ಚಿಕ್ಕಬಳ್ಳಾಪುರ: ನಗರಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಲಭ್ಯವಿರುವ ಜಲಮೂಲಗಳ ನೀರಿನ ಸಮರ್ಪಕ ಬಳಕೆ ಮತ್ತು ಬಳಸಿದ ನೀರಿನ ನಿರ್ವಹಣಾ ವ್ಯವಸ್ಥೆಗಳ ಸಮಗ್ರ ಮೌಲ್ಯ ಮಾಪನ ನಡೆಸಿ ಸುಸ್ಥಿರ ನಿರ್ವಹಣಾ ಕ್ರಮಗಳನ್ನು ಅಳವಡಿಸಿಕೊಳ್ಳುವ ಉದ್ದೇಶದಿಂದ “ಜಿಲ್ಲೆಯ ನಗರಗಳ ನೀರಿನ ಸ್ಥಿತಿ ಸ್ಥಾಪಕತ್ವ ನಿರ್ಮಾಣ ಸಹಕಾರ” ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ತಿಳಿಸಿದರು.ಇಲ್ಲಿನ ಜಿಲ್ಲಾ ಪಂಚಾಯತ್ ನ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆದ “ನಗರಗಳ ನೀರಿನ ಸ್ಥಿತಿ ಸ್ಥಾಪಕತ್ವ ನಿರ್ಮಾಣ ಸಹಕಾರ ಕುರಿತ ತರಬೇತಿ”ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಜಿಲ್ಲೆಯ ಆರು ನಗರ ಸ್ಥಳೀಯ ಸಂಸ್ಥೆಗಳು, ಅಆಖI ಹಾಗೂ IIಊS ಇವರ ಸಹಭಾಗಿತ್ವದಲ್ಲಿ “ಜಿಲ್ಲೆಯ ನಗರಗಳ ನೀರಿನ ಸ್ಥಿತಿ ಸ್ಥಾಪಕತ್ವ ನಿರ್ಮಾಣ ಸಹಕಾರ” ಎಂಬ ಯೋಜನೆಯನ್ನು ಏಪ್ರಿಲ್ -2026 ರಿಂದ ಮಾರ್ಚ್-2028 ರವರೆಗೆ ಹಮ್ಮಿಕೊಳ್ಳಲಾಗಿದೆ. ಈ ಯೋಜನೆಯಡಿ ಲಭ್ಯ ನೀರು ಬಳಕೆ ಮತ್ತು ಬಳಸಿದ ನೀರನ ನಿರ್ವಹಣಾ ವ್ಯವಸ್ಥೆಗಳ ಸಮಗ್ರ ಮೌಲ್ಯ ಮಾಪನ ನಡೆಸಿ, ಸುಸ್ಥಿರ ನಿರ್ವಹಣಾ ಕ್ರಮಗಳನ್ನು ಅಳವಡಿಸಿಕೊಳ್ಳಲು ಮೊದಲು ತಾಂತ್ರಿಕ ಮಾರ್ಗಸೂಚಿಗಳನ್ನು ಸಿದ್ದಪಡಿಸಲಾಗುತ್ತದೆ, ಸ್ಥಳೀಯ ಸಂಸ್ಥೆಗಳ ನೀರಿನ ಪೂರೈಕೆಯ ನಿರ್ವಹಣಾ ಸಾಮರ್ಥ್ಯವನ್ನು ಹೆಚ್ಚಿಸಲು ಯೋಜಿಸಲಾಗಿದೆ. ಜೊತೆಗೆ ನೀರಿನ ಸೌಕರ್ಯಗಳನ್ನೊದಗಿಸುವಲ್ಲಿ ಇರುವ ಕೊರತೆಗಳು ಹಾಗೂ ಸವಾಲುಗಳನ್ನು ವಿಶ್ಲೇಷಣೆಯ ಮೂಲಕ, ಸುರಕ್ಷಿತ ಮತ್ತು ಪರಿಣಾಮಕಾರಿ ನೀರಿನ ಮರುಬಳಕೆಯನ್ನು ಉತ್ತೇಜಿಸುವ ಮೂಲಕ ನೀರಿನ ಸ್ಥಿತಿಸ್ಥಾಪಕತ್ವನ್ನು ವೃದ್ಧಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಈ ಯೋಜನೆಗೆ ಸಂಬAಧಿಸಿದ ಪ್ರಮುಖ ಪಾಲುದಾರರೊಂದಿಗೆ ಪ್ರಾರಂಭಿಕ ಹಂತದ ಚರ್ಚೆಗಳು ಈ ತರಬೇತಿ ಮೂಲಕ ಇಂದಿನಿAದ ಆರಂಭವಾಗಿದೆ. ಅಆಖI ಹಾಗೂ IIಊS ಸಂಸ್ಥೆಗಳ ಸಹಯೋಗದಲ್ಲಿ “ನೀರಿನ ಸದ್ಬಳಕೆ ಮಾಡಿಕೊಳ್ಳುವ ಈ ಯೋಜನೆ ಜಿಲ್ಲೆಗೆ ಸಹಕಾರಿ ಆಗಲಿದೆ ಎಂದರು.ಇಂಡಿಯನ್ ಇನ್ಸ್ಟಿಟ್ಯೂಟ್ ಫಾರ್ ಹ್ಯೂಮನ್ ಸೆಟಲ್ಮೆಂಟ್ಸ್ (IIಊS) ಮತ್ತು ಜಿಲ್ಲಾಡಳಿತದ ಸಹಭಾಗೀತ್ವದಲ್ಲಿ “ಚಿಕ್ಕಬಳ್ಳಾಪುರದ ಆರು ಸಣ್ಣ ನಗರಗಳ ನೀರಿನ ಸ್ಥಿತಿಸ್ಥಾಪಕತ್ವ ನಿರ್ಮಾಣ ಸಹಕಾರ” ಯೋಜನೆಯನ್ನು ಪ್ರಾರಂಭಿಸಲಾಗಿದೆ. ಕರ್ನಾಟಕದ ಆರು ಸಣ್ಣ ನಗರಗಳಲ್ಲಿ ನೀರು, ಬಳಸಿದ ನೀರು, ಹವಾಮಾನ ವೈಪರೀತ್ಯ ನಿರ್ವಹಣೆ ಮತ್ತು ವಿಪತ್ತು ನಿರ್ವಹಣೆಗೆ ತಾಂತ್ರಿಕ ಸಹಕಾರ ನೀಡುವ ಯೋಜನೆಯನ್ನು ಇಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಧಿಕೃತವಾಗಿ ಪ್ರಾರಂಭಿಸಿರುವುದು ಸಂತಸ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಅಆಖI ಪ್ರತಿನಿಧಿ ಮಹೇಶ್ವರ ರಾಜಶೇಖರ್ ಅವರ ಮಾತನಾಡಿ, ಚಿಕ್ಕಬಳ್ಳಾಪುರದಲ್ಲಿ ಆರಂಭವಾದ ಈ ಯೋಜನೆ ನಗರ ಪ್ರದೇಶಗಳಲ್ಲಿ ಹವಾಮಾನ ವೈಪರೀತ್ಯ ಮತ್ತು ನೈಸರ್ಗಿಕ ವಿಪತ್ತು ನಿರ್ವಹಣೆಗೆ ಅಪಾಯ-ಆಧಾರಿತ ಮೂಲಸೌಕರ್ಯವನ್ನು ಉತ್ತೇಜಿಸುವಲ್ಲಿ ಅಆಖI ಯ ಬದ್ಧತೆಯನ್ನು ತೋರಿಸುತ್ತದೆ. ತಾಂತ್ರಿಕ ಸಹಾಯ, ಮಾಹಿತಿ ಆಧಾರಿತ ಯೋಜನೆ ಮತ್ತು ಸ್ಥಳೀಯ ಸಂಸ್ಥೆಗಳ ಸಾಮರ್ಥ್ಯ ನಿರ್ಮಾಣವನ್ನು ಸಮನ್ವಯಗೊಳಿಸುವ ಮೂಲಕ ನಗರಗಳ ನೀರು ಮತ್ತು ಬಳಸಿದ ನೀರಿನ ಮೂಲಸೌಕರ್ಯ ಅಭಿವೃದ್ಧಿಯತ್ತ ಸಾಗಲು ಬೆಂಬಲಿಸುತ್ತಿದ್ದೇವೆ.ಈ ಯೋಜನೆ 100 ಕ್ಕೂ ಹೆಚ್ಚು ಪ್ರಸ್ತಾವನೆಗಳಲ್ಲಿ ಆಯ್ಕೆಯಾದ ಯೋಜನೆಗಳಲ್ಲಿ ಒಂದಾಗಿದೆ. ಇತರ ಆಯ್ಕೆಯಾದ ದೇಶಗಳು ಭೂತಾನ್, ಹೊಂಡುರಾಸ್ ಮತ್ತು ಶ್ರೀಲಂಕಾ ದೇಶಗಳಾಗಿವೆ ಎಂದು ಹೇಳಿದರು.ಈ ಯೋಜನೆ ಜಿಲ್ಲೆಯ ಆರು ನಗರಗಳಾದ ಬಾಗೇಪಲ್ಲಿ, ಚಿಂತಾಮಣಿ, ಚಿಕ್ಕಬಳ್ಳಾಪುರ, ಗುಡಿಬಂಡೆ, ಗೌರಿಬಿದನೂರು ಮತ್ತು ಶಿಡ್ಲಘಟ್ಟವನ್ನು ಒಳಗೊಂಡಿದೆ. ಈ ನಗರಗಳು ಹವಾಮಾನ ವೈವಿಧ್ಯತೆ, ಭೂಗರ್ಭಜಲ ಕ್ಷಯ ಮತ್ತು ವೇಗವಾಗಿ ಬದಲಾಗುತ್ತಿರುವ ವಾಸಸ್ಥಳ ಹಾಗೂ ಆರ್ಥಿಕ ಪರಿಸ್ಥಿತಿಗಳ ಪರಿಣಾಮವಾಗಿ ಜಲ ಸಂಪನ್ಮೂಲಗಳ ಮೇಲೆ ಹೆಚ್ಚುತ್ತಿರುವ ಒತ್ತಡವನ್ನು ತಗ್ಗಸುತ್ತವೆ. ಮುಂದಿನ ಎರಡು ವರ್ಷಗಳಲ್ಲಿ (ಏಪ್ರಿಲ್ 2026 ಮಾರ್ಚ್ 2028), ಈ ಉಪಕ್ರಮವು ಸ್ಥಳೀಯ ಸಂಸ್ಥೆಗಳಿಗೆ ತಾಂತ್ರಿಕ ಸಹಾಯ ಒದಗಿಸಿ, ಜಲ ಮತ್ತು ಒಳಚರಂಡಿ ವ್ಯವಸ್ಥೆಗಳ ಮೌಲ್ಯಮಾಪನ, ಯೋಜನಾ ಪ್ರಕ್ರಿಯೆಗಳಲ್ಲಿ ಹವಾಮಾನ ಮತ್ತು ವಿಪತ್ತು ಅಪಾಯಗಳ ಅಳವಡಿಕೆ ಹಾಗೂ ಸ್ಥೈರ್ಯಯುತ ಮತ್ತು ಪರಿಣಾಮಕಾರಿ ಮೂಲಸೌಕರ್ಯ ಹಾಗೂ ಸೇವಾ ವಿತರಣೆಗೆ ಕಾರ್ಯತಂತ್ರಗಳನ್ನು ರೂಪಿಸಲು ನೆರವಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ನಿರ್ದೇಶಕ ಮಂಜುನಾಥ, ಸಂಸ್ಥೆಯ ಪ್ರತಿನಿಧಿ ಅಮೀರ್ ಬಶಿರ್ ಬಜಾಜ್, ಸಂಸ್ಥೆಯ ಪ್ರತಿನಿಧಿಗಳಾದ ಎಸ್ ಜಿ ಸುಜಯ್, ಸಾಬರ್ ಮನ್ಸ್ವಾಮಿ,ಉಮಾ ಮಹೇಶ್ವರ ರಾಜಶೇಖರ್, ನಗರಾಡಳಿ ಸಂಸ್ಥೆಗಳ ಪೌರಾಯುಕ್ತರು, ಮುಖ್ಯಾಧಿಕಾರಿಗಳು, ನಗರ ಸ್ಥಳೀಯ ಆಡಳಿತ ಸಂಸ್ಥೆಗಳ ಸಿಬ್ಬಂದಿ ಹಾಜರಿದ್ದರು.
ನಗರಗಳ ನೀರಿನ ಸ್ಥಿತಿ ಸ್ಥಾಪಕತ್ವ ಮತ್ತು ಬಳಕೆ ಕುರಿತ ತರಬೇತಿಗೆ ಚಾಲನೆ



