ಗುಂಡ್ಲುಪೇಟೆ: ಕೌಟುಂಬಿಕ ಕಲಹದಿಂದ ಮನನೊಂದು ಒಂದೇ ಕುಟುಂಬದ ತಾಯಿ ಮತ್ತು ಇಬ್ಬರು ಮಕ್ಕಳು ನೇಣು ಬಿಗಿದುಕೊಂಡು ಮೃತಪಟ್ಟಿರುವ ಘಟನೆ ತಾಲೂಕಿನ ಹೊರೆಯಾಲ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಹೊರೆಯಾಲ ಗ್ರಾಮದ ನಾಯಕ ಜನಾಂಗದ ಯೋಗೀಶನಿಗೆ ಕುಡಿಯುವ ಚಟವಿದ್ದು ಬಂದು ಆಗಾಗ್ಗೆ ಗಲಾಟೆ ಮಾಡುವುದನ್ನು ಸಹಿಸಲಾಗದೇ ಈತನ ಪತ್ನಿ ಜ್ಯೋತಿ (28 ವರ್ಷ), ಮೊದಲನೆ ಮಗಳು ಬಾಂದವ್ಯ (7 ವರ್ಷ) ಮತ್ತು ಎರಡನೇ ಮಗಳು ಮಾನಸ ಎರಡೂವರೆ ವರ್ಷ, ಮೂವರು ಕೌಟುಂಬಿಕ ಕಲಹದಿಂದ ಬೇಸತ್ತು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿರುತ್ತಾರೆ.
ಘಟನೆ ನಡೆದ ಸ್ಥಳಕ್ಕೆ ಬೇಗೂರು ಪೊಲೀಸ್ ಇನ್ಸ್ಪೆಕ್ಟರ್ ವನರಾಜು ಮತ್ತು ಸಿಬ್ಬಂದಿಗಳು ಭೇಟಿ ನೀಡಿದ್ದು, ಕುಟುಂಬದ ದೂರಿನನ್ವಯ ಮುಂದಿನ ಕ್ರಮ ಕೈಗೊಂಡಿದ್ದಾರೆ.