LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಹೊಂಬಾಳೆ ಫಿಲ್ಮ್ಸ್ ನಿಂದ ಮತ್ತೊಂದು ನೂತನ ಪ್ರಯೋಗ:

ಯುವ ಪೀಳಿಗೆಯನ್ನು ಸೆಳೆಯಲು ಸಜ್ಜಾದ ``YETO KA NAAY' ' ಹಿಪ್-ಹಾಪ್ ಮ್ಯೂಸಿಕಲ್ ಸಿನಿಮಾ!
ಭಾರತೀಯ ಚಿತ್ರರಂಗದಲ್ಲಿ ಸದಾ ವಿಭಿನ್ನ ಹಾಗೂ ಪ್ರಭಾವಶಾಲಿ ಕಥಾಹಂದರಗಳ ಮೂಲಕ ಮೈಲಿಗಲ್ಲು ಸ್ಥಾಪಿಸಿರುವ ಹೆಮ್ಮೆಯ ನಿರ್ಮಾಣ ಸಂಸ್ಥೆ `ಹೊಂಬಾಳೆ ಫಿಲ್ಮ್ಸ್', ಇದೀಗ ಮತ್ತೊಂದು ನೂತನ ಹಾಗೂ ಮಹತ್ವಾಕಾಂಕ್ಷಿ ಚಿತ್ರವನ್ನು ಅಧಿಕೃತವಾಗಿ ಘೋಷಿಸಿದೆ.
`ಕೆಜಿಎಫ್' ಮತ್ತು `ಸಲಾರ್' ನಂತಹ ಹೈ-ವೋಲ್ಟೇಜ್ ಮಾಸ್ ಆಕ್ಷನ್ ಚಿತ್ರಗಳು, ನಮ್ಮ ಮಣ್ಣಿನ ಸಾಂಸ್ಕೃತಿಕ ಬೇರುಗಳನ್ನು ಜಗತ್ತಿಗೆ ಪರಿಚಯಿಸಿದ `ಕಾಂತಾರ', ಭವ್ಯ ಅನಿಮೇಷನ್ ಲೋಕದ `ಮಹಾವತಾರ ನರಸಿಂಹ' ಹಾಗೂ ಕೌಟುಂಬಿಕ ಭಾವನೆಯ `ರಾಜಕುಮಾರ' ಚಿತ್ರಗಳ ಮೂಲಕ ನಮ್ಮ ಹೆಮ್ಮೆಯ ಹೊಂಬಾಳೆ ಫಿಲ್ಮ್ಸ್ ಸಾರ್ವತ್ರಿಕವಾಗಿ ಪ್ರೇಕ್ಷಕರ ಮನಗೆದ್ದಿದೆ.
ಪ್ರತಿಯೊಂದು ಚಿತ್ರದಲ್ಲೂ ಹೊಸತನವನ್ನು ಪರಿಚಯಿಸುವ ತನ್ನ ಪರಂಪರೆಯನ್ನು ಮುಂದುವರಿಸಿರುವ ಸಂಸ್ಥೆ, ಇದೀಗ ಇಂದಿನ ಯುವ ಪೀಳಿಗೆ ಹಾಗೂ `ಜೆನ್ ಜಿ' ಪ್ರೇಕ್ಷಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಸಂಪೂರ್ಣ ಕಂಟೆAಟ್ ಆಧಾರಿತ ಹಿಪ್-ಹಾಪ್ ಮ್ಯೂಸಿಕಲ್ ಕಥಾಹಂದರ ಹೊಂದಿರುವ `ಙಇಖಿಔ ಏಂ ಓಂAಙ' ಚಿತ್ರವನ್ನು ಘೋಷಿಸಿದೆ. ಸಂಪೂರ್ಣವಾಗಿ ಮುಂಬೈ ನಗರದ ಹಿನ್ನೆಲೆಯಲ್ಲಿ ಮೂಡಿಬರಲಿರುವ ಈ ಚಿತ್ರದ ಹಿಂದಿ ಅವತರಣಿಕೆಯನ್ನು `YETO KA NAAY' ಹೆಸರಿನಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗುತ್ತಿದ್ದು, ಇದು ಭಾರತೀಯ ಸಿನಿಮಾ ರಂಗದಲ್ಲಿ ಹೊಸದೊಂದು ಸಂಗೀತದ ಜರ್ನಿಗೆ ಮುನ್ನುಡಿ ಬರೆಯಲಿದೆ.
ವಿಜಯ್ ಕಿರಗಂದೂರು ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಸಾರಂಗ್ ಸಂಜೀವ್ ಸಾಠಾಯೆ ನಿರ್ದೇಶನವಿದ್ದು, ಸಾರಂಗ್ ಸಾಠಾಯೆ, ಸುಜಯ್ ಜಾಧವ್, ಸೃಷ್ಟಿ ತಾವಡೆ ಮತ್ತು ಶ್ರೇಯಸ್ ಸಾಗ್ವೇಕರ್ ಅವರು ಜಂಟಿಯಾಗಿ ಚಿತ್ರಕಥೆ ರಚಿಸಿದ್ದಾರೆ. ಎ.ವಿ. ಪ್ರಫುಲ್ಲಚಂದ್ರ ಅವರ ಸಂಗೀತ ನಿರ್ದೇಶನ ಹಾಗೂ ಹರ್ಷವೀರ್ ಒಬೆರಾಯ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಪ್ರಸ್ತುತ ಮುಂಬೈನಲ್ಲಿ ಚಿತ್ರೀಕರಣವು ಭರದಿಂದ ಸಾಗುತ್ತಿದ್ದು, ಪ್ರಸಕ್ತ ವರ್ಷದ ಅಂತ್ಯದೊಳಗೆ ಚಿತ್ರವನ್ನು ಬೆಳ್ಳಿತೆರೆಗೆ ತರಲು ಚಿತ್ರತಂಡ ಯೋಜಿಸಿದೆ.
ಇದೇ ಸಂದರ್ಭದಲ್ಲಿ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಆಂತರಿಕ ಮೂಲಗಳಿಂದ ಮಹತ್ವದ ಮಾಹಿತಿಯೊಂದು ಲಭ್ಯವಾಗಿದ್ದು, ಸಂಸ್ಥೆಯು ಪ್ರಸ್ತುತ ಕನ್ನಡದ ವೈವಿಧ್ಯಮಯ ಹಾಗೂ ವಿಭಿನ್ನ ಕಥಾಹಂದರಗಳನ್ನು ಸತತವಾಗಿ ಆಲಿಸುತ್ತಿದೆ. ಸ್ಯಾಂಡಲ್‌ವುಡ್‌ನಲ್ಲಿ ಶೀಘ್ರದಲ್ಲೇ ಕಂಟೆAಟ್ ಆಧಾರಿತ ವಿಶಿಷ್ಟ ಕನ್ನಡ ಚಿತ್ರಗಳನ್ನು ಪ್ರಕಟಿಸಲು ಸಂಸ್ಥೆಯು ಯೋಜಿಸುತ್ತಿದ್ದು, ಕನ್ನಡಿಗರಿಗೆ ಮತ್ತಷ್ಟು ಉನ್ನತ ಗುಣಮಟ್ಟದ ಸಿನಿಮಾಗಳನ್ನು ನೀಡಲು ಹೊಂಬಾಳೆ ಫಿಲ್ಮ್÷್ಸ ಸನ್ನದ್ಧವಾಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು