LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಕಂಟೈನರ್ ಸಾಗಾಣಿಕೆಯ ಕಷ್ಟ ನಷ್ಟಗಳು

ಗರುಡಾಕ್ಷ ನಿರ್ಮಾಣ ಮಾಡಿದ್ದ ಎಸ್.ನರಸಿಂಹಮೂರ್ತಿ ಗ್ಯಾಪ್ ತರುವಾಯ ಕಂಟೈನರ್ ಸಿನಿಮಾಕ್ಕೆ ಬಂಡವಾಳ ಹೂಡುವ ಜತೆಗೆ ರಚನೆ,ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಸೆನ್ಸಾರ್‍ನವರು ಪ್ರಶಂಸೆ ವ್ಯಕ್ತಪಡಿಸಿ ಯಾವುದೇ ದೃಶ್ಯಕ್ಕೆ ಆಕ್ಷೇಪಣೆ ವ್ಯಕ್ತಪಡಿಸದೆ, ಕ್ಲೀನ್ ಯು ಪ್ರಮಾಣಪತ್ರ ನೀಡಿ ಶುಭ ಹಾರೈಸಿದ್ದಾರೆ. ಪ್ರಚಾರದ ಸಲುವಾಗಿ ಮೊನ್ನೆಯಷ್ಟೇ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.

ನಿರ್ದೇಶಕರು ವಿಜ್ಞಾನದಲ್ಲಿ ಪದವಿ ಪಡೆದುಕೊಂಡಿರುವುದರಿಂದ ವೈದ್ಯಕೀಯ ವಿಷಯಕ್ಕೆ ಸಂಬಂದಪಟ್ಟಂತೆ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ದಿನಪತ್ರಿಕೆಯಲ್ಲಿ ಬಂದಂತ ಸುದ್ದಿಗಳನ್ನು ಹೆಕ್ಕಿಕೊಂಡು, ಸಣ್ಣ ಹಾಗೂ ಧ್ವನಿ ಇಲ್ಲದ ಕಾರ್ಮಿಕನಿಗೂ ಬೆಲೆ ಇರುತ್ತದೆ ಎಂಬುದನ್ನು ಸಂದೇಶದಲ್ಲಿ ಹೇಳಿದ್ದಾರೆ. ಕ್ಯಾನ್ಸರ್ ಸುಡುವ ಬೃಹದಕಾರದ ಯಂತ್ರವನ್ನು ಉಪಯೋಗಿಸಿದ ತರುವಾಯ ಮರಳಿ ಸ್ಪೈನ್‍ಗೆ ಹಿಂದುರಿಗಿಸ ಬೇಕಾಗಿರುತ್ತದೆ.

ಈ ಸಮಯದಲ್ಲಿ ಹಡಗಿನಲ್ಲಿ ಕಂಟೈನರ್ ಸಾಗಿಸುವಾಗ ಅಚಾತುರ್ಯದಿಂದ ಅದರ ಒಳಗಡೆ ಕಾರ್ಮಿಕನೊಬ್ಬ ಬಂದಿಯಾಗುತ್ತಾನೆ. ಒಂದು ದಿನದಲ್ಲಿ ನಡೆಯುವ ಘಟನೆಯಲ್ಲಿ ಆತ ಹೊರಗೆ ಬರುತ್ತಾನಾ? ಅಲ್ಲೆ ನರಳುತ್ತಾನಾ? ಎಂಬುದನ್ನು ಕುತೂಹಲದೊಂದಿಗೆ ತೋರಿಸಲಾಗಿದೆ.ಕಾರ್ಮಿಕನಾಗಿ ದತ್ತಾತ್ರೇಯ ಪೂಜಾರಿ ನಾಯಕ. ಪುಣ್ಯಗೌಡ ನಾಯಕಿ. ಉಳಿದಂತೆ ಮಂಜುನಾಥ್.ಜಿ, ರಂಗನಾಥ್, ಮಂಜು.ಬಿ.ಕೆ ಉದಯಕುಮಾರ್ ಮುಂತಾದವರು ನಟಿಸಿದ್ದಾರೆ. ಸಂಗೀತ ಅಲಂಕಾರ್, ಛಾಯಾಗ್ರಹಣ ಶ್ರೀನಿವಾಸ್, ಸಂಕಲನ ಭಾರ್ಗವ ಅವರದಾಗಿದೆ. ಬೆಂಗಳೂರು, ಮಂಗಳೂರು ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ದಸರಾ ನಂತರ ತೆರೆಗೆ ತರಲು ತಂಡವು ಯೋಜನೆ ರೂಪಿಸಿಕೊಂಡಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು