೆ ಜನವರಿ ಮೊದಲ ವಾರ ರಾಜ್ಯದಲ್ಲಿ ಕೊರೊನಾ ಸ್ಫೋಟಗೊಳ್ಳುವ ಸಾಧ್ಯತೆ ಇದೆ ಎಂದು IISC ತಜ್ಞರು ಹಾಗೂ TAC ಎಕ್ಸ್ಪರ್ಟ್ ತಂಡ ಮಾಹಿತಿ ನೀಡಿದೆ.
ಜನವರಿ ಮೊದಲ ವಾರದ ಬಳಿಕ ರಾಜ್ಯದಲ್ಲಿ ಕೊರೊನಾ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸಿಎಂ ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲಿ IISC ತಜ್ಞರು ಹಾಗೂ ಖಿಂಅ ಎಕ್ಸ್ಪರ್ಟ್ ತಂಡ ವರದಿ ನೀಡಿದೆ.
ಜನವರಿ ಮೊದಲ ವಾರದಲ್ಲಿ ಅತಿ ಹೆಚ್ಚು ಕೇಸ್ ದಾಖಲಾಗುವ ಸಾಧ್ಯತೆ ಇದೆ. ಜನವರಿ ಮೊದಲ ವಾರಿ ಕೊರೊನಾ ಏರಿಕೆಯಾಗಿ ಫೆಬ್ರವರಿ ಕೊನೆ ವಾರ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.