ಕನಕಪುರ: ರೈತರಿಗೆ ಮರಣ ಶಾಸನವಾಗಿರುವ ಕೇಂದ್ರ ಸರ್ಕಾರದ ಸ್ಯಾಟಲೈಟ್ ರಿಂಗ್ ರಸ್ತೆ ನಿರ್ಮಾಣವನ್ನು ರದ್ದು ಗೊಳಿಸುವಂತೆ ಭೂಮಿ ಕಳೆದುಕೊಳ್ಳುತ್ತಿರುವ ರೈತರು ಒತ್ತಾಯಿಸಿದ್ಗಾರೆ. ನಗರದ ಹೊರವಲಯದ ಖಾಸಗಿ ಹೋಟೆಲ್
ನಲ್ಲಿ ಈ ಯೋಜನೆಯಿಂದ ಭೂಮಿಯನ್ನು ಕಳೆದು ಕೊಲ್ಲುತ್ತಿರುವ ರೈತರು ಸಭೆ ಸೇರಿ ಒಕ್ಕೂರಿಲಿನಿಂದ ಕೇಂದ್ರ ಸರ್ಕಾರ ಈ ಯೋಜನೆಯನ್ನು ಕೈಬಿಡುವರೆಗೂ ಹೋರಾಟ ನಡೆಸುವ ತೀರ್ಮಾನ ತೆಗೆದುಕೊಂಡರು ಸಭೆಯಲ್ಲಿ ಹಲವು ರೈತರು ಮಾತನಾಡಿ ಕಳೆದ ಆರು ವರ್ಷಗಳ ಹಿಂದೆ ಆರಂಭವಾದ ಈ ರಸ್ತೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದ ರಿಂದ ಈ ಕಡೆ ಭೂಮಿಯೂ ಇಲ್ಲ, ಪರಿಹಾರ ಹಣವೂ ಇಲ್ಲದೇ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಬಂದಿದೆ ಎಂದು ಅಳಲು ತೋಡಿಕೊಂಡರು.
2015 ರಲ್ಲಿ ಕೇಂದ್ರ ಸರ್ಕಾರ ಭಾರತ ಮಾಲಾ ಯೋಜನೆ ಅಡಿಯಲ್ಲಿ ರಾಷ್ಟ್ರೀಯ ಪ್ರಾಧಿಕಾರದ ವತಿಯಿಂದ ಬೆಂಗಳೂರು ನಗರ ಹಾಗೂ ಸುತ್ತಲಿನ ಸಂಚಾರ ದಟ್ಟಣೆ ಹಾಗೂ ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ಸದ್ದುದೇಶದಿಂದ ಬೆಂಗಳೂರು ನಗರ, ಗ್ರಾಮಾಂತರ ಹಾಗೂ ಸುತ್ತ- ಮುತ್ತಲಿನ ತಾಲ್ಲೂಕುಗಳಿಗೆ ಸಂಪರ್ಕ ಕಲ್ಪಿಸುವ ಸುಮಾರು 288 ಕೀ. ಮಿ ವ್ಯಾಪ್ತಿಯ ರಿಂಗ್ ರಸ್ತೆ ನಿರ್ಮಾಣಕ್ಕಾಗಿ ಸುಮಾರು 6 ಸಾವಿರ ರೈತರು
ತಮ್ಮ ಜಮೀನುಗಳನ್ನ ಕಳೆದುಕೊಂಡು ಕೃಷಿ ಚಟುವಟಿಕೆ ನಡೆಸಲು ಸಾಧ್ಯವಾಗದೇ ತಮ್ಮ ಜೀವನ ಸಾಗಿಸಲು ಪರ ದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಯೋಜನೆಯ ಸ್ವರೂಪ: ಕನಕಪುರ, ರಾಮನಗರ, ಮಾಗಡಿ,ಸೂಲಿಬಲೆ,ಡಾಬಸ್ ಪೇಟೆ,ದೇವನಹಳ್ಳಿ, ದೊಡ್ಡಬಳ್ಳಾಪುರ, ಆನೇಕಲ್ ಸೇರಿದಂತೆ ತಮಿಳುನಾಡಿನ ಹೊಸೂರು ವ್ಯಾಪ್ತಿಯ ಕೆಲ ಪ್ರದೇಶ ಒಳಗೊಂಡAತೆ ನೀಲನಕ್ಷೆ ಸಿದ್ದಪಡಿಸಿ, ಕೇಂದ್ರ ಸಚಿವ ಸಂಪುಟದಲ್ಲಿ ಅನುಮೋದನೆಯನ್ನು ಪಡೆದು ಸುಮಾರು 370 ಹೆಕ್ಟೇರ್ ಪ್ರದೇಶವನ್ನ ಗುರುತಿಸಿ ರೈತರಿಗೆ ಭೂ ಸ್ವಾಧೀನದ ನೋಟೀಸ್ ನೀಡಿ ರೈತರಿಂದ ಜಮೀನು ಗಳನ್ನು ವಶಕ್ಕೆ ಪಡೆದು ಕೋಲಾರ ಜಿಲ್ಲಾ ವ್ಯಾಪ್ತಿಯಿಂದ ಡಾಬಾಸ್ ಪೇಟೆ ಯವರಗಿನ ಸುಮಾರು 120 ಕೀ.ಮಿ ಈಗಾಗಲೇ ರಸ್ತೆ ಮುಗಿಸಲಾಗಿದ್ದು ಇನ್ನೂ168 ಕಿ.ಮಿ ರಸ್ತೆ ಕಾಮಗಾರಿ ಬಾಕಿಯಿದೆ,ಆದರೆ ಭಾರತ ಮಾಲಾ ದವರು ಯೋಜನೆಯಿಂದ ಹಿಂದೆ ಸರಿದ ಪರಿಣಾಮ ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರಕ್ಕೆ ಇದರ ಹೊಣೆ ಹೊರಿಸಿ ನಾಲ್ಕು ವರ್ಷಗಳು ಕಳೆದರೂ ಸಹ ಯಾವುದೇ ಪ್ರಗತಿ ಕಾಣದೇ ರೈತರು ಕಂಗಾಲಾಗಿದ್ದಾರೆ.
ಹಣವೂ ಇಲ್ಲ, ಜಮೀನು ಇಲ್ಲ: ಈ ಯೋಜನೆಯ ಅನುಷ್ಠಾನಕ್ಕೆ ತಮ್ಮ ಜೀವನೋಪ ಯವಾಗಿದ್ದ ಜಮೀನುಗಳನ್ನು ಬಿಟ್ಟು ಕೊಟ್ಟ ರೈತರಿಗೆ ಕೇಂದ್ರ ಸರ್ಕಾರ ಪರಿಹಾರದ ಹಣವೂ ನೀಡದೇ ಜಮೀನು ಗಳನ್ನು ವಶಪಡಿಸಿಕೊಂಡಿರುವುದರಿAದ ಅವುಗಳನ್ನು ಮಾರಲು ಆಗದೆ ದಿನನಿತ್ಯ ಕಣ್ಣೀರಿನಲ್ಲಿ ಮುಳುಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ, ಹತ್ತು ವರ್ಷಗಳ ಹಿಂದೆ ನಿಗದಿ ಪಡಿಸಿದ ಹಣವನ್ನು ಜಮೀನು ಹಾಗೂ ಮರಗಳಿಗೆ ನೀಡುತ್ತಿರುವುದರಿಂದ ರೈತರಿಗೆ ಬಹಳ ನಷ್ಟವಾಗುತ್ತಿದೆ, ಸರ್ಕಾರ ಕೊಡುವ ಹಣದಲ್ಲಿ ಈ ಭಾಗದಲ್ಲಿ ಒಂದು ಕುಂಟೆ ಭೂಮಿಯನ್ನು ತೆಗೆದುಕೊಳ್ಳಲು ಆಗುವುದಿಲ್ಲ,
ಯೋಜನೆಯ ಶೇಕಡ 16 ರಷ್ಟು ರೈತರಿಗೆ ಮಾತ್ರ ಹಣ ಬಂದಿದ್ದು ಉಳಿದ ಶೇ. 84 ರಷ್ಟು ರೈತರಿಗೆ ಇನ್ನೂ ಒಂದು ರೂಪಾಯಿ ಪರಿಹಾರ ಹಣ ಬರದೇ ರೈತರಿಗೆ ಒಂದು ಕಡೆ ಜಮೀನು ಇಲ್ಲ, ಹಣವೂ ಇಲ್ಲದಂತಾಗಿದೆ ಸಭೆಯಲ್ಲಿದ್ದ ರೈತರು ಅಳಲು ತೋಡಿಕೊಂಡರು. ಮಾಜಿ ಪ್ರಧಾನಿ, ಸಚಿವ ಗಡ್ಕರಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಹಾಲಿ ಸಂಸದ ರಿಗೂ ಮನವಿ.
ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಹಾಲಿ ಸಂಸದ ರಾದ ಡಾ. ಮಂಜುನಾಥ್ ರವರಿಗೂ ಈ ಬಗ್ಗೆ ಮನವಿ ಸಲ್ಲಿಸಿದ್ದು ದೇವೇಗೌಡರು ಪ್ರಧಾನಿ ಮೋದಿ ಹಾಗೂ ಸಚಿವ ಗಡ್ಕರಿ ಬಳಿಯೂ ಇದರ ಬಗ್ಗೆ ಚರ್ಚೆ ನಡೆಸಿದ್ದು ಹಾಲಿ ಸಂಸದರು ಲೋಕಸಭೆ ಅಧಿವೇಶನದಲ್ಲೇ ಈ ಬಗ್ಗೆ ಸಭೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ, ಕರ್ನಾಟಕದಿಂದ ಆಯ್ಕೆಯಾಗಿ ರಾಜ್ಯಸಭಾ ಸದಸ್ಯೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರವರ ಗಮನಕ್ಕೆ ತಂದು ಪರಿಹಾರ ಹಣ ಹೆಚ್ಚಳ ಮಾಡುವಂತೆ ಮನವಿ ಮಾಡಿದಾಗ ಇದು ಸಚಿವ ಸಂಪುಟದ ತೀರ್ಮಾನವಾಗಿರುವುದರಿಂದ ನಾನು ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದು ಹಾಗೂ ಈ ಬಗ್ಗೆ ಅಧಿಕಾರ ಬಳಿ ವಿಚಾರಿಸಿದರೆ ಪ್ರಧಾನ ಮಂತ್ರಿಗಳ ಸಹಿಗಾಗಿ ಕಾಯುತ್ತಿರುವುದಾಗಿ ಬಾಲಿಷತನದ ಹೇಳಿಕೆ ನೀಡುತ್ತಾ ಕಾಲ ದೂಡುತ್ತಿದ್ದು ಈ ಹಣವನ್ನು ನಂಬಿ ರೈತರು ತಮ್ಮ ಮಕ್ಕಳ ಶಿಕ್ಷಣ, ಮದುವೆ, ಆರೋಗ್ಯ, ಹಾಗೂ ಶುಭ ಕಾರ್ಯಗಳಿಗೆ ಲಕ್ಷಾಂತರ ರೂಪಾಯಿ ಸಾಲವನ್ನು ಮಾಡಿದ್ದು ಈಗ ಪರಿಹಾರ ಹಣವೂ ಇಲ್ಲದೆ ಜಮೀನು ಇಲ್ಲದೆ ಸಾಲಕ್ಕೆ ಬಡ್ಡಿ ಕಟ್ಟಲು ಆಗದೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕೇಂದ್ರ,ರಾಜ್ಯ ಸರ್ಕಾರದ ಎಲ್ಲಾ ಸಚಿವರುಗಳು ಕೈ ಚೆಲ್ಲಿ ಕುಳಿತಿರುವುದರಿಂದ ನಮ್ಮ ಜಮೀನುಗಳನ್ನು ಉಳಿಸಿ ಕೊಳ್ಳುವ ಜವಬ್ದಾರಿ ನಮ್ಮದೇ ಆಗಿರುವುದರಿಂದ ಈ ಭಾಗದ ಎಲ್ಲಾ ರೈತರು ಒಗ್ಗೂಡಿ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಬೆಂಬಲ ಪಡೆದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ರೈತರಾದ ಭರತ್ ಗೌಡ, ನಾರಾಯಣ ಗೌಡ, ಪುಟ್ಟಸ್ವಾಮಿ, ಶ್ರೀಧರ್, ಮನ ಮೋಹನ್, ಜಿ ಎಸ್ ವೆಂಕಟೇಶ್, ಗೋಪಾಲ್ ಗೌಡ, ಶಿವಲಿಂಗಯ್ಯ ಸೇರಿದಂತೆ ನೂರಾರು ರೈತರು ಸಭೆಯಲ್ಲಿ ಭಾಗವಹಿಸಿದ್ದರು.
ರೈತರ ಜೀವ ಹಿಂಡುತ್ತಿರುವ ಸ್ಯಾಟಲೈಟ್ ರಿಂಗ್ ರಸ್ತೆ ಸ್ಥಗಿತಕ್ಕೆ ರೈತರ ಒತ್ತಾಯ



