ಸಿಡ್ನಿ: ಕಳೆದ ಕೆಲವು ಬ್ಯಾಡ್ಮಿಂಟನ್ ಪಂದ್ಯಾವಳಿಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾದ ಭಾರತದ ಶಟ್ಲರ್ಗಳೀಗ ಸಿಡ್ನಿಯತ್ತ ಮುಖ ಮಾಡಿದ್ದಾರೆ. ಮಂಗಳವಾರದಿಂದ ಇಲ್ಲಿ `ಆಸ್ಟ್ರೇಲಿಯನ್ ಓಪನ್’ ಬ್ಯಾಡ್ಮಿಂಟನ್ ಪಂದ್ಯಾವಳಿ ಆರಂಭವಾಗಲಿದೆ. ಆದರೆ ಭಾರತದ ಮೊದಲ ದರ್ಜೆಯ ಆಟಗಾರರ್ಯಾರೂ ಇಲ್ಲಿ ಸ್ಪರ್ಧಿಸುತ್ತಿಲ್ಲ.
ಹೀಗಾಗಿ ಪ್ರಶಸ್ತಿ ಮೇಲೆ ಹೆಚ್ಚಿನ ನಿರೀಕ್ಷೆ ಇರಿಸಿಕೊಳ್ಳುವಂತಿಲ್ಲ. ಪುರುಷರ ಸಿಂಗಲ್ಸ್ನಲ್ಲಿ ವಿಶ್ವದ 10ನೇ ರ್ಯಾಂಕ್ ಆಟಗಾರ ಎಚ್.ಎಸ್. ಪ್ರಣಯ್ ಅವರೇ ಭಾರತದ ಪ್ರಮುಖ ಆಟಗಾರ. ಜತೆಗೆ ಸಮೀರ್ ವರ್ಮ, ರವಿ, ಮಿಥುನ್ ಮಂಜುನಾಥ್, ಕಿರಣ್ ಜಾರ್ಜ್, ಎಸ್. ಶಂಕರ್ ಮುತ್ತುಸ್ವಾಮಿ ಸುಬ್ರಹ್ಮಣ್ಯನ್ ಸ್ಪರ್ಧೆಗೆ ಇಳಿಯಲಿದ್ದಾರೆ.