ಮಾಲೂರು: ಹದಗೆಟ್ಟ ರಸ್ತೆಗೆ ಕೊನೆಗೂ ಡಾಂಬ ರೀಕರಣ ಕಾರ್ಯವು ಬರದಿಂದ ಸಾಗಿದೆ.ಮಾಲೂರು ತಾಲೂಕಿನ ತೊರನಹಳ್ಳಿ ಶ್ರೀ ಸಪಲಾಂಭ ದಿನ್ನೆಯ ಸಾರ್ವಜನಿಕ ಆಸ್ಪತ್ರೆಯಿಂದ ಹಿಡಿದು ಬೆಳ್ಳಾವಿಯ ತನಕ ರಸ್ತೆಯ ಡಾಂಬರೀಕರಣ ಕಾರ್ಯವು ನಡೆಯುತ್ತಿದೆ.
ಸುಮಾರು ವರ್ಷಗಳಿಂದ ಹದಗೆಟ್ಟ ರಸ್ತೆಯಲ್ಲಿ ಸಂಚಾರ ಮಾಡಿ ಕಂಗೆಟ್ಟಿದ್ದ ಜನರು ಅಧಿಕಾರಿಗಳಿಗೆ ಇಡೀ ಶಾಪ ಹಾಕುತ್ತಿದ್ದರು.ಆದರೆ ಈಗ ಜನರ ಮುಖದಲ್ಲಿ ಮಂದಹಾಸ ಮಾಡಿದೆ.
ಉತ್ತಮವಾಗಿ ಗುಣಮಟ್ಟದ ರಸ್ತೆಗಳನ್ನು ಹಾಕುತ್ತಿದ್ದು, ರಸ್ತೆಯ ಗುಣಮಟ್ಟವು ಚೆನ್ನಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗುವಂತಹ ರಸ್ತೆಗಳನ್ನು ಗುಣಮಟ್ಟವನ್ನು ಕಾಯ್ದುಕೊಂಡು, ಹಾಕುತ್ತಿದ್ದೇವೆ. ಅಲ್ಲದೆ ಖುದ್ದಾಗಿ ಸ್ಥಳದಲ್ಲಿದ್ದು ಡಾಂಬರೀಕರಣ ಮಾಡಿಸುತ್ತಿದ್ದೇವೆ ಎಂದು ಎ ಇ ಇ ರಾಜು.ಬಿ.ಎಂ ರವರು ತಿಳಿಸಿದರು.
ಈ ಸಂದರ್ಭದಲ್ಲಿ ಎ ಇ ಇ ರಾಜು.ಎಂ.ಬಿ., ಸಹಾಯಕ ಇಂಜಿನಿಯರ್ ಮಣಿ, ದಾಕ್ಷಾಯಣಿ, ಗುತ್ತಿಗೆದಾರ ಚಂಬೆ ನಾರಾಯಣ ಸ್ವಾಮಿ ಹಾಗೂ ಮಂಜುನಾಥ್ ಇದ್ದರು.