LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಮುಗ್ಧ ಯುವಕನ ಪ್ರೇಮಕಥೆ!

ನಮ್ಮೂರಲ್ಲಿ.. ಈ ವಾರ ತೆರೆಗೆ 


ಭವ್ಯಶ್ರೀ ಫಿಲಂಸ್ ನಿರ್ಮಾಣದ, ತಾಯಿ ಮಗನ ಬಾಂದವ್ಯದ ಜತೆಗೆ ಸುಂದರವಾದ ಪ್ರೇಮ ಕಥೆಯನ್ನು ಒಳಗೊಂಡ ಚಿತ್ರ ‘ನಮ್ಮೂರಲ್ಲಿ’. ಮಹೇಶ್ ಕೋಲಾರ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಎಂಟು ವರ್ಷಗಳ ಹಿಂದೆ ತೆರೆಕಂಡಿದ್ದ ಈ ಚಿತ್ರವು ತಾಂತ್ರಿಕ ಕಾರಣಗಳಿಂದ ಒಂದೇದಿನ ಪ್ರದರ್ಶನವಾಗಿ ಸ್ಥಗಿತಗೊಂಡಿತ್ತು. ಇದೀಗ ಪ್ರೇಮದ ಊರಲಿ ಚಿತ್ರವನ್ನು ಪ್ರೇಕ್ಷಕರು  ಯಶಸ್ವಿಗೊಳಿಸಿದ ಹಿನ್ನೆಲೆಯಲ್ಲಿ, ಅದೇ ಥರದ ಕಂಟೆಂಟ್ ಒಳಗೊಂಡ ನಮ್ಮೂರಲ್ಲಿ  ಚಿತ್ರವನ್ನು ನಿರ್ಮಾಪಕರು ರೀರಿಲೀಸ್ ಮಾಡಲು ಹೊರಟಿದ್ದಾರೆ. ಹಾಗಾಗಿ ‘ನಮ್ಮೂರಲ್ಲಿ’ ಚಿತ್ರವು ಇದೇ ತಿಂಗಳ 27ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಕಾಣಲಿದೆ. ಮುಗ್ಧ ಹುಡುಗನೊಬ್ಬ ಯುವತಿಯೊಬ್ಬಳ ಪ್ರೀತಿಯ ಬಲೆಯಲ್ಲಿ ಬಿದ್ದಾಗ ಏನೆಲ್ಲ ನಡೆದು ಹೋಗುತ್ತದೆ, ಆ ತಾಯಿ, ಮಗನಿಗೆ ಯುವತಿಯ ಮನೆಯವರು ಯಾವ ರೀತಿ ನೋವನ್ನು ಕೊಡುತ್ತಾರೆ ಎಂಬುದನ್ನು ನಮ್ಮೂರಲ್ಲಿ ಚಿತ್ರದ ಮೂಲಕ ನಿರ್ದೇಶಕ ಎಲ್.ಮಹೇಶ್ ಕೋಲಾರ ಅವರು ಹೇಳಹೊರಟಿದ್ದಾರೆ. ಯಾವುದೇ ಡಬಲ್ ಮೀನಿಂಗ್, ಅಶ್ಲೀಲ ಸಂಭಾಷಣೆ ಇಲ್ಲದ ಪಕ್ಕಾ ಹಳ್ಳಿ ಸೊಗಡಿನ, ನಮ್ಮ ಕನ್ನಡ ಮಣ್ಣಿನ ಉತ್ತಮವಾದ ಕಥಾನಕ ಈ ಚಿತ್ರದಲ್ಲಿದ್ದು, ಕುಟುಂಬ ಸಮೇತ ಬಂದು  ನೋಡುವಂತ ಉತ್ತಮ ಸದಭಿರುಚಿಯ ಚಿತ್ರವೂ ಇದಾಗಿದೆ ಎಂದು ನಿರ್ಮಾಪಕರು ಹೇಳಿದ್ದಾರೆ. ನಮ್ಮೂರಲ್ಲಿ  ಚಿತ್ರದಲ್ಲಿ  ನಾಯಕನಾಗಿ ಶೇಖರ್ ರಾಜ್ ಹಾಗೂ ನಾಯಕಿಯಾಗಿ ರಚಿತಾಗೌಡ ಅವರು ನಟಿಸಿದ್ದು, ತನುಜಾ, ವಿಶಾಲ್, ಕಬಾಬ್ ಮಂಜು, ನಾಗೇಂದ್ರ, ಪುಷ್ಪ ದಿವಾಕರ್ ಉಳಿದ ತಾರಾಗಣದಲ್ಲಿದ್ದಾರೆ. ಮಂಜು ಅವರ ಸಂಭಾಷಣೆ, ರಾಜು ಶಿರಾ ಅವರ ಛಸಯಾಗ್ರಹಣ, ಹರ್ಷ ಕೋಗೂಡು ಅವರ ಸಂಗೀತ, ಥ್ರಿಲ್ಲರ್ ಮಂಜು ಅವರ ಸಾಹಸ, ಕುಮಾರ್ ಸಿ.ಹೆಚ್.ಅವರ ಸಂಕಲನ ಈ ಚಿತ್ರಕ್ಕಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST