LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ನಲ್ಲಿ ಸುಚಿಕಾಗೆ ಕಂಚು!


ನವದೆಹಲಿ: ಏಷ್ಯನ್ ಗೇಮ್ಸ್ 2026 ರ ಶೂಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ಹಿರಿಮೆ ಒಲಿದಿದ್ದು, ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ನ ಕ್ರೀಡೆಯಲ್ಲಿ ಸುಚಿಕಾ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಇದು ಈ ಬಾರಿಯ ಕ್ರೀಡಾಕೂಟದಲ್ಲಿ ಭಾರತಕ್ಕೆ ಒಲಿದ ನಾಲ್ಕನೇ ಪದಕವಾಗಿದೆ.
ಮಹಿಳೆಯರ 60 ಕೆಜಿ ವಿಭಾಗದ ಎಂಎಂಎ ಸೆಮಿಫೈನಲ್ ಹಣಾಹಣಿಯಲ್ಲಿ ಭಾರತದ ಸುಚಿಕಾ ಹಾಗೂ ಸಿಂಗಾಪುರದ ತಿಯೊ ಹುಯಿ ಹೂನ್ ನಡುವೆ ತೀವ್ರ ಪೈಪೋಟಿ ನಡೆಯಿತು. ಅಂತಿಮ ಸುತ್ತಿನಲ್ಲಿ ಸಿಂಗಾಪುರದ ಆಟಗಾರ್ತಿ ಸತತ ಕಿಕ್‌ಗಳ ಮೂಲಕ ದಾಳಿ ನಡೆಸಿದರೆ, ಸುಚಿಕಾ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿ ಪ್ರತಿಹೋರಾಟಕ್ಕೆ ಕಾದರು. ಪಂದ್ಯದ ಕೊನೆಯ ಕ್ಷಣಗಳಲ್ಲಿ ಸುಚಿಕಾ ಕೆಲವು ಪಂಚ್‌ಗಳನ್ನು ಸಿಡಿಸಿದರೂ, ತಿಯೊ ಕೂಡ ದಿಟ್ಟ ಉತ್ತರ ನೀಡಿದರು. ಅಂತಿಮ ಬಜರ್ ಮೊಳಗುತ್ತಿದ್ದಂತೆ ಸುಚಿಕಾ ಎದುರಾಳಿಯ ಮೇಲೆ ಜಿಗಿದು ಆಕೆಯನ್ನು ಕೆಳಗೆ ಉರುಳಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ರೆಫ್ರಿ ಇಬ್ಬರನ್ನೂ ಬೇರ್ಪಡಿಸಬೇಕಾಯಿತು.ಪಂದ್ಯ ಮುಕ್ತಾಯದ ಬಳಿಕ ಪ್ರಕಟವಾದ ಫಲಿತಾಂಶ ಸುಚಿಕಾಗೆ ತೀವ್ರ ನಿರಾಸೆ ಮೂಡಿಸಿತು. ಫೈನಲ್ ಪ್ರವೇಶಿಸುವಷ್ಟು ಉತ್ತಮ ಪ್ರದರ್ಶನ ನೀಡಿದ್ದೇನೆ ಎಂಬ ಭಾವನೆಯಲ್ಲಿದ್ದ ಸುಚಿಕಾ, ತೀರ್ಪುಗಾರರು ಎದುರಾಳಿಯ ಪರವಾಗಿ ಅಂಕ ನೀಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಆಕ್ರೋಶ ಹಾಗೂ ದುಃಖದಿಂದ ರೆಫ್ರಿಗೆ ಹಸ್ತಲಾಘವ ನೀಡಲು ನಿರಾಕರಿಸಿದ ಅವರು, ಮ್ಯಾಟ್ ಮೇಲೆಯೇ ಕಣ್ಣೀರಿಟ್ಟರು. ಸೆಮಿಫೈನಲ್‌ನಲ್ಲಿ ಹಿನ್ನಡೆ ಅನುಭವಿಸಿದರೂ, ಮಹಿಳೆಯರ 60 ಕೆಜಿ ಎಂಎಂಎ ವಿಭಾಗದಲ್ಲಿ ಸುಚಿಕಾ ಕಂಚಿನ ಪದಕ ಮುಡಿಗೇರಿಸಿಕೊಳ್ಳುವ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST