LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಗುಜರಾತ್‌ಗೆ ೭ನೇ ಸೋಲು

ಪ್ರೊ ಕಬಡ್ಡಿ ಪಂದ್ಯಾವಳಿಯಲ್ಲಿ ಗುಜರಾತ್ ಜೈಂಟ್ಸ್ ತಂಡದ ಸೋಲಿನ ಆಟ ಮುಂದುವರಿದಿದೆ. ಸೋಮವಾರದ ಪಂದ್ಯದಲ್ಲಿ ಪಾಟ್ನಾ ಪೈರೆಟ್ಸ್ ೪೦-೨೭ ಅಂತರದಿAದ ಗುಜರಾತ್ ತಂಡವನ್ನು ಕೆಡವಿದೆ.
ಪಾಟ್ನಾ ೮ ಪಂದ್ಯಗಳಲ್ಲಿ ೫ನೇ ಜಯ ಸಾಧಿಸಿದರೆ, ಗುಜರಾತ್ ಇಷ್ಟೇ ಪಂದ್ಯಗಳಲ್ಲಿ ೭ನೇ ಸೋಲನುಭವಿಸಿತು.
ಪಾಟ್ನಾ ಪರ ರೈಡರ್ ಅಯಾನ್ ಸರ್ವಾಧಿಕ ೧೦ ಅಂಕ ಗಳಿಸಿ ಮಿಂಚಿದರು. ದೇವಾಂಗ್ ೬ ಅಂಕ ತಂದುಕೊಟ್ಟರು. ಗುಜರಾತ್ ನಾಯಕ ದುಮಾನ್ ಸಿಂಗ್ ಮತ್ತು ಪ್ರತೀಕ್ ದಹಿಯಾ ತಲಾ ಐದಂಕ ಗಳಿಸಿದರು.
ಹರಿಯಾಣ ಜಯ: ದ್ವಿತೀಯ ಪಂದ್ಯದಲ್ಲಿ ಯು ಮುಂಬಾವನ್ನು ಓವರ್‌ಟೇಕ್ ಮಾಡಿದ ಹರಿಯಾಣ ಸ್ಟೀಲರ್ ೪೮-೩೯ ಅಂತರದಿAದ ಗೆದ್ದು ಬಂದಿತು. ರೈಡರ್‌ಗಳಾದ ವಿಶಾಲ್ ಟೇಟೆ ೧೧, ಶಿವಂ ಪಟಾರೆ ೧೦ ಅಂಕ ಬೇಟೆಯಾಡಿದರು. ಇದು ೮ ಪಂದ್ಯಗಳಲ್ಲಿ ಹರಿಯಾಣ ಸಾಧಿಸಿದ ೬ನೇ ಗೆಲುವು. ಮುಂಬಾ ರೈಡರ್ ಅಜಿತ್ ಚೌಹಾಣ್ ೧೮ ಅಂಕ ಕಲೆಹಾಕಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST