ರಾಮನಗರ: 2026-27ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಿಸಲು ಮತ್ತು ಗುಣಮಟ್ಟದ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಲು ದಾಖಲಾತಿ ಆಂದೋಲನವನ್ನು ಹಮ್ಮಿ ಕೊಳ್ಳಲಾಗಿದೆ ಎಂದು ರಾಮನಗರ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗಯ್ಯ ಹೇಳಿದರು.
ನಗರದ ಬಿಇಓ ಕಚೇರಿ ಬಳಿ ಭರವಸೆಯ ವಿಶ್ವಾಸಪೂರ್ಣ ಭವಿಷ್ಯ ಕ್ಕಾಗಿ ಸರ್ಕಾರಿ ಶಾಲೆ, ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೇ ಸೇರಿಸಿ ಎಂಬ ಘೋಷ ವಾಕ್ಯದೊಳಗೆ ಶಾಲಾ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ ವತಿಯಿಂದ ಆಯೋಜಿಸಿರುವ ವಿಶೇಷ ದಾಖಲಾತಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸರ್ಕಾರಿ ಶಾಲೆಗಳು ಆಧುನಿಕ ಸ್ಪರ್ಧಾತ್ಮಕ ಜಗತ್ತಿಗೆ ತಕ್ಕಂತೆ ಸಜ್ಜುಗೊಂಡಿದ್ದು, ಎಲ್ಕೆಜಿಯಿಂದ ಪಿಯುಸಿ ವರೆಗೆ ಕನ್ನಡದ ಜತೆಗೆ ಆಂಗ್ಲ ಮಾಧ್ಯಮದಲ್ಲಿಯೂ ಬೋಧನೆ ನೀಡಿ ಮಕ್ಕಳ ಸರ್ವಂಗಿಣ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು.
ಕಂಪ್ಯೂಟರ್, ಕರಾಟೆ, ಯೋಗ ಸೇರಿದಂತೆ ಇನ್ನು ಹತ್ತು ಹಲವು ಪ್ರಯೋಜನಗಳು ಪಿ ಎಂ ಸಿ ಅಡಿಯಲ್ಲಿ ಪಡೆಯಬಹುದು, ಕಂಪ್ಯೂಟರ್ ಶಿಕ್ಷಣ, ಸುಸಜ್ಜಿತ ಗ್ರಂಥಾಲಯ ಹಾಗೂ ಪ್ರಾಯೋಗಾಲಯದ ಸೌಲಭ್ಯ. ಪ್ರತಿ ಶನಿವಾರ ಚಟುವಟಿಕೆ ಆಧಾರಿತ ಕಲಿಕೆಗೆ ಒತ್ತು ನೀಡಲಾಗುತ್ತಿದೆ. ವಿಶಾಲವಾದ ಆಟದ ಮೈದಾನ, ಪರಿಸರ ಸ್ನೇಹಿ ವಾತಾವರಣ ಹಾಗೂ ಗಂಡು, ಹೆಣ್ಣು ಮತ್ತು ಅಂಗವಿಕಲ ಮಕ್ಕಳಿಗೆ ಪ್ರತ್ಯೇಕ ಶೌಚಗೃಹ. ಪಠ್ಯಪುಸ್ತಕ, ಸಮವಸ್ತç, ಶೂ-&ಸಾಕ್ಸ್ ಹಾಗೂ ವಿದ್ಯಾರ್ಥಿನಿಯರಿಗೆ ಉಚಿತ ಶುಚಿ ಪ್ಯಾಡ್ ವಿತರಣೆ ಮಾಡಲಾಗುತ್ತಿದೆ ಎಂದು ಪಾಲಕರಿಗೆ ಮಾಹಿತಿ ನೀಡಿ, ಸರ್ಕಾರಿ ಶಾಲೆಗೆ ಮಕ್ಕಳನ್ನು ಕರೆತರುತ್ತಿದ್ದಾರೆ.
ಖಾಸಗಿ ಶಾಲೆಗಳ ಪ್ರವೇಶ ಶುಲ್ಕದ ಹೊರೆಯ ನಡುವೆ ಗುಣಮಟ್ಟದ ಶಿಕ್ಷಣ ಉಚಿತವಾಗಿ ನೀಡುತ್ತಿರುವ ಸರ್ಕಾರಿ ಶಾಲೆಯ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದ್ದು ಶಿಕ್ಷಕರು ಮನೆಮನೆಗೆ ಭೇಟಿ ನೀಡಿ ಮಕ್ಕಳನ್ನು ಸೇರಿಸಲು ಪ್ರೇರೇಪಿಸಲಾಗುತ್ತದೆ ಇದರ ಸದುಪಯೋಗ ವನ್ನು ಪೋಷಕರು ಪಡೆದುಕೊಳ್ಳುವತೆ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕರಾದ ನವೀನ್ ಸಿಂದ್ಯೇ, ರಾಜಣ್ಣ, ಮಂಜುನಾಥ್ ಸಿಅರ್ಪಿ ಗಳಾದ ಪಾಟೀಲ, ರಾಜಶೇಖರ್, ಮುನಿಯಪ್ಪ, ರಾಂಗಸ್ವಾಮಿ, ಶಿವಕುಮಾರ್ ಸೇರಿದಂತೆ ಹಲವರು ಇದ್ದರು.
`ವಿಶ್ವಾಸಪೂರ್ಣ ಭವಿಷ್ಯಕ್ಕಾಗಿ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ’



