ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರ, ಮೋದಿ ಆಸ್ಪತ್ರೆ ಮತ್ತು ಮಂಜುನಾಥನಗರದಲ್ಲಿ ಮುಖ್ಯಮಂತ್ರಿಯಾಗಿ ಪದಗ್ರಹಣ ಡಿ.ಕೆ.ಶಿವಕುಮಾರ್ ರವರು ಈ ಶುಭ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಸಾವಿರಾರು ಜನರಿಗೆ ಅನ್ನದಾನ ಏರ್ಪಡಿಸಲಾಗಿತ್ತು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ರವರು ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಜನಾರ್ಧನ್, ಆನಂದ್ ಪರಿಸರ ರಾಮಕೃಷ್ಣ, ಪ್ರಕಾಶಂ, ಸಲೀಮ್, ಕುಶಾಲ್ ಹರವೇಗೌಡ, ಪುಟ್ಟರಾಜು, ನಿರಂಜನ್, ಚಂದ್ರು,ಹೇಮರಾಜು, ಸುಂಕದಕಟ್ಟೆ ನವೀನ್, ಓಬಳೇಶ್, ರಂಜೀತ್ ಅರವಿಂದ್ ಅಯ್ಯಂಗಾರ್, ರವಿಕುಮಾರ್ ಮತ್ತು ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.ಇದೇ ಸಂದರ್ಭದಲ್ಲಿ ಎಸ್.ಮನೋಹರ್ ರವರು ಮಾತನಾಡಿ ಡಿ.ಕೆ.ಶಿವಕುಮಾರ್ ರವರು ಕಳೆದ 40ವರ್ಷಗಳಿಂದ ಕಾಂಗ್ರೆಸ್ ನಿಷ್ಟಾವಂತ ಕಾರ್ಯಕರ್ತನಾಗಿ ಎನ್.ಎಸ್.ಯು.ಐ ಮತ್ತು ಯುವ ಕಾಂಗ್ರೆಸ್ ಮತ್ತು ಜಿಲ್ಲಾ ಕಾಂಗ್ರೆಸ್ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.ಸಂಘಟನೆ, ನಾಯಕತ್ವ, ಹೋರಾಟಕ್ಕೆ ಮತ್ತೊಂದು ಹೆಸರು ಡಿ.ಕೆ.ಶಿವಕುಮಾರ್. ಕೆಪಿಸಿಸಿ ಅಧ್ಯಕ್ಷರಾಗಿ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂತು.ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ 6 ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಜನತೆಗೆ ಕೊಡುಗೆ ನೀಡಿದರು. ಗ್ಯಾರಂಟಿ ಯೋಜನೆಗಳು ಕೊಟ್ಯಂತರ ಜನರು ಫಲಾನುಭವಿಗಳು ಇದ್ದಾರೆ.ರಾಜ್ಯದ ಅಭಿವೃದ್ದಿ ಮತ್ತು ಬೆಂಗಳೂರು ನಗರದ ಕುರಿತು ಅಪಾರ ಅನುಭವವುಳ್ಳ ಡಿ.ಕೆ .ಶಿವಕುಮಾರ್ ರವರ ಸಾರಥ್ಯದಲ್ಲಿ ರಾಜ್ಯ ಅಭಿವೃ ದ್ಧಿಯಾಗಲಿ ಮತ್ತು ಜನರ ಆಶೀರ್ವಾದ ಅವರ ಮೇಲೆ ಇರಲಿ ಎಂದು ಅನ್ನದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.



