LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

ಮಳೆ ಅವಾಂತರ: 170 ಮರಗಳು ಧರಾಶಾಹಿ, 68 ಕಡೆ ಜಲಾವೃತ

ಬೆಂಗಳೂರು: ನಿನ್ನೆ ಸುರಿದ ಧಾರಾಕಾರ ಮಳೆಗೆ ಬೆಂಗಳೂರಿನ ಹಲವೆಡೆ ಅವಾಂತರವೇ ಸೃಷ್ಟಿಯಾಗಿದೆ.
170 ಕ್ಕೂ ಅಧಿಕ ಮರಗಳು ಧರೆಗುರುಳಿದ್ರೆ 408 ಮರದ ಕೊಂಬೆಗಳು ಮುರಿದು ಬಿದ್ದಿವೆ. 5 ಪಾಲಿಕೆಗಳ ವ್ಯಾಪ್ತಿಯಲ್ಲಿ 68 ಕಡೆ ಜಲಾವೃತವಾಗಿದೆ. ರಸ್ತೆಯಲ್ಲಿ ಮರಗಳು ಧರೆಗುರಳಿದಿದ್ದರಿಂದ ಟ್ರಾಫಿಕ್ ಜಾಮ್‌ಗೆ ಜನ ಹೈರಾಣಾಗಿರುವ ಘಟನೆಯೂ ಸಂಭವಿಸಿದೆ. 25 ವರ್ಷಗಳ ಬಳಿಕ ಏಪ್ರಿಲ್ ನಲ್ಲಿ ದಾಖಲೆ ಮಳೆ ದಾಖಲಾಗಿದೆ. ವಿಧಾನಸೌಧ, ಪೊಲೀಸ್ ಕಮಿಷನರ್ ಕಚೇರಿ, ಇನ್‌ಫೆಂಟ್ರಿ ರೋಡ್, ಲ್ಯಾವೆಲ್ಲೆ ರೋಡ್, ಶಿವಾಜಿನಗರ, ರಿಚ್‌ಮಂಡ್ ಟೌನ್, ಅವೆನ್ಯೂ ರೋಡ್ ಸುತ್ತಮುತ್ತ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದೆ. ಸುಮ್ಮನಹಳ್ಳಿ ಫ್ಲೈ ಓವರ್ ಮೇಲೆ ಸರಣಿ ಅಪಘಾತವಾಗಿದೆ. ಕಾರು-ಲಾರಿ ಸೇರಿದಂತೆ 7-8 ವಾಹನಗಳ ಮಧ್ಯೆ ಅಪಘಾತವಾಗಿದ್ದು, ಹಲವಾರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ.ಗಾಲ್ಫ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳು ಮುಳುಗಡೆಯಾದ್ರೆ, ಮಲ್ಲೇಶ್ವರಂ, ಯಶವಂತಪುರದ ಬೃಹದಾಕಾರದ ಮರಗಳು ಧರೆಗುರುಳಿದ್ವು. ಕೆಲವೆಡೆ ಕಾರುಗಳೂ ಕೂಡ ಮುಳಗಡೆಯಾದ ದೃಶ್ಯಗಳು ಕಂಡುಬAದವು. ವಿಧಾನಸೌಧದಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಕೊಠಡಿಗೆ ಮಳೆ ನೀರು ನುಗ್ಗಿದೆ. ಕಿಟಕಿಯಿಂದ ಮಳೆನೀರು ನುಗ್ಗಿ ನೆಲದ ಮೇಲೆ ಹರಿದಿದೆ. ಮಳೆ ನೀರಲ್ಲಿ ದಿನಪತ್ರಿಕೆಗಳು ತೇಲಿವೆ. ಶಾಂತಿನಗರದ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ಪರದಾಡಿದ್ದಾರೆ.ಬಿನ್ನಿಮಿಲ್ ರಸ್ತೆಯಲ್ಲಿ 30 ಅಡಿ ಉದ್ದದ ಗೋಡೆ ಕುಸಿತಗೊಂಡಿದ್ದು ಕಿರಿದಾದ ರಸ್ತೆಗೆ ಬೃಹತ್ ಗೋಡೆ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ.ಮುಖ್ಯಮಂತ್ರಿಗಳ ನಿವಾಸ "ಕಾವೇರಿ" ಸೇರಿದಂತೆ ಅಂದಾಜು 40 ಕಡೆ ಮರ ಬಿದ್ದಿರುವ ಘಟನೆ ವರದಿಯಾಗಿದೆ. ಮಲ್ಲೇಶ್ವರ ದ ಮಾರ್ಗೋಸಾ ರಸ್ತೆಯಲ್ಲಿ ಹತ್ತಾರು ಕಡೆ ಮರಗಳು, ಮರದ ಕೊಂಬೆಗಳು ಮುರಿದು ಬಿದ್ದಿದ್ದವು. ಹೀಗಾಗಿ ಪ್ರಮುಖ ಸಂಚಾರ ರಸ್ತೆಯಾದ ಮಾರ್ಗೋಸಾ ರಸ್ತೆ ಬಂದ್ ಆಗಿತ್ತು. ಮಳೆ, ಗಾಳಿಗೆ ಸಿಟಿ ಯೂನಿಯನ್ ಬ್ಯಾಂಕ್ ನ ಬೃಹತ್ ನಾಮಫಲಕ ಬಿದ್ದುಹೋಗಿದೆ.
ಅಗ್ನಿಶಾಮಕ ದಳದವರು ಮತ್ತು ಬೃಹತ್ ಬೆಂಗಳೂರು ನಗರ ಪಾಲಿಕೆಯ ಸಿಬ್ಬಂದಿಗಳು ಹಗಲು ರಾತ್ರಿ ಎನ್ನದೆ ಮುಖ್ಯಮಂತ್ರಿಗಳ ನಿವಾಸ, ಮುಖ್ಯ ಕಾರ್ಯದರ್ಶಿಗಳ ನಿವಾಸ, ಕರ್ನಾಟಕ ರಾಜ್ಯ ಪೊಲೀಸ್ ಕೇಂದ್ರ ಕಚೇರಿಯ ಕಾಂಪೌAಡ್ ಒಳಗಡೆ, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿ ಕಾಂಪೌಂಡ್, ಸಿಐಡಿ ಕಚೇರಿಯ ಕಾಂಪೌAಡ್ ಒಳಗಡೆ ಸೇರಿದಂತೆ ಇನ್ನೂ ಇತರಡೆ ಮರಗಳು ಬಿದ್ದಿರುವುದನ್ನು ತೆರವುಗೊಳಿಸಲು ಹರ ಸಾಹಸ ಪಡುತ್ತಿದ್ದಾರೆ.
ಹಾಗೆಯೇ ಬಸವನಗುಡಿ ಯಲ್ಲಿರುವ ದಾಸಪ್ಪ ಮೆಮೋರಿಯಲ್ ಆಸ್ಪತ್ರೆಯ ಒಳಗಡೆ ಮಳೆ ನೀರು ತುಂಬಿಕೊAಡು ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಪರದಾಡುವ ಪರಿಸ್ಥಿತಿ ಬಂದಿದೆ.ಇದಲ್ಲದೆ ಬೆಂಗಳೂರು ರೈಲ್ವೆ ಸ್ಟೇಷನ್ ಮುಂಭಾಗ ಕಾರ್ ಮೇಲೆ ಮರ ಬಿದ್ದಿರುವುದು, ಅಭಿನಯ ರಸ್ತೆಯಲ್ಲಿ ದೊಡ್ಡ ಮರ ಬಿದ್ದಿರುವುದು, ಅಪಾರ್ಟ್ಮೆಂಟ್ ಗಳಲ್ಲಿ ನೀರು ನುಗ್ಗಿ ಜನಗಳಿಗೆ ತೊಂದರೆಯಾಗಿರುವುದು ಮತ್ತು ಹಾವುಗಳು ಸಹ ನೀರಿನಲ್ಲಿ ತೇಲಾಡುತ್ತಿರುತ್ತವೆ ಎಂದು ಬಿಬಿಎಂಪಿ ಅಧಿಕಾರಿಗಳು ಹಾಗೂ ಅಗ್ನಿಶಾಮಕ ಅಧಿಕಾರಿಗಳು ತಿಳಿಸಿರುತ್ತಾರೆ.ಸಂಚಾರ ಸಿಕ್ಕು ಸಮಸ್ಯೆಯೂ ಸಹ ಜಾಸ್ತಿ ಆಗಿರುತ್ತದೆ. ಸಂಚಾರಿ ಪೊಲೀಸರು ಸಾರ್ವಜನಿಕರ ರಸ್ತೆಗಳಲ್ಲಿ ಮುರಿದುಬಿದ್ದಿರುವ ಮರಗಳನ್ನು ತೆರವು ಮಾಡಲು ಬಿಬಿಎಂಪಿ ಅಧಿಕಾರಿಗಳ ನೆರವು ಕೋರಿರುತ್ತಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು