ಶಿವಮೊಗ್ಗ : ಶಿವಮೊಗ್ಗದ ತುಂಗಾ ನದಿಯಲ್ಲಿ ತಾಯಿ ಮತ್ತು ಮಕ್ಕಳು ಆತ್ಮಹತ್ಯೆಗೆ ಯತ್ನಿಸಿದ್ದು, ಇಬ್ಬರು ಹೆಣ್ಣುಮಕ್ಕಳು ಸಾವನ್ನಪ್ಪಿದ್ದು, ತಾಯಿ ಮತ್ತು ಮತ್ತೊಂದು ಮಗು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಹೆಂಡತಿ ಯಾಕೆ ಹೀಗೆ ಮಾಡಿದ್ಲು ಗೊತ್ತಿಲ್ಲ ಎರಡು ಮಕ್ಕಳನ್ನು ಪತ್ತೆ ಮಾಡಿಕೊಡಿ ಎಂದು ತಂದೆ ಗೋಳಾಡಿದ್ದಾನೆ.
ಇಂದು ಬೆಳಿಗ್ಗೆ 10:00 ಗಂಟೆಗೆ ಊರು ಬಿಟ್ಟಿದ್ದಾರೆ. ನಾವ್ಯಾರು ಊರಲ್ಲಿ ಇದ್ದಿದ್ದಿಲ್ಲ ಊರು ಬಿಟ್ಟಿದ್ದು ಗೊತ್ತಿಲ್ಲ. ಆಮೇಲೆ ಒಂದು ಗಂಟೆ ಆದಮೇಲೆ ಸಂಜೆವರೆಗೂ ಹುಡುಗಾಡಿದ್ದೇವೆ. ಸಂಜೆ 7 ಗಂಟೆಗೆ ಇಲ್ಲಿಂದ ಫೋನ್ ಬಂತು ನಿಮ್ಮ ಹೆಣ್ಣುಮಕ್ಕಳು ನದಿಗೆ ಹಾರಿದ್ದಾರೆ ಬನ್ನಿ ಅಂತ ಅಲ್ಲಿಂದ ಬಂದಾಗ ನನ್ನ ಇಬ್ಬರು ಹೆಣ್ಣು ಮಕ್ಕಳು ಇಲ್ಲ ಸರ್ ದಯವಿಟ್ಟು ನಮ್ಮ ಮಕ್ಕಳನ್ನು ಹುಡುಕಿ ಕೊಡಿ...