ಮುಂಬಯಿ: ಉದ್ಯಮಿ ಮುಕೇಶ್ ಅಂಬಾನಿಗೆ ಮೂರನೇ ಬಾರಿ ಕೊಲೆ ಬೆದರಿಕೆ ಬಂದಿದ್ದು, ಬೇಡಿಕೆ ಮೊತ್ತವನ್ನು 400 ಕೋಟಿ ರೂ. ಗೆ ಹೆಚ್ಚಿಸಲಾಗಿದೆ.ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿಗೆ ಅಕ್ಟೋಬರ್ 27 ರಂದು 20 ಕೋಟಿ ರೂ.ಬೇಡಿಕೆಯಿಟ್ಟು ಬೆದರಿಕೆ ಇಮೇಲ್ ಪತ್ರ ಬಂದಿತ್ತು.
ಬಳಿಕ ಅದೇ ಇ- ಮೇಲ್ ನಿಂದ ಎರಡನೇ ಬಾರಿ ಅಕ್ಟೋಬರ್ 28 ರಂದು ಹಿಂದಿನ ಇ-ಮೇಲ್ಗೆ ಪ್ರತಿಕ್ರಿಯೆ ನೀಡದ ಕಾರಣ ಹಣದ ಬೇಡಿಕೆ ಮೊತ್ತವನ್ನು 200 ಕೋಟಿ ರೂ. ಗೆ ಹೆಚ್ಚಿಸಿರುವುದಾಗಿ ಎಚ್ಚರಿಕೆ ನೀಡಿದ್ದ.ಇದೀಗ 3ನೇ ಬಾರಿಗೆಮತ್ತೆ ಅದೇ ಇ- ಮೇಲ್ ನಿಂದ ಕೊಲೆ ಬೆದರಿಕೆ ಬಂದಿದ್ದು, ಈ ಬಾರಿ ಬೇಡಿಕೆ ಮೊತ್ತವನ್ನು 20 ಕೋಟಿ ರೂ. ನಿಂದ 400ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ.
ಎಷ್ಟೇ ಉತ್ತಮ ಭದ್ರತೆಯನ್ನು ನೀವು ಹೊಂದಿದ್ದರೂ ನಮ್ಮ ಒಬ್ಬ ಶಾರ್ಪ್ ಶೂಟರ್ ನಿಮ್ಮನ್ನು ಕೊಲ್ಲುತ್ತಾನೆ. ನಮ್ಮನ್ನು ಪತ್ತೆ ಮಾಡುವುದು ಸಾಧ್ಯವಿಲ್ಲ ಎಂದು ಈ ಬಾರಿ ಇಮೇಲ್ನಲ್ಲಿ ಬರೆಯಲಾಗಿದೆ.ಮೂರನೇ ಬಾರಿ ಕೊಲೆ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಮುಂಬಯಿ ಪೊಲೀಸರು ಅಂಬಾನಿ ನಿವಾಸಕ್ಕೆ ಹಚ್ಚಿನ ಭದ್ರತೆಯನ್ನು ನೀಡಿದ್ದಾರೆ.
ಕೊಲೆ ಬೆದರಿಕೆ ಬಗ್ಗೆ ಮುಕೇಶ್ ಅಂಬಾನಿ ಅವರ ಭದ್ರತಾ ಸಿಬ್ಬಂದಿ ಮುಂಬಯಿನ ಗಾಮ್ದೇವಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಅಪರಿಚಿತ ವ್ಯಕ್ತಿಯ ವಿರುದ್ಧ ಐಪಿಸಿ ಸೆಕ್ಷನ್ 387 ಮತ್ತು 506 (2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.