ಮುಂಬೈ: ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಸುಕೇಶ್ ಚಂದ್ರಶೇಖರ್ ಜೊತೆ ಸ್ನೇಹ ಬೆಳೆಸಿದ್ದರಿಂದ ಕಾನೂನಿನ ಸಂಕಷ್ಟ ಎದುರಾಗಿದೆ. ಸುಕೇಶ್ ಮಾಡಿದ 200 ಕೋಟಿ ರೂ. ವಂಚನೆ ಕೇಸ್ನಲ್ಲಿ ಜಾಕ್ವೆಲಿನ್ ಕೂಡ ಭಾಗಿ ಆಗಿದ್ದರು ಎಂಬ ಅನುಮಾನ ಇದೆ.
ಇದರ ವಿಚಾರಣೆ ನಡೆಸಿರುವ ಜಾರಿ ನಿರ್ದೇಶನಾಲಯವು ಎಫ್ಐಆರ್ನಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ಹೆಸರನ್ನು ಸೇರಿಸಿದೆ. ಆದರೆ ತಮ್ಮ ವಿರುದ್ಧದ ಎಫ್ಐಆರ್ ರದ್ದು ಮಾಡಬೇಕು ಎಂದು ಕೋರಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
`ಸುಕೇಶ್ ಚಂದ್ರಶೇಖರ್ ಮಾಡಿದ ಕುತಂತ್ರದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಸಂತ್ರಸ್ಥೆ ಆಗಿದ್ದಾರೆ. ವಂಚನೆಯಿಂದ ಹಣ ಗಳಿಸುವಲ್ಲಿ ಸುಕೇಶ್ ಮಾಡಿದ ಅಪರಾಧಗಳಿಗೆ ಜಾಕ್ವೆಲಿನ್ ಫರ್ನಾಂಡಿಸ್ ಸಹಾಯ ಮಾಡಿಲ್ಲ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್ 3 ಮತ್ತು 4ರಲ್ಲಿ ಅವರಿಗೆ ಶಿಕ್ಷೆ ಆಗಬಾರದು’ ಎಂದು ಅರ್ಜಿಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ.