ಬೆಂಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಫಲಿತಾಂಶವನ್ನು ಈ-ಮೇಲ್ ಮೂಲಕ ಚುನಾವಣಾಧಿಕಾರಿ ಘೋಷಿಸಿದ್ದಾರೆ. 52 ಮತಗಳ ಅಂತರದಿಂದ ಬಿಜೆಪಿಯ ಡಿ.ಎನ್.ಜೀವರಾಜ್ ಗೆಲುವು ಎಂದು ಎಂದು ತಿಳಿಸಿದ್ದಾರೆ.
2023 ರ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಟಿ.ಡಿ.ರಾಜೇಗೌಡ ಗೆಲುವು ಎಂದಿದ್ದ ಚುನಾವಣಾಧಿಕಾರಿ. 201 ಮತಗಳ ಅಂತರದಿಂದ ಟಿ.ಡಿ.ರಾಜೇಗೌಡ ಗೆಲುವು ಎಂದು ಘೋಷಿಸಿದ್ದ ಅಂದಿನ ಚುನಾವಣಾಧಿಕಾರಿ. ಬಳಿಕ ಅಂಚೆ ಮತಗಳ ಎಣಿಕೆ ಪ್ರಶ್ನಿಸಿ, ಕೋರ್ಟ್ ಮೆಟ್ಟಿಲೇರಿದ್ದ ಡಿ.ಎನ್.ಜೀವರಾಜ್. ಸತತ ಎರಡು ಮುಕ್ಕಾಲು ವರ್ಷಗಳಿಂದ ಕೋರ್ಟ್ನಲ್ಲಿದ್ದ ಮರು ಮತ ಎಣಿಕೆಗೆ ಅರ್ಜಿ, ಕೊನೆಗೂ ಕ್ಷೇತ್ರದಲ್ಲಿ ಅಂಚೆ ಮತಗಳ ಎಣಿಕೆ ಕಾರ್ಯ ಆಗಬೇಕೆಂದು ಕೋರ್ಟ್ ಆದೇಶಿಸಿತ್ತು. ಕೋರ್ಟ್ ಆದೇಶದ ಮೇರೆಗೆ ಮೇ 2 ರಂದು ನಡೆದ ಅಂಚೆ ಮತಗಳ ಮರು ಎಣಿಕೆ ಕಾರ್ಯ ನಡೆದಿದ್ದು, ಈಗ ಈ-ಮೇಲ್ ಚುನಾವಣಾಧಿಕಾರಿ ಫಲಿತಾಂಶವನ್ನು ಘೋಷಿಸಿದ್ದಾರೆ.
ಶೃಂಗೇರಿ ವಿಧಾನಸಭಾ ಕ್ಷೇತ್ರ ಬಿಜೆಪಿಗೆ ತೆಕ್ಕೆಗೆ ಡಿ.ಎನ್. ಜೀವರಾಜ್ ಗೆಲುವು



