ಬೆಂಗಳೂರು: ರಾಜ್ಯ ಸರ್ಕಾರ ಹಿಜಾಬ್ ನಿಷೇಧವನ್ನು ರದ್ದು ಮಾಡುವ ನೀರ್ಧಾರಕ್ಕೆ ಹಿಜಾಬ್ ಹೋರಾಟಗಾರ್ತಿ ಮುಸ್ಕಾನ್ ಸ್ವಾಗತಿಸಿದ್ದಾರೆ.
ಹಿಜಾಬ್ ನಿಷೇಧದಿಂದಾಗಿ ನಾವು ಕಾಲೇಜಿಗೆ ಹೋಗುವುದನ್ನು ನಿಲ್ಲಿಸಿದ್ದೆವು. ಇದೀಗ ಹಿಜಾಬ್ ನಿಷೇಧ ರದ್ಧತಿಯಾದರೆ ನಾವು ಪುನಃ ಕಾಲೇಜಿಗೆ ಹೋಗುತ್ತೇವೆ ಎಂದು ಮಾಧ್ಯಮದವರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಹಿಜಾಬ್ ನಿಷೇಧದಿಂದಾಗಿ ಯಾರು ಕಾಲೇಜಿಗೆ ಹೋಗುವುದನ್ನು ಬಿಟ್ಟು ವಿಧ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿದ್ದರೋ ಅವರು ಪುನಃ ಕಾಲೇಜಿಗೆ ಬನ್ನಿ ಎಂದು ಕರೆ ನೀಡಿದ್ದಾರೆ.ನ್ಯಾಯಾಲಯದಲ್ಲಿರುವ ಪ್ರಕರಣ ತಮ್ಮ ಪರವಾಗಿ ಬರಲಿದೆ ಎಂಬ ವಿಶ್ವಾಸವನ್ನು ಸಹ ಅವರು ವ್ಯಕ್ತಪಡಿಸಿದ್ದಾರೆ.