LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Ramanagara

ರಂಗ ಕಲೆಗಳನ್ನು ಜೀವಂತಗೊಳಿಸಲು ಶ್ರಮಿಸೋಣ: ಅಶೋಕ್

ಮಾಗಡಿ: ಗ್ರಾಮೀಣ ಸೊಗಡಿನ ರಂಗ ಕಲೆಗಳನ್ನು ಜೀವಂತಗೊಳಿಸಲು ಗ್ರಾಮೀಣರಾದ ನಾವು ನೀವೆಲ್ಲರೂ ಶ್ರಮಿಸೋಣ ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದಹೆಚ್.ಎನ್.ಅಶೋಕ್(ತಮ್ಮಾಜಿ)ಹೇಳಿದರು.

ಪಟ್ಟಣದ ಕೆಂಪೇಗೌಡ ಬಯಲು ರಂಗ ಮಂದಿರದಲ್ಲಿ ಮಾಗಡಿ ಕೆಂಪೇಗೌಡ ಸಾಂಸ್ಕೃತಿಕ ಕಲಾ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಮಾಜಿ ಸಚಿವ ಹೆಚ್.ಜಿ.ಚನ್ನಪ್ಪ ಮಾಜಿ ತಾಲ್ಲೂಕು ಬೋರ್ಡ್ ಅದ್ಯಕ್ಷ ಹೆಚ್.ಜಿ.ನರಸಪ್ಪ ಅವರ ಸವಿನೆನಪಿಗಾಗಿ ರಾಮನಗರ ಜಿಲ್ಲಾ ಮಟ್ಟದ ಗ್ರಾಮೀಣ ನಾಟಕೋತ್ಸವ ಸ್ಪರ್ದೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಯೋಜಕರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ.

ಅವರು ನಮ್ಮ ತಂದೆ ನರಸಪ್ಪ ನಮ್ಮ ಚಿಕ್ಕಪ್ಪ ಹೆಚ್.ಜಿ.ಚನ್ನಪ್ಪ ಅವರು ನಿಧನರಾಗಿ ಸುಮಾರು ಮೂವತ್ತು ನಲವತ್ತು ವರ್ಷಗಳು ಕಳೆದರೂ ಸಹ ಅವರ ಸವಿ ನೆನಪಿನಲ್ಲಿ ಈ ಕಾರ್ಯಕ್ರಮ ಆಯೋಜಿಸುತ್ತಿರುವುದಕ್ಕಾಗಿ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸುತ್ತೇನೆ.

ಜೀವಂತವಾಗಿರುವವರನ್ನು ನೆನಪಿಸಿಕೊಳ್ಳುವುದೇ ಕಷ್ಠದ ದಿನಗಳಾದ ಇಂದಿನ ದಿನಗಳಲ್ಲಿ ದೈವಾಧೀನರಾಗಿರುವ ನಮ್ಮ ಕುಟುಂಬದ ಹಿರಿಯರ ನೆನಪಿನಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ಅವರ ಸಾಮಾಜಿಕ ಕಾರ್ಯಕ್ರಮಗಳೇ ಪ್ರತ್ಯಕ್ಷ ಸಾಕ್ಷಿಯಾಗಿವೆ.ಇಂದಿನ ಆಧುನಿಕ ಯುಗದಲ್ಲಿ ಟಿವಿ,ಮೊಬೈಲ್,ಮಾದ್ಯಮಗಳ ಹಾವಳಿಯಿಂದ ಅವಸಾನದ ಅಂಚಿನಲ್ಲಿರುವ ಗ್ರಾಮೀಣ ಸೊಗಡಿನ ರಂಗ ಕಲೆಗಳನ್ನು ಉಳಿಸುವ ಪ್ರಯತ್ನ ಶ್ಲಾಘನೀಯ.ಸುಮಾರು ಹನ್ನೆರಡು ದಿನಗಳ ಕಾಲ ವಿವಿಧ ನಾಟಕಗಳು ವಿವಿಧ ನಾಟಕ ನಿರ್ದೇಶಕರಿಂದ ಪ್ರದರ್ಶನಗೊಳ್ಳುತ್ತಿರುವುದು ಉತ್ತಮವಾದ ಬೆಳವಣಿಗೆ ಎಂದು ಅಶೋಕ್ ತಿಳಿಸಿದರು.

ಮಾಗಡಿ ಕೆಂಪೇಗೌಡ ಸಾಂಸ್ಕೃತಿಕ ಕಲಾ ಸಂಘದ ಅದ್ಯಕ್ಷ ಬೆಳಗವಾಡಿ ಕೃಷ್ಣಪ್ಪ,ಗ್ರಾಪಂ ಮಾಜಿ ಅಧ್ಯಕ್ಷ ಬೆಳಗವಾಡಿ ರಂಗನಾಥ್,ಜಿಲ್ಲಾ ಕಿಸಾನ್ ಕಾಂಗ್ರೆಸ್ ಅದ್ಯಕ್ಷ ಆಗ್ರೋ ಪುರುಷೋತ್ತಮ್,ಭೂಬ್ಯಾಂಕ್ ನಿರ್ದೇಶಕ ಹೆಬ್ಬಾಳಪಾಳ್ಯ ನಾಗರಾಜು,ಕಲ್ಯಾಗೇಟ್ ನವೀನ್ ಸೇರಿದಂತೆ ಮತ್ತಿತರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು