ಬೆಳಗಾವಿ: ಕ್ಷುಲ್ಲಕ ಕಾರಣಕ್ಕೆ ಅಂಗನವಾಡಿ ಕಾರ್ಯಕರ್ತೆಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ತಾಲ್ಲೂಕಿನ ಬಸುರ್ತೆ ಗ್ರಾಮದಲ್ಲಿ ನಡೆದಿದೆ.
ಕ್ಷುಲ್ಲಕ ಕಾರಣಕ್ಕೆ ಕುಡುಗೋಲಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದಾನೆ. ಮಹಿಳೆಯನ್ನು ಸುಗಂಧಾ ಮೋರೆ (50) ಎಂದು ಗುರುತಿಸಲಾಗಿದ್ದು, ತಾಲ್ಲೂಕು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಸಾವು-ಬದುಕಿನೊಂದಿಗೆ ಹೋರಾಡುತ್ತಿದ್ದಾರೆ.
ಸ್ಥಳೀಯರ ಪ್ರಕಾರ ಅಂಗನವಾಡಿ ಸಹಾಯಕಿ ಸುಗಂದಮೋರೆ, ಒಂದು ಮಗುವಿನ ನೈಸರ್ಗಿಕ ಕರೆ ತೀರಿಸಲು ಅಂಗನವಾಡಿ ಕೇಂದ್ರ ಪಕ್ಕ ಕರೆದೊಯ್ದಾಗ ಆ ಮುಗ್ಧ ಮಗು ಮನೆಯ ಅಂಗಳದಲ್ಲಿದ್ದ ಹೂ ಕಿತ್ತಿದೆ. ಮನೆ ಮಾಲೀಕ ಕಲ್ಯಾಣಿ ಮೋರೆ, ಸುಗಂಧಾ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.