LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಬಲಿಷ್ಠ ಭಾರತಕ್ಕೆ ಬೆವರಿಳಿಸಿದ ಕ್ರಿಕೆಟ್ ಶಿಶು ಜಪಾನ್! 

ತಿಣುಕಾಡಿ ಕೇವಲ 2 ರನ್‌ಗಳಿಂದ ಗೆದ್ದ ಶ್ರೇಯಸ್ ಪಡೆ


ಜಪಾನ್‌ನ ಸಾನೊ ಅಂತರರಾಷ್ಟ್ರೀ ಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಜಪಾನ್ (India vs Japan) ನಡುವಿನ ಐತಿಹಾಸಿಕ ಟಿ20 ಪಂದ್ಯವು  (T20 Match)  ರೋಚಕ ಹಣಾಹಣಿಯಲ್ಲಿ ಅಂತ್ಯಗೊAಡಿತು. ಮಳೆಯ ಕಾರಣದಿಂದಾಗಿ ಐದು ಓವರ್‌ಗಳಿಗೆ ಸೀಮಿತಗೊಂಡ ಈ ಪಂದ್ಯದಲ್ಲಿ, ಶ್ರೇಯಸ್ ಅಯ್ಯರ್ ನೇತೃತ್ವದ ಭಾರತೀಯ ತಂಡವು ಜಪಾನ್ ವಿರುದ್ಧ ಕೇವಲ ಎರಡು ರನ್‌ಗಳ ಅಂತರದ ರೋಚಕ ಗೆಲುವು ಸಾಧಿಸಿತು. ಅಕ್ಷರ್ ಪಟೇಲ್ ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನದಿಂದಾಗಿ ತಂಡ ಸೋಲಿನ ಅಪಮಾನದಿಂದ ತಪ್ಪಿಸಿಕೊಂಡಿತು. ಈ ಪಂದ್ಯಕ್ಕೂ ಮುನ್ನ ಭಾರತ ಈ ಪಂದ್ಯವನ್ನ ಸುಲಭವಾಗಿ ಗೆಲ್ಲಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಜಪಾನ್ ಎಲ್ಲರ ನಿರೀಕ್ಷೆ ಹುಸಿ ಮಾಡಿ ಎಲ್ಲರಿಗೂ ಶಾಕ್ ಕೊಟ್ಟಿತು.
30 ಎಸೆತಗಳಿಗೆ 32 ರನ್‌ಗಳಿಸಿದ್ದ ಭಾರತ: 5 ಓವರ್‌ಗಳ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡಕ್ಕೆ ಜಪಾನ್ ಬೌಲರ್‌ಗಳು ಅನಿರೀಕ್ಷಿತ ಆಘಾತ ನೀಡಿದರು. ಅವರು ಶಿಸ್ತುಬದ್ಧ ಬೌಲಿಂಗ್ ಮೂಲಕ ಭಾರತದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಪರದಾಡಿದರು. ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಮೊದಲ ಓವರ್‌ನಲ್ಲೇ ಶೂನ್ಯಕ್ಕೆ ಔಟಾದರೆ, ಸಂಜು ಸ್ಯಾಮ್ಸನ್ (9) ಮತ್ತು ಇಶಾನ್ ಕಿಶನ್ (3) ಕೂಡ ನಂತರದ ಓವರ್‌ಗಳಲ್ಲಿ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ನಾಯಕ ಶ್ರೇಯಸ್ ಅಯ್ಯರ್ ಇನ್ನಿಂಗ್ಸ್ನ ಅಂತಿಮ ಹಂತದಲ್ಲಿ ಔಟಾಗುವ ಮೊದಲು 12 ಎಸೆತಗಳಲ್ಲಿ 16 ರನ್ ಗಳಿಸಿದರು. ಪರಿಣಾಮವಾಗಿ, ನಿಗದಿತ 5 ಓವರ್‌ಗಳಲ್ಲಿ ಭಾರತ 4 ವಿಕೆಟ್ ನಷ್ಟಕ್ಕೆ ಕೇವಲ 32 ರನ್ ಗಳಿಸಲಷ್ಟೇ ಶಕ್ತವಾಯಿತು.
ಜಪಾನ್ ವಿರುದ್ಧ 2 ರನ್‌ಗಳ ಅಂತರದ ಗೆಲುವು: ಭಾರತದ 200ನೇ ಟಿ20ಐ (ಖಿ20I) ಜಯ ದಾಖಲು ನಂತರ, 33 ರನ್‌ಗಳ ಗುರಿಯನ್ನು ಬೆನ್ನಟ್ಟಲು ಮುಂದಾದ ಜಪಾನ್ ತಂಡವನ್ನು ಭಾರತೀಯ ಬೌಲರ್‌ಗಳು ಯಶಸ್ವಿಯಾಗಿ ನಿಯಂತ್ರಿಸಿದರು. ಜಪಾನ್ ಬ್ಯಾಟರ್‌ಗಳು ದೃಢ ಹೋರಾಟ ನಡೆಸಿದರಾದರೂ, ನಿಗದಿತ 5 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 30 ರನ್‌ಗಳಿಗೆ ಸೀಮಿತಗೊಂಡರು. ಗೆಲುವಿಗೆ ಕೊನೆಯ ಎಸೆತದಲ್ಲಿ 4 ರನ್‌ಗಳ ಅಗತ್ಯವಿದ್ದಾಗ, ಒತ್ತಡದ ಪರಿಸ್ಥಿತಿಯಲ್ಲೂ ಸಂಯಮ ಕಾಯ್ದುಕೊಂಡ ಅಕ್ಷರ್ ಪಟೇಲ್ ಕೇವಲ ಒಂದು ರನ್ ಬಿಟ್ಟುಕೊಟ್ಟರು, ಇದರಿಂದಾಗಿ ಭಾರತ ನಿಟ್ಟುಸಿರು ಬಿಡುವಂತಾಯಿತು. ಭಾರತದ ಪರ ವಾಷಿಂಗ್ಟನ್ ಸುಂದರ್ 13 ರನ್ ನೀಡಿ 2 ವಿಕೆಟ್ ಪಡೆದರು. 16 ರನ್‌ಗಳಿಸಿದ್ದ ಶ್ರೇಯಸ್ ಅಯ್ಯರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ತನ್ನದಾಗಿಸಿಕೊಂಡರು. ಈ ಗೆಲುವಿನೊಂದಿಗೆ, ಅಂತರರಾಷ್ಟಿçÃಯ 
ಪುರುಷರ ಟಿ20 ಕ್ರಿಕೆಟ್‌ನಲ್ಲಿ 200 ಗೆಲುವುಗಳನ್ನು ದಾಖಲಿಸಿದ ಮೊದಲ ತಂಡವಾಗಿ ಭಾರತ 
ಹೊಸ ದಾಖಲೆ ನಿರ್ಮಿಸಿತು. 

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST