ಬೆಂಗಳೂರು: ಉಡುಪಿ ಹಾಗೂ ಮಂಗಳೂರಿನಲ್ಲಿ ಮಾತ್ರವಲ್ಲದೇ ಬೆಂಗಳೂರಿನಲ್ಲೂ ಚಿನ್ನಾಭರಣ ಮಳಿಗೆಗಳಿಗೆ ಐಟಿ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ಬೆಂಗಳೂರಿನ ಎಂ.ಜಿ ರಸ್ತೆ, ಮಹಾಲಕ್ಷ್ಮಿ ಲೇಔಟ್, ಗಿರಿನಗರ, ಬನಶಂಕರಿಯಲ್ಲಿರುವ ಆಭರಣ ಜ್ಯೂವೆಲರ್ಸ್ ಮಳಿಗೆಗಳ ಮೇಲೆ ಐಟಿ ದಾಳಿಯಾಗಿದೆ.
ಒಟ್ಟು 30 ಕಾರುಗಳಲ್ಲಿ ಬಂದಿರುವ ಐಟಿ ಅಧಿಕಾರಿಗಳ ತಂಡ, ಬೆಂಗಳೂರಿನಲ್ಲಿರುವ ಆಭರಣ ಜ್ಯೂವೆಲರ್ಸ್ ಮಳಿಗೆಗಳ ಮೇಲೆ….
ದಾಳಿ ಮಾಡಿದ್ದು, ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದ್ದಾರೆ.ಕರಾವಳಿ ಜಿಲ್ಲೆಗಳಾದ ಉಡುಪಿ ಹಾಗೂ ಮಂಗಳೂರಿನಲ್ಲಿರುವ ಸುಭಾಷ್ ಕಾಮತ್ ಹಾಗೂ ಮಹೇಶ್ ಕಾಮತ್ ಮಾಲೀಕತ್ವದ ಶಿವಭಾಗ್ ಚಿನ್ನದಂಗಡಿಗಳ ಮೇಲೆ ಐಟಿ ಅಧಿಕಾರಿಗಳು ಮಾಡಿದ್ದಾರೆ.
ಕಳೆದ 15 ದಿನಗಳಿಂದ ಬೆಂಗಳೂರಿನಲ್ಲಿ ಮೇಲಿಂದ ಮೇಲೆ ಐಟಿ ರೇಡ್ ಆಗುತ್ತಲೇ ಇದೆ. ಚಿನ್ನಂದಗಡಿಗಳ ಮೇಲೆಯಯೇ ದಾಳಿಯಾಗುತ್ತಲೇ ಇದೆ. ಆದ್ರೆ, ಕಳೆದ ಬಾರಿಯ ದಾಳಿ ವೇಳೆ ಗುತ್ತಿಗೆದಾರರೊಬ್ಬರ ಮನೆಯಲ್ಲಿ ಬರೋಬ್ಬರಿ 40 ಕೋಟಿ ರೂಪಾಯಿ ನಗದು ಹಣ ಸಿಕ್ಕಿತ್ತು ಎಂದು ಹೇಳಲಾಗಿದೆ.