LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

"ಅವತಾರ ಪುರುಷ 2" ಚಿತ್ರದಲ್ಲೊಂದು ಭರ್ಜರಿ ರಾಪ್ ಸಾಂಗ್

ಶರಣ್ ಅಭಿನಯದ ಈ ಚಿತ್ರ ಏಪ್ರಿಲ್ 5 ರಂದು ಬಿಡುಗಡೆಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ, ಸಿಂಪಲ್ ಸುನಿ ನಿರ್ದೇಶನದ ಹಾಗೂ ಶರಣ್ ನಾಯಕರಾಗಿ ನಟಿಸಿರುವ "ಅವತಾರ ಪುರುಷ 2" ಚಿತ್ರದಿಂದ "ಇವನೇ ಅವತಾರ ಪುರುಷ" ಎಂಬ ಭರ್ಜರಿ ರಾಪ್ ಸಾಂಗ್ ಬಿಡುಗಡೆಯಾಗಿದೆ. ರಾಪ್ ಸಾಂಗ್ ನಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ಎಂ.ಸಿ.ಬಿಜ್ಜು ಈ ಹಾಡನ್ನು ಹಾಡಿದ್ದಾರೆ.

ಔರಾ ಹಾಗೂ ಅಭಿನಂದನ್ ಕಶ್ಯಪ್ ಕೂಡ ಗಾಯನಕ್ಕೆ ಬಿಜ್ಜು ಅವರ ಜೊತೆಯಾಗಿದ್ದಾರೆ. ಇತ್ತೀಚಿಗೆ ಈ ಹಾಡಿನ ಬಿಡುಗಡೆ ಅದ್ದೂರಿಯಾಗಿ ನೆರವೇರಿತು. ಅಭಿನಂದನ್ ಕಶ್ಯಪ್ ಸಂಗೀತ ನೀಡಿದ್ದಾರೆ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.ನಿರ್ಮಾಪಕರು ಈ ಹಾಡನ್ನು ಮಾಡೋಣ ಎಂದಾಗ, ಮೊದಲು ಬೇಡ ಅಂದಿದ್ದೆ. ನಿರ್ಮಾಪಕರು ಪಟ್ಟು ಹಿಡಿದು ಮಾಡೋಣ ಎಂದರು.

ಕೆಲವೆ ದಿನಗಳಲ್ಲಿ ಈ ಹಾಡಿನ ಚಿತ್ರೀಕರಣವಾಯಿತು. ಶಿಶುನಾಳ ಶರೀಫರ "ತರವಲ್ಲ ತಂಗಿ ನಿನ್ನ ತಂಬೂರಿ" ಹಾಡಿನ ಮೊದಲ ಸಾಲಿನಿಂದ ಈ ಹಾಡು ಆರಂಭವಾಗುತ್ತದೆ. ರಾಪ್ ಕ್ಷೇತ್ರದಲ್ಲಿ ತಮ್ಮದೇ ಚಾಪು ಮೂಡಿಸಿರುವ ಎಂ.ಸಿ.ಬಿಜ್ಜು ಈ ಹಾಡನ್ನು ಬರೆದಿದ್ದಾರೆ. ಎಂ.ಸಿ.ಬಿಜ್ಜು, ಔರಾ ಹಾಗೂ ಸಂಗೀತ ನಿರ್ದೇಶಕ ಅಭಿನಂದನ್ ಕಶ್ಯಪ್ ಹಾಡಿದ್ದಾರೆ. ನಟಿ ಸಾತ್ವಿಕ ಕೂಡ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ಏಪ್ರಿಲ್ 5 ರಂದು ಚಿತ್ರ ತೆರೆಗೆ ಬರಲಿದೆ. ನೋಡಿ.        ಪ್ರೋತ್ಸಾಹ ನೀಡಿ ಎಂದರು ನಿರ್ದೇಶಕ ಸಿಂಪಲ್ ಸುನಿ.

ಮೊದಲು ಮಾರ್ಚ್ 22 ರಂದು ನಮ್ಮ ಚಿತ್ರ ಬಿಡುಗಡೆ ಎಂದು ತಿಳಿಸಲಾಗಿತ್ತು. ಈಗ ನಮ್ಮ ಚಿತ್ರ ಏಪ್ರಿಲ್ 5 ರಂದು ಬಿಡುಗಡೆಯಾ ಗಲಿದೆ. ಆ ದಿನಗಳಲ್ಲಿ ಸಾಲುಸಾಲು ರಜೆ ಇರುವುದರಿಂದ ಈ ನಿರ್ಧಾರ ಮಾಡಿದ್ದೇವೆ. ಈ ಸಮಯದಲ್ಲಿ ನನ್ನಗೊಂದು ಹಾಡು ಮಾಡೋಣ ಎನಿಸಿತು. ನಿರ್ದೇಶಕರು ಬೇಡ ಎಂದರು. ನಂತರ ಅವರನ್ನು ಒಪ್ಪಿಸಿದ್ದೆವು. ಈಗ ಹಾಡು ಸಿದ್ದಾವಾಗಿ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಹಾಡು ಚೆನ್ನಾಗಿ ಬರಲು ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿದರು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ.

ನನ್ನ ಯಾವುದೇ ಚಿತ್ರದ ಹಾಡಿನ ಚಿತ್ರೀಕರಣಕ್ಕೆ ಮುನ್ನ ಕೆಲವು ದಿನಗಳ ಅಭ್ಯಾಸ ಮಾಡುತ್ತೇನೆ ಎಂದು ಮಾತನಾಡಿದ ನಟ ಶರಣ್, ಈ ಹಾಡನ್ನು ತಕ್ಷಣ ಚಿತ್ರೀಕರಣ ಮಾಡೋಣ ಎಂದಾಗ ಹೂ ಅಂದು ಬಿಟ್ಟೆ. ನಂತರ ಅಭ್ಯಾಸವಿಲ್ಲದೆ ತಕ್ಷಣ ಚಿತ್ರೀಕರಣ ಹೇಗೆ ಮಾಡುವುದು ಹೇಗೆ? ಅಂದುಕೊಂಡು, ನಿರ್ಮಾಪಕರನ್ನು ಕೇಳಿದೆ. ಅವರು ನನಗೆ ಈ ಹಾಡಿನಲ್ಲಿ ಹೆಚ್ಚು ಕುಣಿಯುವುದು ಇಲ್ಲ ಅಂದರು. ಆನಂತರ ಹಾಡುತ್ತಿರುವುದು ಬಿಜ್ಜು ಹಾಗೂ ತಂಡದವರು ಎಂದು ತಿಳಿಸಿದರು. ಆಗ ನನಗೆ ಧೈರ್ಯ ಬಂತು.

ಬೇಗ ಚಿತ್ರೀಕರಣವಾದರೂ ಈ ಹಾಡು ತುಂಬಾ ಚೆನ್ನಾಗಿ ಬಂದಿದೆ. ಎಂ.ಸಿ.ಬಿಜ್ಜು ಅವರು ತಮ್ಮದೇ ಆದ ರಾಪ್ ಶೈಲಿಯಲ್ಲಿ ಮಧುರವಾಗಿ ಹಾಡಿದ್ದಾರೆ. ಅವರ ಜೊತೆಗೆ ಔರಾ ಹಾಗೂ ಸಂಗೀತ ನಿರ್ದೇಶಕ ಅಭಿನಂದನ್ ಕೂಡ ಹಾಡಿಗೆ ದನಿಯಾಗಿದ್ದಾರೆ. ಏಪ್ರಿಲ್ 5. ಚಿತ್ರ ತೆರೆಗೆ ಬರಲಿದೆ. ನಿಮ್ಮೆಲ್ಲರ ಬೆಂಬಲವಿರಲಿ ಎಂದರು.ಶರಣ್, ಆಶಿಕಾ ರಂಗನಾಥ್, ಶ್ರೀನಗರ ಕಿಟ್ಟಿ, ಸಾಯಿಕುಮಾರ್, ಸಾಧುಕೋಕಿಲ, ಸುಧಾರಾಣಿ, ಭವ್ಯ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು