ಸುತ್ತೂರು: ನೈಸರ್ಗಿಕ ಕೃಷಿ ಮತ್ತು ಮಣ್ಣಿನ ಆರೋಗ್ಯ ಅಗತ್ಯ ಎಂದು ಧಾರವಾಡ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಲ್. ಪಾಟೀಲ್ರವರು ಸುತ್ತೂರು ಶ್ರೀಕ್ಷೇತ್ರದಲ್ಲಿ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ, ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ಹಾಗೂ ಜೆಎಸ್ಎಸ್ ಮಹಾವಿದ್ಯಾಪೀಠಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ರೈತರ ಶಿಬಿರದಲ್ಲಿ ಮೇ 3 ರಂದು ಸಮಾರೋಪ ಭಾಷಣ ಮಾಡುತ್ತಾ ತಿಳಿಸಿದರು.
ರೈತ ದೇಶದ ಬೆನ್ನೆಲುಬು. ಈ ಭೂಮಿಯ ಜೀವನಾಡಿ ರೈತ ಸಮೃದ್ಧಿಯಾಗಿದ್ದರೆ ಮಾತ್ರ ದೇಶ ಸುಭಿಕ್ಷವಾಗಿರುತ್ತದೆ. ಸ್ವಾಭಿಮಾನದ ಕೃಷಿ ನಮ್ಮದಾಗಲಿ. ಜಗತ್ತು ಎಷ್ಟೇ ಆಧುನಿಕವಾದರೂ ಮನುಷ್ಯ ಕಂಪ್ಯೂಟರ್ ಚಿಪ್ ತಿಂದು ಬದುಕಲಾರ. ಅವನಿಗೆ ಬೇಕಿರುವುದು ರೈತರು ಬೆವರಿಸಿ ಬೆಳೆದ ಅನ್ನದ ತುತ್ತು. ಸೈನಿಕ ದೇಶದ ಗಡಿ ಕಾಯ್ದರೆ, ರೈತ ದೇಶದ ಹಸಿವನ್ನು ನೀಗಿಸುತ್ತಾನೆ. ರೈತರು ಸೋಲಬಾರದು. ಕೇವಲ ಬೆವರಿನಿಂದ ಕೆಲಸ ಮಾಡುವುದಷ್ಟೇ ಅಲ್ಲ, ಜ್ಞಾನದಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.
ಬೀದರ್ನ ಕರ್ನಾಟಕ ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ನಿವೃತ್ತ ವಿಸ್ತರಣ ನಿರ್ದೇಶಕರಾದ ಡಾ. ಎಸ್.ಎಂ. ಶಿವಪ್ರಕಾಶ್ರವರು ಪ್ರಾಮಾಣಿಕವಾಗಿ ದುಡಿದಾಗ ಪ್ರತಿ ರೈತರು ಯಶಸ್ಸು ಗಳಿಸಲು ಸಾಧ್ಯ. ರೈತನ ಮೊಗದಲ್ಲಿ ನಗು ಚಿಮ್ಮಿದಾಗ, ವಿಶ್ವವೇ ಸಂತೋಷ ಪಡುತ್ತದೆ. ಪರಮ ಸಂತೋಷ ಮತ್ತು ಪರಮಶಾಂತಿಯನ್ನು ಪಡೆಯಲು ಜೀವನವನ್ನು ಸರಸಮಯವಾಗಿ ಮತ್ತು ಸಂತೋಷವಾಗಿಡಬೇಕು ಎಂದರು.
ಮAಡ್ಯದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕರಾದ ಡಾ. ಜಿ.ಎಂ. ದೇವಗಿರಿ ರೈತನ ಬೆವರಿನ ಹನಿ ಭೂಮಿಗೆ ಬಿದ್ದರೆ ಮುತ್ತು ಬೆಳೆಯುತ್ತದೆ, ಆ ಮುತ್ತಿಗೆ ಸರಿಯಾದ ಬೆಲೆ ಸಿಕ್ಕಾಗ ಮಾತ್ರ ಅವನ ಬದುಕು ಚಿನ್ನವಾಗುತ್ತದೆ. ರೈತರು ತಮ್ಮ ಜಮೀನಿನ ಒಂದು ಭಾಗದಲ್ಲಾದರೂ ಹೊಸ ಪ್ರಯೋಗಗಳನ್ನು ಮಾಡಲು ಮುಂದಾಗಬೇಕು. ನಾವು ಬೆಳೆದ ಬೆಳೆಯನ್ನು ಹಾಗೆಯೇ ಮಾರುವ ಬದಲು ಅದಕ್ಕೆ ಮೌಲ್ಯವರ್ಧನೆ ಮಾಡುವುದನ್ನು ತಿಳಿಯಬೇಕು. ಕೇವಲ ಕಾಯಕದಿಂದ ಮಾತ್ರವಲ್ಲದೆ, ಕೌಶಲದಿಂದಲೂ ಕೃಷಿ ಮಾಡಬೇಕಾದ ಕಾಲ ಇದಾಗಿದೆ ಎಂದು ತಿಳಿಸಿದರು.
ಬೆಂಗಳೂರಿನ ರಾಜಮುಡಿ ಆರ್ಗೇನಿಕ್ಸ್ ಪ್ರೆöÊ.ಲಿ. ಕೃಷಿ ಉತ್ಪನ್ನಗಳ ರಫ್ತುದಾರರಾದ ಶ್ರೀ ಹೆಚ್. ನಾಗೇಂದ್ರ ಕುಮಾರ್ರವರು ಬೇಡಿಕೆಯಿರುವ ಆಹಾರ ಉತ್ಪನ್ನಗಳನ್ನು ಬೆಳೆಯಬೇಕು. ಉತ್ಪನ್ನಕ್ಕೆ ಬೇಡಿಕೆಯಿರುವ ವಿದೇಶಿ ಮಾರುಕಟ್ಟೆಯನ್ನು ಗುರುತಿಸಬೇಕು. ಅಂತರರಾಷ್ಟಿçÃಯ ಮಾರುಕಟ್ಟೆಗೆ ತಕ್ಕಂತೆ ಅಕರ್ಷಕ ಮತ್ತು ಗುಣಮಟ್ಟದ ಪ್ಯಾಕೇಜಿಂಗ್ ಅಗತ್ಯ. ಬೆಲೆ ನಿಗದಿಗೊಳಿಸಿ ಒಪ್ಪಂದ ಮಾಡಿಕೊಳ್ಳಬೇಕು. ಕರ್ನಾಟಕ ಸರ್ಕಾರವು ನಿಗಮದ ಮೂಲಕ ರೈತರಿಗೆ ಕೃಷಿ ಉತ್ಪನ್ನಗಳ ರಫ್ತು ಮತ್ತು ಮಾರುಕಟ್ಟೆ ವಿಸ್ತರಣೆಗೆ ಬೆಂಬಲ ನೀಡುತ್ತದೆ. ಆಹಾರ ಧಾನ್ಯಗಳು, ಮಸಾಲೆ ಪದಾರ್ಥಗಳು, ಡೈರಿ ಉತ್ಪನ್ನಗಳು, ಸಮುದ್ರಾಹಾರಗಳು ಮತ್ತು ಸಸ್ಯಾಧಾರಿತ ಪ್ರೋಟೀನ್ಗಳ ಸಂಸ್ಕರಣ ಮತ್ತು ರಫ್ತಿಗೆ ನವೋದ್ಯಮಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುತ್ತದೆ. ಉತ್ತಮ ಉತ್ಪನ್ನಗಳ ಆಯ್ಕೆ, ಸರಿಯಾದ ದಾಖಲೆಗಳು ಮತ್ತು ನಂಬಿಕಸ್ತ ಖರೀದಿದಾರರನ್ನು ಕಂಡುಕೊಳ್ಳುವ ಮೂಲಕ ರಫ್ತು ವ್ಯವಹಾರದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ತಿಳಿಸಿದರು.
ಗಣೇಶ್, ಕಾವೇರಮ್ಮ ಬೈಲೆಮನೆ, ಶ್ರೀ ಅನಂತರಾಮಸ್ವಾಮಿ, ಜಗದೀಶ್ ಎಸ್.ಹಿರೇಮಠ್, ಶಿವಕುಮಾರ್ ಅನಿಸಿಕೆಯನ್ನು ಹಂಚಿಕೊAಡರು.
ಡಾ. ಬಿ.ಎನ್. ಜ್ಞಾನೇಶ್ ಶಿಬಿರದ ವರದಿ ಮಂಡಿಸಿದರು. ಶ್ರೀ ಪೃಥ್ವಿ ಪ್ರಾರ್ಥಿಸಿದರು. ಡಾ. ಯು.ಎಂ. ರಕ್ಷಿತ್ ರಾಜ್ ಸ್ವಾಗತಿಸಿದರು. ಡಾ. ದೀಪಕ್ ವಂದಿಸಿದರು. ಡಾ. ವೈ.ಪಿ. ಪ್ರಸಾದ್ ನಿರೂಪಿಸಿದರು.
ನೈಸರ್ಗಿಕ ಕೃಷಿ, ಮಣ್ಣಿನ ಆರೋಗ್ಯ ಅಗತ್ಯ: ಡಾ.ಪಾಟೀಲ್



