LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

 ನನ್ನ ನೆನಸಿಕೊಂಡಿಲ್ಲ ಅಂದ್ರೆ ಬಿಜೆಪಿ ಅವರಿಗೆ ನಿದ್ದೆ ಬರಲ್ಲ: ಡಿಕೆಶಿ 

ಬೆಂಗಳೂರು: ರಾಜ್ಯದಲ್ಲಿ ಏನೇ ಆದರೂ ನಾನೇ ಕಾರಣನಾ? ಬಿಜೆಪಿಯವರ ಮನೆಯಲ್ಲಿ, ಪಕ್ಷದಲ್ಲಿ ಅಷ್ಟೇ ಯಾಕೆ, ಅವರ ಹೊಟ್ಟೆ ಒಳಗೆ ಏನಾದ್ರೂ ನಾನೇ ಕಾರಣನಾ? ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.

ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಕ್ಷೇಪಾರ್ಹ ಪದಬಳಕೆ ಮಾಡಿದ್ದಾರೆ ಎಂಬ ದೂರಿನ ಪ್ರಕರಣದಲ್ಲಿ ಎಂಎಲ್‌ಸಿ ಸಿ.ಟಿ.ರವಿಗೆ ಜಾಮೀನು ಸಿಕ್ಕಿರುವ ವಿಚಾರವಾಗಿ ಡಿಕೆ.ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದರು.

ಅವರ ಪಕ್ಷ, ಅವರ ಮುಖಂಡರ ಸಂಸ್ಕ್ರತಿ ಏನು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಪೊಲೀಸ್ ಉಂಟು, ಕೋರ್ಟ್ ಉಂಟು, ಅಪರಾದ ಉಂಟು. ರಾಜ್ಯದಲ್ಲಿ ಏನೇ ಆದರೂ ನಾನೇ ಕಾರಣ, ಅವರ ಪಕ್ಷ, ಹೊರಗಡೆ, ಮನೆ, ಹೊಟ್ಟೆ ಒಳಗೆ ಏನಾದ್ರೂ ಎಲ್ಲದಕ್ಕೂ ನಾನೇ ಕಾರಣ. ನನ್ನ ನೆನಸಿಕೊಂಡಿಲ್ಲ ಅಂದ್ರೆ ಅವರಿಗೆ ನಿದ್ದೆ ಬರಲ್ಲ ಎಂದು ಕುಟುಕಿದರು.

ಕಾನೂನಿಗೆ, ಕೋರ್ಟ್‌ಗೆ ಏನು ಗೌರವ ಕೊಡಬೇಕೊ ಕೊಡುತ್ತೇವೆ. ಕೋರ್ಟ್ ಏನು ಬೇಕೋ ನಿರ್ಧಾರ ತೆಗೆದುಕೊಳ್ಳುತ್ತೆ. ಮೊದಲು ಅವರು ಮಾತನಾಡಿದ್ದು ಸರೀನಾ ಎಂದು ಕೇಳಿ? ಅವರ ಭಾಷೆ, ಸಂಸ್ಕ್ರತಿಯಿಂದ ಹರುಕು ಬಾಯಿ ಎನ್ನುವುದು ಗೊತ್ತಾಗಿದೆ. ಈ ಹಿಂದೆ ಜಯಮಾಲಾಗೂ ಮಾತಾಡಿದ್ರು, ಸಿಎಂ ಬಗ್ಗೆನೂ ಮಾತನಾಡಿದ್ರು, ನಿತ್ಯ ಸುಮಂಗಲಿ ಅಂತ ಹೇಳಿದ್ರು, ಇದು ಸರಿನಾ, ತಪ್ಪಾ? ಎಂದು ಪ್ರಶ್ನಿಸಿದರು.

ನನಗೂ ಅವರ ಮೇಲೆ ಸಿಂಪತಿ ಇತ್ತು. ಚಿಕ್ಕಮಗಳೂರು ಜನ ಎಂದರೆ ಒಳ್ಳೆ ಜನ, ಸಂಸ್ಕೃತಿಯುಳ್ಳ ಜನ ಎಂದು. ಆದರೆ, ಆ ಪಾರ್ಟಿಯಲ್ಲಿ ಇರುವವರು ಹೆಣ್ಣು ಮಕ್ಕಳ ಬಗ್ಗೆ ಸರಿಯಾ ಅಂತ ಅರ್ಥ ಮಾಡಿಕೊಳ್ಳಬೇಕು. ಆತ್ಮ ಸಾಕ್ಷಿ ಇರುವುದು ಮುಖ್ಯ ಆಗುತ್ತೆ. ಪಕ್ಷದ ನಾಯಕನೆಂದು ಸುಮ್ಮನೆ ಬೆಂಬಲ ನೀಡುವುದಲ್ಲ. ಅದನ್ನ ಖಂಡಿಸಬೇಕಲ್ವಾ..? ಸರಿ ಇಲ್ಲ ಅಂತ ಹೇಳಬೇಕಲ್ವಾ? ನನ್ನ ಪಕ್ಷದಲ್ಲಿ ಮಾತನಾಡಿದ್ದರೆ ನಾನು ಖಂಡಿಸುತ್ತಿದ್ದೆ ಎಂದು ಕಿಡಿಕಾರಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು