ಬೆಂಗಳೂರು: ಇಲ್ಲಿಯ ತನಕ ಹೆಬ್ಬಾಳ ಕಾನೂನು ಮತ್ತು ಸುವೆವ್ಯವಸ್ಥೆ ಪೊಲೀಸ್ ಠಾಣೆ ಹೆಬ್ಬಾಳ ಸರ್ಕಲ್ ನಲ್ಲಿ ಇದ್ದಿದ್ದು, ಪೊಲೀಸ್ ಠಾಣೆಯ ಗಾತ್ರ ಹಾಗೂ ಇತರೆ ಸೌಕರ್ಯಗಳಿಗೆ ಕೊರತೆ ಇದ್ದಿದ್ದು ಕಂಡು ಬಂದ ಹಿನ್ನೆಲೆಯಲ್ಲಿ ಈ ಪೊಲೀಸ್ ಠಾಣೆಯನ್ನು ಭೂಪಸಂದ್ರ ಮುಖ್ಯ ರಸ್ತೆಯಲ್ಲಿರುವ ಪಶು ಸಂಗೋಪನ ಕಟ್ಟಡಕ್ಕೆ ಇಂದು ಸ್ಥಳಾಂತರಗೊಂಡಿದೆ.
ಈ ಕಟ್ಟಡವನ್ನು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ರವರು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ದಯಾನಂದ್, ಸತೀಶ್ ಕುಮಾರ್ ಸೇರಿದಂತೆಎಲ್ಲಾ ಕಿರಿಯ ಅಧಿಕಾರಿ ಗಳು ಉಪಸ್ಥಿತರಿದ್ದರು.
ಇಂದಿನಿಂದ ಈ ನೂತನ ಕಟ್ಟಡದಲ್ಲಿ ಹೆಬ್ಬಾಳ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಠಾಣೆ ಕಾರ್ಯ ನಿರ್ವಹಿಸಲಿದೆ.
ಉತ್ತರ ವಿಭಾಗದ ಡಿಸಿಪಿ ಸೈದುಲ್ಲಾ ಅಡವತ್, ಎಸಿಪಿ ಶಿವಶಂಕರ್ ರೆಡ್ಡಿ ಮತ್ತು ಹೆಬ್ಬಾಳ ಇನ್ಸ್ಪೆಕ್ಟರ್ ಬೈರಾರವರು ಈ ವಿಭಾಗಕ್ಕೆ ಮುಖ್ಯಸ್ಥರಾಗಿರುತ್ತಾರೆ.