LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

ದೈಹಿಕವಾಗಿ ಸದೃಢವಾದ ವ್ಯಕ್ತಿ ಮಾನಸಿಕವಾಗಿ ಸದೃಢವಾಗಿರಲು ಸಾಧ್ಯ: ಸಭಾಪತಿ

ಬೆಂಗಳೂರು: ವಿದ್ಯಾರ್ಥಿಗಳು ಏನು ಬೇಕಾದರೂ ಆಗಲಿ, ಆದರೆ ಮೊದಲು ದೈಹಿಕವಾಗಿ ಸದೃಢವಾಗಿ ಆರೋಗ್ಯ ಹೊಂದಿದಾಗ ಮಾತ್ರ, ಮಾನಸಿಕವಾಗಿ ಸದೃಢರಾಗಿರಲು ಸಾಧ್ಯ ಹೀಗಾಗಿ ದೈಹಿಕ ಶಿಕ್ಷಣವನ್ನು ಕಡೆಗಣಿಸದೆ, ದೈಹಿಕ ಚಟುವಟಿಕೆ ಹಾಗೂ ಆಟಗಳಲ್ಲಿ ಪಾಲ್ಗೊಳ್ಳಬೇಕಾದ ಸನ್ನಿವೇಶ ಈಗ ಎದುರಾಗಿದೆ ಎಂದು ಸಭಾಪತಿ ಬಸವರಾಜ ಎಸ್ ಹೊರಟ್ಟಿ ಅಭಿಪ್ರಾಯಪಟ್ಟರು.ಬೆಂಗಳೂರಿನ ಅರಮನೆ ರಸ್ತೆಯ ಸ್ಕೌಟ್ ಅಂಡ್ ಗೈಡ್ಸ್ ಆಡಿಟೋರಿಯಂ ನಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ಅಲೂಮ್ನಿ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ “ ದೈಹಿಕ ಶಿಕ್ಷಣದಿಂದ ಶಾಲಾ ಮಕ್ಕಳಲ್ಲಿ ಆರೋಗ್ಯ ಸ್ವಾಸ್ಥ÷್ಯ “ ಎಂಬ ಕಾರ್ಯಗಾರದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಭಾರತ ದೇಶದಲ್ಲಿಯೇ ಶಿಕ್ಷಣ ಕ್ಷೇತ್ರದಲ್ಲಿ ಎಂಟು ಬಾರಿ ಎಂಎಲ್ಸಿಯಾಗಿ ನಾನು ಆಯ್ಕೆಯಾಗಿದ್ದು, ಒಂದು ಇತಿಹಾಸ ಎಂದು ಹೇಳಿದ ಅವರು, ನಾನು ಶಿಕ್ಷಣ ಸಚಿವನಾಗಿದ್ದಾಗ 48313 ಶಿಕ್ಷಕರನ್ನು ನೇಮಕ ಮಾಡಿದ್ದೆ.
ಆ ಸಮಯದಲ್ಲಿ ದೈಹಿಕ ಶಿಕ್ಷಕರನ್ನು ನಾನ್ ಟೀಚಿಂಗ್ ಸ್ಟಾಪ್ ನಲ್ಲಿ ಇಟ್ಟಿದ್ದರು. ನನ್ನ ಅಧಿಕಾರದ ಅವಧಿಯಲ್ಲಿಯೇ ಪ್ರೊಫೆಸರ್ ಎಲ್ ಆರ್ ವೈದ್ಯನಾಥನ್ ಕಮಿಟಿಯನ್ನ ನೇಮಕ ಮಾಡಿ ಆರರಿಂದ ಒಂಬತ್ತನೇ ತರಗತಿಯವರೆಗೂ ದೈಹಿಕ ಶಿಕ್ಷಣ ಪಾಠ ಮಾಡುವ ಹಾಗೂ ಎಕ್ಸಾಮ್ ಕಂಡಕ್ಟ್ ಮಾಡುವ ಸಿಸ್ಟಮ್ ಅನ್ನು ನಾವೇ ಜಾರಿಗೆ ತಂದಿದ್ದು,
ಈ ವಿಚಾರವನ್ನು ಇಂಪ್ಲಿಮೆAಟ್ ಮಾಡಲು 9 ಕೋಟಿ ಹಣವನ್ನು ಸಹ ಬಿಡುಗಡೆ ಮಾಡಿದ್ದು, ಕರ್ನಾಟಕ ರಾಜ್ಯದಾದ್ಯಂತ ಸಂಚರಿಸಿ, ಪೋಷಕರು, ಶಾಲಾ ಕಾಲೇಜು ವಿಶ್ವವಿದ್ಯಾನಿಲಯಗಳ 30,000 ಅಭಿಪ್ರಾಯಗಳ ಸಂಗ್ರಹಿಸಿ, ದೈಹಿಕ ಶಿಕ್ಷಣವನ್ನು ಕಂಪಲ್ಸರಿ ಸಬ್ಜೆಕ್ಟ್ ಮಾಡಿ ದೈಹಿಕ ಶಿಕ್ಷಕರನ್ನು ಸಹ ಶಿಕ್ಷಕರು ಎಂತಲೂ ಪರಿಗಣಿಸಿ “ಆರೋಗ್ಯದಡಕ್ಕೆ ಒಂದು ಹೆಜ್ಜೆ ಮುಂದೆ “ ಎನ್ನುವ ನಿಟ್ಟಿನಲ್ಲಿ ಕ್ರಮವಹಿಸಿದ್ದೆ. ಆದರೆ ಇತ್ತೀಚಿನ ದಿನಗಳಲ್ಲಿ ಮೌಲ್ಯ ಶಿಕ್ಷಣವನ್ನು ಜಾರಿಗೆ ತರಬೇಕೆನ್ನುವ ತರಾತುರಿಯಲ್ಲಿ, ದೈಹಿಕ ಶಿಕ್ಷಣವನ್ನು ಮಾರ್ಪಡಿಸಿ, ಮೌಲ್ಯ ಶಿಕ್ಷಣ ಎಂದು ಪರಿವರ್ತಿಸಿರುವುದು ಅಕ್ಷಮ್ಯ. ಇದರಲ್ಲಿ ಅಧಿಕಾರಿಗಳ ಬೇ ಜವಾಬ್ದಾರಿತನ ಹಾಗೂ ಅವರಿಗೆ ದೈಹಿಕ ಶಿಕ್ಷಣ ವಿಷಯದ ಬಗ್ಗೆ ಇರುವ ಜ್ಞಾನದ ಕೊರತೆ ಎದ್ದು ಕಾಣುತ್ತದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.ಈ ನಿಟ್ಟಿನಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಹೈಯರ್ ಎಜುಕೇಶನ್ ನ ರಶ್ಮಿ ಮೇಡಂ ರನ್ನು ಕರೆದು ಮಾತನಾಡಿದ್ದೇನೆ. ದೈಹಿಕ ಶಿಕ್ಷಣವನ್ನು ಮೌಲ್ಯ ಶಿಕ್ಷಣವೆಂದು ಮಾರ್ಪಡಿಸಿರುವುದು ಬೇಡ ಎಂದು ಅವರಿಗೆ ನಿರ್ದೇಶನ ನೀಡಿದ್ದು, ಸರ್ಕಾರಿ ಶಾಲೆ ಹಾಗೂ ಕಾಲೇಜುಗಳಲ್ಲಿ ದೈಹಿಕ ಶಿಕ್ಷಕರನ್ನು ನೇಮಿಸಲು ಕ್ರಮ ವಹಿಸುವಂತೆ ಆಗ್ರಹಿಸಿದ್ದೇನೆ. ಅದಕ್ಕೆ ಅವರೂ ಸಹ ಸ್ಪಂದಿಸಿದ್ದಾರೆ ಎಂದು ಹೊರಟ್ಟಿ ಯವರು ಹೇಳಿದರು.ಇದೇ ಸಂದರ್ಭದಲ್ಲಿ ಸರ್ಕಾರಿ ಪ್ರೌಢ ಶಾಲೆ, ಪಿ ಯು ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ದೈಹಿಕ ಶಿಕ್ಷಕರು ಮತ್ತು ಗ್ರಂಥಪಾಲಕರನ್ನು ನೇಮಿಸುವಂತೆ ರೆಸಲ್ಯೂಷನ್ ಅನ್ನು ಮಂಡಿಸಲಾಯಿತು.
ಇದೇ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಮಹಿಳಾ ಅಥ್ಲೀಟ್ ಬಿಂದು ರಾಣಿ ಮಾತನಾಡಿ, ಸಾಧಿಸುವ ಗುರಿಯೊಂದಿಗೆ ಸಾಧಿಸಬಲ್ಲೆ ಎಂಬ ಇಚ್ಚಾ ಶಕ್ತಿಯೂ ಕೂಡ ಇದ್ದಾಗ ಮಾತ್ರ ಏನನ್ನೂ ಸಾಧಿಸಲು ಸಾಧ್ಯವಾಗುತ್ತದೆ.
ಶಾಲೆಗಳಲ್ಲಿ ಮಕ್ಕಳಲ್ಲಿ ಶಿಸ್ತು ಮೂಡಲು, ಹಾಗೂ ದೈಹಿಕ ಮತ್ತು ಮಾನಸಿಕವಾಗಿ ಸದೃಢತೆಯನ್ನು ಹೊಂದಲು ದೈಹಿಕ ಶಿಕ್ಷಕರ ಪಾತ್ರ ಅತೀ ಹೆಚ್ಚಿದೆ ಎಂದು ಅವರು ಅಭಿಪ್ರಾಯಪಟ್ಟರು. ಇಂದು ದೈಹಿಕ ಶಿಕ್ಷಣದ ನಿರ್ಲಕ್ಷ÷್ಯದಿಂದಾಗಿ 10 ಮಕ್ಕಳಲ್ಲಿ ಎಂಟು ಮಕ್ಕಳಿಗೆ ಬೊಜ್ಜು ಇರುವುದು ಸಂಶೋಧನೆಗಳಿAದ ಸಾಬೀತಾಗಿದೆ ಎಂದು ಅವರು ಹೇಳಿದರು.
ಈ ದಿಸೆಯಲ್ಲಿ ಶಾಲಾ ಕಾಲೇಜುಗಳಲ್ಲಿ, ಮಕ್ಕಳಲ್ಲಿ ಆರೋಗ್ಯದ ಪರಿಕಲ್ಪನೆಯನ್ನು ಮೂಡಿಸುವ ಸಲುವಾಗಿ ದೈಹಿಕ ಶಿಕ್ಷಣದ ತರಗತಿಗಳನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕಾದ ಸಂದರ್ಭ ಇಂದು ಅತ್ಯಂತ ಇದೆ ಎಂದು ಅವರು ಅಭಿಮತ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣ ತಜ್ಞ ಡಾ. ಸುಂದರರಾಜ ಅರಸ್, ನಿಮ್ಹಾನ್ಸ್ ಮನಶಾಸ್ತ್ರಾಜ್ಞೆ ಮೇಘನಾ, ಪ್ರಾಂಶುಪಾಲ ಪಿ ಸಿ ಕೃಷ್ಣಸ್ವಾಮಿ, ಖೊ ಖೊ ಫೆಡರೇಷನ್ ರಾಷ್ಟ್ರೀಯ ಉಪಾಧ್ಯಕ್ಷ ಲೋಕೇಶ್ವರ್, ಕರ್ನಾಟಕ ಹೈಯರ್ ಎಜುಕೇಶನ್ ಕೌನ್ಸಿಲ್ ಮೆಂಬರ್ ಪ್ರೊಫೆಸರ್ ಟಿ ಡಿ ಕೆಂಪರಾಜು, ಬೆಂಗಳೂರು ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ಸಂಘದ ಅಲುಮಿನಿ ಅಸೋಸಿಯೇಷನ್ ಕಾರ್ಯದರ್ಶಿ ಡಾ. ಆರ್ ಶ್ರೀಕಾಂತ್, ಸಾಹಿತಿ,ಡಾ. ಸತ್ಯಮೂರ್ತಿ ಗೂಗಿ, ಡಾ. ಸುಶಾಂತ್ ಎಸ್ ಪಾಟೀಲ್, ಡಾ. ಶಶಿಧರ್ ಎ. ಕೆಲ್ಲೂರ , ಡಾ ವೆಂಕಟೇಶ್,ಡಾ ನಾಗೇಶ್, ಡಾ. ಶಶಿಕುಮಾರ್, ಮಹದೇವಸ್ವಾಮಿ, ದೈಹಿಕ ಶಿಕ್ಷಣ ಸಂಘದ ಚೌಡಪ್ಪ ಸೇರಿದಂತೆ ಹಲವು ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು